ಮುಂಬೈ : ಹಬ್ಬಗಳ ಹಿನ್ನೆಲೆ ಅಕ್ಟೋಬರ್ ಕೊನೆಯ ವಾರದಲ್ಲಿ ದೂರದರ್ಶನ ಜಾಹಿರಾತುಗಳು ಐದು ವರ್ಷಗಳಲ್ಲೇ ಗರಿಷ್ಟ ಮಟ್ಟವನ್ನು ತಲುಪಿದೆ ಎಂದು ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್- BARC) ತಿಳಿಸಿದೆ.
ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇಕಡಾ 10 ರಷ್ಟು ಸಂಕುಚಿತತೆಯನ್ನು ಕಂಡು ಆರ್ಥಿಕತೆಯ ಮೇಲೆ ದೊಡ್ಡಮಟ್ಟದ ಪ್ರಭಾವ ಬೀರುತ್ತಿರುವ ನಡುವೆ ಬಾರ್ಕ್ ಈ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಆದರೆ, ವಿವಿಧ ಚಾನೆಲ್ಗಳ ಲಾಭದ ಬಗ್ಗೆ ತಿಳಿಸಿಲ್ಲ.
ವಿವಿಧ ಹಬ್ಬಗಳು, ಐಪಿಎಲ್ನಂತ ದೊಡ್ಡಮಟ್ಟದ ಕಾರ್ಯಕ್ರಮಗಳ ಪರಿಣಾಮದಿಂದ ಜಾಹಿರಾತಿನಲ್ಲಿ ಏರಿಕೆ ಕಂಡು ಬಂದಿದೆ. ನವೆಂಬರ್ ಕೊನೆಯ ವಾರದಲ್ಲಿ ಟಿವಿ ಚಾನೆಲ್ಗಳು 38.7 ಮಿಲಿಯನ್ ಸೆಂಕೆಂಡುಗಳಷ್ಟು ಸಮಯದ ಜಾಹಿರಾತನ್ನು ಪ್ರಸಾರ ಮಾಡಿದೆ. ಈ ಮೂಲಕ 2015 ರ ದಾಖಲೆಯನ್ನು ಸರಿಗಟ್ಟಿದೆ.
ನವೆಂಬರ್ ಕೊನೆಯ ವಾರಕ್ಕಿಂತ ಹಿಂದಿನ ವಾರದಲ್ಲಿ ಒಟ್ಟು 37.9 ಸೆಕೆಂಡುಗಳ ಜಾಹಿರಾತು ಪ್ರಸಾರ ಮಾಡಲಾಗಿತ್ತು. ವಾರದ ಅಂಕಿ ಸಂಖ್ಯೆಗೆ ಹೋಲಿಸಿದರೆ 2018 ರ 43 ನೇ ವಾರದ 36.6 ಸೆಕೆಂಡುಗಳಿಗಿಂತ ಇದು ಹೆಚ್ಚಾಗಿದೆ.
ಅಮೆರಿಕದ ಇ-ಕಾಮರ್ಸ್ ದೈತ್ಯ ಅಮೆಜಾನ್ ಈ ವಾರದಲ್ಲಿ ಜಾಹೀರಾತು ನೀಡಿದ ಅತಿದೊಡ್ಡ ಬ್ರಾಂಡ್ ಆಗಿದ್ದು, ನಂತರದ ಸ್ಥಾನಗಳಲ್ಲಿ ಡೆಟಾಲ್ ಲಿಕ್ವಿಡ್ ಮತ್ತು ಸರ್ಫ್ ಎಕ್ಸೆಲ್ ಇದೆ. ಕಂಪನಿಗಳಲ್ಲಿ, ಎಫ್‌ಎಂಸಿಜಿ ಪ್ರಮುಖ ಹಿಂದೂಸ್ತಾನ್ ಯೂನಿಲಿವರ್ ಮತ್ತು ನಂತರದ ಸ್ಥಾನಗಳಲ್ಲಿ ರೆಕ್ಕಿಟ್ ಬೆನ್‌ಕಿಸರ್ ಮತ್ತು ತಂಬಾಕು ಉತ್ಪನ್ನಗಳ ಪ್ರಮುಖ ಐಟಿಸಿ ಇದೆ ಎಂದು ಬಾರ್ಕ್ ತಿಳಿಸಿದೆ.