ETV Bharat / business

ಕೋವಿಡ್: ವಿಶ್ವ ಬ್ಯಾಂಕ್‌ನೊಂದಿಗೆ 400​ ಮಿಲಿಯನ್ ಡಾಲರ್ ಯೋಜನೆಗೆ ಭಾರತ ಸಹಿ - Dr CS Mohapatra

ಕೊರೊನಾ ಸಾಂಕ್ರಾಮಿಕದಿಂದ ಸಮಸ್ಯೆಗಳನ್ನು ಎದುರಿಸುತ್ತಿರುವ ಬಡವರಿಗೆ ಸಾಮಾಜಿಕ ರಕ್ಷಣೆಯನ್ನು ಒದಗಿಸಲು ವಿಶ್ವ ಬ್ಯಾಂಕ್‌ನೊಂದಿಗೆ ಮಹತ್ತರ ಒಪ್ಪಂದಕ್ಕೆ ಭಾರತ ಸರ್ಕಾರ ಸಹಿ ಮಾಡಿದೆ.

Govt of India
ಭಾರತ ಸರ್ಕಾರ
author img

By

Published : Dec 17, 2020, 8:01 AM IST

ನವದೆಹಲಿ: ಕೊರೊನಾ ಬಿಕ್ಕಟ್ಟಿನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡ ಜನರನ್ನು ರಕ್ಷಿಸಲು ವಿಶ್ವ ಬ್ಯಾಂಕ್‌ನೊಂದಿಗೆ 400 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ.

ಕಳೆದ ಮೇ ತಿಂಗಳಲ್ಲಿ 750 ಮಿಲಿಯನ್ ಡಾಲರ್ ಯೋಜನೆಯನ್ನು ಭಾರತ ಆರಂಭಿಸಿತ್ತು. ಈ ಯೋಜನೆಯಡಿಯಲ್ಲಿ ಎರಡನೇ ಕಾರ್ಯಾಚರಣೆ ಇದಾಗಿದೆ. ರಿಯಾಯಿತಿ ದರದಲ್ಲಿ ಸಾಲ ನೀಡುವ ವಿಶ್ವ ಬ್ಯಾಂಕಿನ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಘ (ಐಡಿಎ) 400 ಮಿಲಿಯನ್ ಡಾಲರ್​ ಅನ್ನು ಭಾರತಕ್ಕೆ ನೀಡುತ್ತಿದೆ.

ಇದನ್ನೂ ಓದಿ: ಮಕ್ಕಳ ಭವಿಷ್ಯದ ಮೇಲೆ ಗಂಭೀರ ಪ್ರಭಾವ ಬೀರಿದ ಕೊರೊನಾ

ಕೋವಿಡ್​ನಿಂದ ಉಂಟಾದ ಸಮಸ್ಯೆಗಳಿಂದ ವಲಸಿಗರು, ಬಡವರನ್ನು ಹೊರತರಲು, ಅವರಿಗೆ ಸಾಮಾಜಿಕ ರಕ್ಷಣೆಯನ್ನು ಒದಗಿಸಲು ಎಲ್ಲ ರಾಜ್ಯ ಸರ್ಕಾರಗಳ ಸಾಮರ್ಥ್ಯವನ್ನು ಬಲಪಡಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ. ಕೊರೊನಾ ಸಾಂಕ್ರಾಮಿಕವು ಭವಿಷ್ಯದಲ್ಲಿ ಪ್ರಕೃತಿಯಿಂದಾಗುವ ವಿಪತ್ತುಗಳಿಗೆ ಸನ್ನದ್ಧತೆಯನ್ನು ಮತ್ತಷ್ಟು ಬಲಪಡಿಸುವ ಸರ್ಕಾರಗಳ ಅಗತ್ಯಗಳ ಮನವರಿಕೆ ಮಾಡಿದೆ ಎಂದು ಆರ್ಥಿಕ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಡಾ. ಸಿ.ಎಸ್. ಮೊಹಾಪಾತ್ರ ಹೇಳಿದ್ದಾರೆ.

ಈ ಒಪ್ಪಂದಕ್ಕೆ ಭಾರತ ಸರ್ಕಾರದ ಪರವಾಗಿ ಡಾ.ಮೊಹಾಪಾತ್ರ ಮತ್ತು ವಿಶ್ವ ಬ್ಯಾಂಕ್​​ ಪರವಾಗಿ ಭಾರತದ ಕಾರ್ಯಕಾರಿ ನಿರ್ದೇಶಕ ಸುಮಿಲಾ ಗುಲ್ಯಾನಿ ಸಹಿ ಹಾಕಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.