ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡಿಸುವಾಗ ಘೋಷಿಸಿದ್ದ ಆದಾಯ ತೆರಿಗೆ ನಿಯಮಗಳಲ್ಲಿನ ಬದಲಾವಣೆಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿವೆ.
ಹೊಸ ನಿಯಮಗಳ ಪ್ರಕಾರ, 75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪಿಂಚಣಿ ಆದಾಯವನ್ನು ಅದೇ ಬ್ಯಾಂಕಿನಲ್ಲಿ ಸ್ಥಿರ ಠೇವಣಿಯ ಬಡ್ಡಿ ಮೇಲೆ ಏಪ್ರಿಲ್ 1ರಿಂದ ಐಟಿಆರ್ ಸಲ್ಲಿಸಲು ವಿನಾಯಿತಿ ನೀಡಲಾಗುತ್ತದೆ. ವಿತ್ತ ಸಚಿವರು ತಮ್ಮ ಐಟಿಆರ್ ಸಲ್ಲಿಸದವರಿಗೆ ಹೆಚ್ಚಿನ ಟಿಡಿಎಸ್ ಪ್ರಸ್ತಾಪಿಸಿದ್ದಾರೆ. ಇಪಿಎಫ್ ಖಾತೆಯಲ್ಲಿ 2.5 ಲಕ್ಷ ರೂ.ಗಿಂತ ಅಧಿಕ ಠೇವಣಿ ಇಡುವ ವ್ಯಕ್ತಿಗಳಿಗೆ ತೆರಿಗೆ ವಿಧಿಸಲಾಗುವುದು ಎಂದು ಘೋಷಿಸಲಾಗಿದೆ.
ಏಪ್ರಿಲ್ 1ರಿಂದ ಜಾರಿಗೆ ಬರುವ 6 ಆದಾಯ ತೆರಿಗೆ ಬದಲಾವಣೆಗಳು ಹೀಗಿವೆ:
1) ಪಿಎಫ್ ತೆರಿಗೆ ನಿಯಮಗಳು:
2021ರ ಏಪ್ರಿಲ್ 1ರಿಂದ 2.5 ಲಕ್ಷ ರೂ.ಗಿಂತ ಅಧಿಕ ಭವಿಷ್ಯ ನಿಧಿಗೆ ವಾರ್ಷಿಕ ನೌಕರರ ಕೊಡುಗೆಗಳ ಮೇಲಿನ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ. ನೌಕರರ ಭವಿಷ್ಯ ನಿಧಿಯಲ್ಲಿ (ಇಪಿಎಫ್) ಹೆಚ್ಚಿನ ಮೌಲ್ಯದ ಠೇವಣಿದಾರರಿಗೆ ತೆರಿಗೆ ವಿಧಿಸುವ ಗುರಿ ಹೊಂದಿದೆ ಎಂದು ಸರ್ಕಾರ ಹೇಳಿದೆ. ಇಪಿಎಫ್ ಕಾರ್ಮಿಕರ ಕಲ್ಯಾಣ ನಿಧಿ ಗುರಿಯಾಗಿರಿಸಿಕೊಂಡಿದ್ದು, ತಿಂಗಳಿಗೆ 2 ಲಕ್ಷ ರೂ.ಗಿಂತ ಕಡಿಮೆ ಆದಾಯ ಗಳಿಸುವ ಯಾವುದೇ ವ್ಯಕ್ತಿಗೆ ಈ ಪ್ರಸ್ತಾವನೆಯಿಂದ ತೊಂದರೆಯಾಗುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
2) ಟಿಡಿಎಸ್:
ಹೆಚ್ಚಿನ ಜನರು ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವಂತೆ ಮಾಡಲು ಹಣಕಾಸು ಸಚಿವರು 2021ರ ಬಜೆಟ್‌ನಲ್ಲಿ ಹೆಚ್ಚಿನ ಟಿಡಿಎಸ್ (ಮೂಲದಲ್ಲಿ ತೆರಿಗೆ ಕಡಿತ) ಅಥವಾ ಟಿಸಿಎಸ್ (ಮೂಲದಲ್ಲಿ ಸಂಗ್ರಹಿಸಿದ ತೆರಿಗೆ) ದರಗಳನ್ನು ಪ್ರಸ್ತಾಪಿಸಿದ್ದಾರೆ.
ಆದಾಯ ತೆರಿಗೆ ಕಾಯ್ದೆಯಲ್ಲಿ ಹೊಸ ವಿಭಾಗಗಳು 206ಎಬಿ ಮತ್ತು 206 ಸಿಸಿಎಗಳನ್ನು ಸೇರಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಸದವರಿಗೆ ಕ್ರಮವಾಗಿ ಟಿಡಿಎಸ್ ಮತ್ತು ಟಿಸಿಎಸ್‌ನ ಹೆಚ್ಚಿನ ದರ ಕಡಿತಗೊಳಿಸುವ ವಿಶೇಷ ಆದಾಯ ತೆರಿಗೆ ಕಾಯ್ದೆಯಲ್ಲಿ ತರಲಾಯಿತು.
3) ಹಿರಿಯ ನಾಗರಿಕರಿಗೆ ವಿನಾಯಿತಿ:
ಹಿರಿಯ ನಾಗರಿಕರ ಮೇಲಿನ ತೆರಿಗೆ ಹೊರೆ ಕಡಿಮೆ ಮಾಡಲು 2021ರ ಬಜೆಟ್ 75 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವುದರಿಂದ ವಿನಾಯಿತಿ ನೀಡಲಿದೆ. ಈ ವಿನಾಯಿತಿ ಬೇರೆ ಆದಾಯವಿಲ್ಲದ ಹಿರಿಯ ನಾಗರಿಕರಿಗೆ ಮಾತ್ರ ಲಭ್ಯವಿದೆ. ಆದರೆ ಪಿಂಚಣಿ ಖಾತೆ ಇರುವ ಬ್ಯಾಂಕಿನಿಂದ ಪಡೆದ ಪಿಂಚಣಿ ಬಡ್ಡಿ ಆದಾಯ ಆಧರಿಸಿದೆ.
4) ಪೂರ್ವವಾಗಿ ಭರ್ತಿ ಮಾಡಿದ ಐಟಿಆರ್ ಫಾರ್ಮ್:
ಪೂರ್ವವಾಗಿ ಭರ್ತಿ ಮಾಡಿದ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಅನ್ನು ವೈಯಕ್ತಿಕ ತೆರಿಗೆದಾರರಿಗೆ ನೀಡಲಾಗುತ್ತದೆ. ತೆರಿಗೆ ಪಾವತಿದಾರರಿಗೆ ಈ ಪ್ರಕ್ರಿಯೆಯನ್ನು ಸುಲಭಗೊಳಿಸಲು ವೇತನ ಆದಾಯ, ತೆರಿಗೆ ಪಾವತಿ, ಟಿಡಿಎಸ್ನಂತಹ ಇತರ ವಿವರಗಳನ್ನು ಆದಾಯ ತೆರಿಗೆ ನಮೂನೆಗಳಲ್ಲಿ ಮೊದಲೇ ಭರ್ತಿ ಮಾಡಲಾಗುತ್ತದೆ. ರಿಟರ್ನ್ಸ್ ಸಲ್ಲಿಸಲು ಹೆಚ್ಚು ಅನುಕೂಲಕರವಾಗುವಂತೆ ಪಟ್ಟಿಮಾಡಿದ ಭದ್ರತೆಯಿಂದ ಬಂಡವಾಳ ಲಾಭದ ವಿವರಗಳು, ಲಾಭಾಂಶ ಆದಾಯ, ಬ್ಯಾಂಕ್ಗಳಿಂದ ಬಂದ ಬಡ್ಡಿ, ಅಂಚೆ ಕಚೇರಿ ಇತ್ಯಾದಿಗಳು ಮುಂಚಿತವಾಗಿ ಲಭ್ಯವಿರಲಿವೆ. ರಿಟರ್ನ್ಸ್ ಸಲ್ಲಿಸಲು ಅನುಕೂಲವಾಗುವಂತೆ ಈ ಕ್ರಮ ತೆಗೆದುಕೊಳ್ಳಲಾಗಿದೆ.
5) ಎಲ್‌ಟಿಸಿ:
2021ರ ಬಜೆಟ್‌ನಲ್ಲಿ ರಜಾ ಪ್ರಯಾಣ ರಿಯಾಯಿತಿ (ಎಲ್‌ಟಿಸಿ) ಬದಲಿಗೆ ನಗದು ಭತ್ಯೆಗೆ ತೆರಿಗೆ ವಿನಾಯಿತಿ ನೀಡಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ. ಕೋವಿಡ್ ಸಂಬಂಧಿತ ಪ್ರಯಾಣದ ನಿರ್ಬಂಧದಿಂದಾಗಿ ತಮ್ಮ ಎಲ್‌ಟಿಸಿ ತೆರಿಗೆ ಪ್ರಯೋಜನ ಪಡೆಯಲು ಸಾಧ್ಯವಾಗದ ಜನರಿಗೆ ಸರ್ಕಾರ ಕಳೆದ ವರ್ಷ ಈ ಯೋಜನೆ ಘೋಷಿಸಿತು.
6) ಹಳೆಯ ತೆರಿಗೆ ಆಡಳಿತ ಬದಲು 'ಹೊಸ ತೆರಿಗೆ ಆಡಳಿತ' ಆಯ್ಕೆ:
ಸರ್ಕಾರವು ಕಳೆದ ವರ್ಷ 2020ರ ಬಜೆಟ್‌ನಲ್ಲಿ ಹೊಸ ತೆರಿಗೆ ಆಡಳಿತ ಜಾರಿಗೆ ತಂದಿತ್ತು. 2020-21ರ ಹಣಕಾಸು ವರ್ಷಕ್ಕೆ ತೆರಿಗೆ ನಿಯಮಗಳಲ್ಲಿ ಒಂದನ್ನು ಆಯ್ಕೆ ಮಾಡುವುದು ಅಗತ್ಯವಾಗಿರುತ್ತದೆ. 2021ರ ಏಪ್ರಿಲ್ 1ರಿಂದ ಪ್ರಾರಂಭವಾಗುತ್ತದೆ. ತೆರಿಗೆ ಪಾವತಿದಾರರಿಗೆ ತೆರಿಗೆ ಉಳಿತಾಯ ಕಡಿತ ಮಾಡಲು 2021ರ ಮಾರ್ಚ್ 31ರವರೆಗೆ ಸಮಯವಿತ್ತು. 2020-21ನೇ ಸಾಲಿನ ತೆರಿಗೆ ರಿಟರ್ನ್ಸ್ ಸಲ್ಲಿಸುವ ಸಮಯದಲ್ಲಿ ಅವರು ಪ್ರಯೋಜನಕಾರಿ ಆಡಳಿತವನ್ನು ಆರಿಸಿಕೊಳ್ಳಲು ಸಾಧ್ಯವಾಗುತ್ತದೆ.
ಹೊಸ ತೆರಿಗೆ ಆಡಳಿತವು ಐಚ್ಛಿಕವಾಗಿರುತ್ತದೆ. ತೆರಿಗೆದಾರರಿಗೆ ವಿನಾಯಿತಿ ಮತ್ತು ಕಡಿತಗಳೊಂದಿಗೆ ಹಳೆಯ ಆಡಳಿತದಲ್ಲಿ ಉಳಿಯಲು ಅಥವಾ ಆ ವಿನಾಯಿತಿಗಳಿಲ್ಲದೇ ಹೊಸದಾಗಿ ಕಡಿಮೆಯಾದ ತೆರಿಗೆ ದರವನ್ನು ಆರಿಸಿಕೊಳ್ಳಲು ಆಯ್ಕೆ ನೀಡಲಾಗಿತ್ತು.
ಇದನ್ನೂ ಓದಿ: ಪ್ಯಾನ್ ಕಾರ್ಡ್ - ಆಧಾರ್ ಲಿಂಕ್ಗೆ ಇಂದು ಕೊನೆ ದಿನ: ಸರಳ ಜೋಡಣೆ ವಿಧಾನ ಇಲ್ಲಿದೆ
ವಾರ್ಷಿಕ 5 ಲಕ್ಷದಿಂದ 7.5 ಲಕ್ಷ ರೂ. ಆದಾಯ ಹೊಂದಿರುವ ಜನರು ಶೇ 10ರಷ್ಟು ತೆರಿಗೆ ದರ ಪಾವತಿಸಬೇಕಾಗುತ್ತದೆ. 7.5 ಲಕ್ಷದಿಂದ 10 ಲಕ್ಷ ರೂ. ಆದಾಯ ಇರುವವರು ಶೇ 15ರಷ್ಟು, 10 ಲಕ್ಷದಿಂದ 12.5 ಲಕ್ಷ ರೂ. ಆದಾಯದಾರರು ಶೇ 20ರಷ್ಟು, 12.5 ಲಕ್ಷದಿಂದ 15 ಲಕ್ಷ ರೂ. ಆದಾಯ ಹೊಂದಿರುವವರು ಶೇ 25ರಷ್ಟು ಹಾಗೂ 15 ಲಕ್ಷ ರೂ.ಗೂ ಅಧಿಕ ಆದಾಯ ಹೊಂದಿದವರು ಶೇ 30ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.