ETV Bharat / business

2021ರಲ್ಲಿ ಖಾಸಗಿ ನೌಕರರ ವೇತನದಲ್ಲಿ ಭಾರಿ ಏರಿಕೆ : ಚೀನಾ, ರಷ್ಯಾ​ಗಿಂತ ಭಾರತದಲ್ಲಿ ಅತ್ಯಧಿಕ

author img

By

Published : Feb 24, 2021, 4:41 PM IST

ಸಮೀಕ್ಷೆ ನಡೆಸಿದ 88 ಪ್ರತಿಶತ ಕಂಪನಿಗಳು 2021ರ ವೇಳೆಗೆ ವೇತನ ಹೆಚ್ಚಿಸಲು ಯೋಜಿಸಿವೆ. 2020ರಲ್ಲಿ ಶೇ.75ರಷ್ಟು ಕಂಪನಿಗಳು ವೇತನ ಹೆಚ್ಚಿಸಲು ಒಲವು ತೋರಿವೆ. ಆರ್ಥಿಕತೆಯು ಗಮನಾರ್ಹವಾಗಿ ಚೇತರಿಸಿಕೊಳ್ಳುವುದರಿಂದ ಅನೇಕ ಕಂಪನಿಗಳು ವೇತನ ಹೆಚ್ಚಳ ಪರಿಗಣಿಸುತ್ತಿವೆ ಎಂದು ಸಮೀಕ್ಷೆ ಕಂಡು ಕೊಂಡಿದೆ..

salary
salary

ನವದೆಹಲಿ : ಭಾರತದಲ್ಲಿ ವೇತನವು ಈ ವರ್ಷ ಸರಾಸರಿ ಶೇ.7.7ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ವರದಿಯೊಂದು ತಿಳಿಸಿದೆ.

ಎಲ್ಲಾ ಬ್ರಿಕ್ಸ್​ (ಭಾರತ, ರಷ್ಯಾ, ದಕ್ಷಿಣ ಆಫ್ರಿಕಾ, ಬ್ರೆಜಿಲ್​ ಹಾಗೂ ಚೀನಾ) ರಾಷ್ಟ್ರಗಳ ಪೈಕಿ ಭಾರತವು ಅತಿ ಹೆಚ್ಚು ವೇತನ ಹೆಚ್ಚಳ ಹೊಂದಿದೆ. ಭಾರತದಲ್ಲಿ ವೇತನವು 2021ರ ವೇಳೆಗೆ ಸರಾಸರಿ 6.1ರಷ್ಟು ಹೆಚ್ಚಾಗುತ್ತದೆ.

ಅಂತಾರಾಷ್ಟ್ರೀಯ ವೃತ್ತಿಪರ ಸೇವಾ ಸಂಸ್ಥೆಯಾದ ಐಒಎನ್ ಪಿಎಲ್‌ಸಿ ಈ ವರದಿ ಸಿದ್ಧಪಡಿಸಿದೆ. ದೇಶಾದ್ಯಂತ 20 ಕೈಗಾರಿಕೆಗಳಲ್ಲಿ 1,200 ಕಂಪನಿಗಳ ಸಮೀಕ್ಷೆ ಆಧರಿಸಿ ಈ ವರದಿ ನೀಡಲಾಗಿದೆ.

‘ಕಂಪನಿಗಳು ವ್ಯವಹಾರ ಕಾರ್ಯಾಚರಣೆಗಳ ಮೇಲೆ ಕೊರೊನಾ ಪ್ರಭಾವದ ಬಗ್ಗೆ ಸಂಪೂರ್ಣ ತಿಳುವಳಿಕೆ ಪಡೆದ ನಂತರ ವೇತನ ಹೆಚ್ಚಿಸುವ ಬಗ್ಗೆ ಯೋಚಿಸುವ ಸಾಧ್ಯತೆಯಿದೆ. ಹೆಚ್ಚಿದ ವೇತನವು ಸಂಪೂರ್ಣ ನೌಕರರ ಕೈಯಲ್ಲಿರುವುದಿಲ್ಲ.

ಆದರೆ, ಕೆಲವು ಪ್ರಮಾಣದ ಹಣವನ್ನು ಹೊಸ ಯೋಜನೆ ಅಡಿ ದೊಡ್ಡ ಭವಿಷ್ಯ ನಿಧಿಗೆ ಕೊಡುಗೆ ನೀಡಲು ಬಳಸಬಹುದು ಎಂದು ಅಯಾನ್ ಇಂಡಿಯಾ (ಕಾರ್ಯಕ್ಷಮತೆ, ಪ್ರೋತ್ಸಾಹಕ) ಸಿಇಒ ನಿತಿನ್ ಸೇಥಿ ಹೇಳಿದ್ದಾರೆ.

ಸಮೀಕ್ಷೆ ನಡೆಸಿದ 88 ಪ್ರತಿಶತ ಕಂಪನಿಗಳು 2021ರ ವೇಳೆಗೆ ವೇತನ ಹೆಚ್ಚಿಸಲು ಯೋಜಿಸಿವೆ. 2020ರಲ್ಲಿ ಶೇ.75ರಷ್ಟು ಕಂಪನಿಗಳು ವೇತನ ಹೆಚ್ಚಿಸಲು ಒಲವು ತೋರಿವೆ. ಆರ್ಥಿಕತೆಯು ಗಮನಾರ್ಹವಾಗಿ ಚೇತರಿಸಿಕೊಳ್ಳುವುದರಿಂದ ಅನೇಕ ಕಂಪನಿಗಳು ವೇತನ ಹೆಚ್ಚಳ ಪರಿಗಣಿಸುತ್ತಿವೆ ಎಂದು ಸಮೀಕ್ಷೆ ಕಂಡು ಕೊಂಡಿದೆ.

ಇದನ್ನೂ ಓದಿ: ‘ಮಿಲ್ಕಿ ವೇ ಭೂಮಿಯಂತೆ ಸಾಗರ, ಖಂಡಗಳನ್ನು ಹೊಂದಿರುವ ಗ್ರಹಗಳ ಸಮೂಹ’

ಇ-ಕಾಮರ್ಸ್, ಸಾಹಸೋದ್ಯಮ ಬಂಡವಾಳ, ಹೈಟೆಕ್/ಐಟಿ ತಂತ್ರಜ್ಞಾನ ಮತ್ತು ಜೀವ ವಿಜ್ಞಾನಗಳಲ್ಲಿ ವೇತನ ಹೆಚ್ಚಳ ಹೆಚ್ಚಾಗುವ ಸಾಧ್ಯತೆಯಿದೆ. ಆತಿಥ್ಯ/ರೆಸ್ಟೋರೆಂಟ್‌, ರಿಯಲ್ ಎಸ್ಟೇಟ್, ಮೂಲಸೌಕರ್ಯ ಮತ್ತು ಎಂಜಿನಿಯರಿಂಗ್ ಸೇವೆಗಳ ಕಂಪನಿಗಳಲ್ಲಿ ವೇತನ ಹೆಚ್ಚಳವು ಕಡಿಮೆಯಾಗುವ ಸಾಧ್ಯತೆಯಿದೆ.

ಕಳೆದ ಕೆಲವು ವರ್ಷಗಳಿಗಿಂತ ವಲಸೆ ದರವು (ಶೇ.12.8ರಷ್ಟು) ತೀರಾ ಕಡಿಮೆಯಾಗಿದೆ. ನೌಕರರು ನಿರ್ಧಾರ ತೆಗೆದುಕೊಳ್ಳಲು ಆದ್ಯತೆ ನೀಡುತ್ತಿರುವುದರಿಂದ ಒಂದು ಉದ್ಯೋಗದಿಂದ ಇನ್ನೊಂದಕ್ಕೆ ಬದಲಾಗುವ ಜನರ ಸಂಖ್ಯೆ ದೊಡ್ಡದಾಗಿರಬಾರದು ಎಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.