ನವದೆಹಲಿ: ಜಾಗತಿಕ ಮೊಬೈಲ್ ಫೋನ್ ಮಾರುಕಟ್ಟೆಯ ಬೇಡಿಕೆಯನ್ನು ಸ್ಯಾಮ್‌ಸಂಗ್, ಆ್ಯಪಲ್, ಹುವಾವೇ, ಒಪ್ಪೊ ಮತ್ತು ವಿವೋ ಕಂಪನಿಗಳು ಪೂರೈಸುತ್ತವೆ.
ಜಾಗತಿಕ ಪೂರೈಕೆ ಸರಪಳಿಯಲ್ಲಿ ಅಗ್ರ ಸ್ಥಾನ ಹೊಂದಿರುವ ಈ ಕಂಪನಿಗಳಿಗೆ ಸಂಪರ್ಕ ಪ್ಲಾಟ್ಫಾರ್ಮ್ ಒದಗಿಸುವ ಸಮಯ ಭಾರತಕ್ಕೆ ಮಾಗಿದಂತೆ (ಸುಸಂದರ್ಭ) ತೋರುತ್ತಿದೆ ಎಂದು ಹೊಸ ವರದಿಯೊಂದು ತಿಳಿಸಿದೆ.
ಭಾರತ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ಹಾಗೂ ಇವೈ ವರದಿಯ ಪ್ರಕಾರ, ಭಾರತವು ಈಗಾಗಲೇ ಶೇ. 83ರಷ್ಟು ಜಾಗತಿಕ ಮೊಬೈಲ್ ಫೋನ್ ಆದಾಯ ಪಡೆದುಕೊಳ್ಳುವ ಆರಂಭಿಕ ಹೂಡಿಕೆಗಳನ್ನು ಆಕರ್ಷಿಸಿದೆ.
ಪ್ರಸ್ತುತ ಭಾರತೀಯ ಕಂಪನಿಗಳಾದ ಲಾವಾ ಮತ್ತು ಮೈಕ್ರೋಮ್ಯಾಕ್ಸ್ ದೇಶಿಯ ಮಾರುಕಟ್ಟೆಗೆ ಮೊಬೈಲ್ ಫೋನ್ ಉತ್ಪಾದಿಸುತ್ತಿವೆ. ಆದರೆ ಈ ಕಂಪನಿಗಳು ಇನ್ನೂ ಜಾಗತಿಕ ತಯಾರಿಕೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿಲ್ಲ. ದೇಶಿಯ ಕಂಪನಿಗಳು ಅಂತಾರಾಷ್ಟ್ರೀಯ ಕಂಪನಿಗಳಿಗೆ ಬಿಳಿ ಲೇಬಲ್ ಉತ್ಪಾದಕರಾಗಿ ಬದಲಾಗುವ ಮೂಲಕ ಅವುಗಳ ಕಾರ್ಯ ಚಟುವಟಿಕೆಗಳ ಪರದೆ ಆರಂಭವಾಗಬಹುದು. ಈ ಕೈಂಕರ್ಯದಲ್ಲಿ ತಮ್ಮದೇ ಆದ ಸಾಮರ್ಥ್ಯಗಳನ್ನು ಪರಿಷ್ಕರಿಸಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಭಾರತ ಜಾಗತಿಕ ಸರಪಳಿಯಲ್ಲಿ ತೊಡಗಿಸಿಕೊಳ್ಳಲು ಈ ಕಂಪನಿಗಳ ವಿತರಣೆ ಮತ್ತು ಚಿಲ್ಲರೆ ಜಾಲಗಳ ಮೇಲೆ ಸವಾರಿ ಮಾಡಬಹುದು. ದೇಶದಲ್ಲಿ ಹೇರಳವಾದ ಯುವ ಸಮೂಹವಿದೆ. ಅವರೆಲ್ಲ ಕೆಲಸ ಮಾಡಲು ತುದಿಗಾಗ ಮೇಲೆ ನಿಂತಿದ್ದಾರೆ. ಉತ್ಪಾದನಾ ವಲಯವೂ ಅವರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ.
ಭಾರತ ಪ್ರಸ್ತುತ ಆಂತರಿಕ ತಂತ್ರಜ್ಞಾನ ಮತ್ತು ಆರ್&ಡಿ ಕೇಂದ್ರಗಳನ್ನು ಹೊಂದಿಲ್ಲ. ಗ್ಲೋಬಲ್ ಲೀಡ್ ಸಂಸ್ಥೆಗಳು ಸುಧಾರಿತ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ತರಬಲ್ಲವು. ಅದು ಜಾಗತಿಕ ಪ್ರಮುಖ ಸಂಸ್ಥೆಗಳ ಉತ್ಪಾದನಾ ಪ್ರಕ್ರಿಯೆಗಳಿಗೆ ಮಾತ್ರವಲ್ಲದೆ ದೇಶಿಯ ಸಂಸ್ಥೆಗಳಿಗೂ ಸಹಕಾರಿಯಾಗಬಹುದು ಎಂದು ವರದಿ ತಿಳಿಸಿದೆ.
ಮೇಲಿನ ಅಂಶಗಳು ಕಾರ್ಯ ಸಾಧುವಾಗಿ ವಾಸ್ತವದಲ್ಲಿ ಅನುಷ್ಠಾನಗೊಂಡರೆ ಸುಲಭವಾಗಿ ಚೀನಾ ಹಿಡಿತದಲ್ಲಿರುವ ಸೆಲ್ಯುಲರ್ ಮಾರುಕಟ್ಟೆಯನ್ನು ಭಾರತ ಅನಾಯಾಸವಾಗಿ ಸೋಲಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.