ETV Bharat / business

10 ವರ್ಷದಲ್ಲಿ ಭಾರತದ 27 ಕೋಟಿ ಜನರು ಬಡತನದಿಂದ ಮುಕ್ತ! -

ಬಡತನವನ್ನು ಹೋಗಲಾಡಿಸಲು ಕೈಗೊಂಡಿರುವ ಉಪಕ್ರಮ ಮತ್ತು ಅದರ ವೇಗ ಅಳೆಯಲು ಜಾಗತಿಕವಾಗಿ ಬಳಕೆ ಮಾಡುವ ಬಹುಬಗೆ ಬಡತನ ಸೂಚಿ (ಎಂಪಿಐ) ಬಳಸಲಾಗಿದೆ. ಈ ವಿಧಾನದಲ್ಲಿ ಅಪೌಷ್ಟಿಕತೆ, ಶಿಕ್ಷಣ, ಶೌಚಾಲಯ ಮುಂತಾದ ಅಂಶಗಳ ಆಧಾರದ ಮೇಲೆ ವರದಿ ತಯಾರಿಸಲಾಗಿದೆ.

ಬಡತನ
author img

By

Published : Jul 12, 2019, 4:51 PM IST

ನವದೆಹಲಿ: ಕಳೆದ 10 ವರ್ಷಗಳ ಅವಧಿಯಲ್ಲಿ ಭಾರತ 27.1 ಕೋಟಿಯಷ್ಟು ಜನರನ್ನು ಬಡತನದಿಂದ ಮೇಲೆತ್ತಿದೆ ಎಂದು ವಿಶ್ವ ಸಂಸ್ಥೆಯ ಇತ್ತೀಚಿನ ವರದಿ ತಿಳಿಸಿದೆ.

ಬಡತನವನ್ನು ಹೋಗಲಾಡಿಸಲು ಕೈಗೊಂಡಿರುವ ಉಪಕ್ರಮ ಮತ್ತು ಅದರ ವೇಗ ಅಳೆಯಲು ಜಾಗತಿಕವಾಗಿ ಬಳಕೆ ಮಾಡುವ ಬಹುಬಗೆಯ ಬಡತನ ಸೂಚಿ (ಎಂಪಿಐ) ಬಳಸಲಾಗಿದೆ. ಈ ವಿಧಾನದಲ್ಲಿ ಅಪೌಷ್ಟಿಕತೆ, ಶಿಕ್ಷಣ, ಶೌಚಾಲಯ ಮುಂತಾದ ಅಂಶಗಳ ಆಧಾರದ ಮೇಲೆ ಈ ವರದಿ ತಯಾರಿಸಲಾಗಿದೆ.

ಯಥೇಚ್ಚವಾಗಿ ಬಡತನ ಹೊಂದಿರುವ ಬಾಂಗ್ಲಾ, ಕಾಂಬೋಡಿಯಾ, ಕಾಂಗೋ ರಿಪಬ್ಲಿಕ್, ಇಥಿಯೋಪಿಯಾ, ಹೈಟಿ, ಭಾರತ, ನೈಜೀರಿಯಾ, ಪಾಕಿಸ್ತಾನ, ಪೆರು ಮತ್ತು ವಿಯೆಟ್ನಾಂ ರಾಷ್ಟ್ರಗಳಲ್ಲಿ ಬಡತನದ ಪ್ರಮಾಣ ತಗ್ಗಿದೆ. ಅಧ್ಯಯನಕ್ಕೆ ಒಟ್ಟು 101 ರಾಷ್ಟ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಇದರಲ್ಲಿ 31 ಕಡಿಮೆ ಆದಾಯ, 68 ಮಧ್ಯಮ ಆದಾಯ ಹಾಗೂ 2 ಅತ್ಯಧಿಕ ಆದಾಯ ರಾಷ್ಟ್ರಗಳಿವೆ ಎಂದು ಹೇಳಿದೆ.

ಭಾರತವು 2006-2016ರ ಅವಧಿಯಲ್ಲಿ ದೇಶದಲ್ಲಿನ 27.1 ಕೋಟಿ ಜನರಲ್ಲಿನ ಬಡತನವನ್ನು ಹೋಗಲಾಡಿಸಿ ಪ್ರಗತಿಯತ್ತ ಸಾಗಿದೆ ಎಂದು ಎಂಪಿಐ, ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್​ಡಿಪಿ), ಆಕ್ಸ್​ಫರ್ಡ್​ ವಿವಿಯ ಆಕ್ಸ್​ಫರ್ಡ್​ ಪವರ್ಟಿ ಆ್ಯಂಡ್ ಮತ್ತು ಹ್ಯೂಮನ್ ಡೆವಲಪ್​ಮೆಂಟ್​ ಇನಿಶಿಯೇಟಿವ್​ (ಒಪಿಎಚ್​ಐ) ಸಂಸ್ಥೆ ನಡೆಸಿದ ಅಧ್ಯಯನ ತಿಳಿಸಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.