ETV Bharat / business

ಬಿಬಿವಿ -152 ಲಸಿಕೆಯಲ್ಲಿ ಕಾಣದ ಪ್ರತಿಕೂಲ ಪರಿಣಾಮ : ಭಾರತ್​ ಬಯೋಟೆಕ್ ಹೇಳಿಕೆ - ಭಾರತ್​ ಬಯೋಟೆಕ್​ ಸುದ್ದಿ 2020

ಭಾರತ್ ಬಯೋಟೆಕ್ ಬಿಬಿವಿ -152 ಹೋಲ್​-ವೈರಿಯನ್ SARS-CoV-2 ಲಸಿಕೆಯಾಗಿದ್ದು, ಇದು ಯಾವುದೇ ಗಂಭೀರ ಪ್ರತಿಕೂಲ ಪರಿಣಾಮಗಳನ್ನು ಹೊಂದಿಲ್ಲ. ಈ ಲಸಿಕೆಗಳು ಸುರಕ್ಷಿತವಾಗಿವೆ ಎಂದು ಭಾರತ್ ಬಯೋಟೆಕ್ ಸಂಸ್ಥೆ ಸ್ಪಷ್ಟಪಡಿಸಿದೆ.

ಭಾರತ್​ ಬಯೋಟೆಕ್
ಭಾರತ್​ ಬಯೋಟೆಕ್
author img

By

Published : Dec 21, 2020, 11:53 AM IST

ನವದೆಹಲಿ: ಎಂಆರ್​ಎನ್​ಎ ಆಧಾರಿತ ಲಸಿಕೆ, ಡಿಎನ್ಎ ಆಧಾರಿತ ಲಸಿಕೆ, ವೆಕ್ಟರ್ ಆಧಾರಿತ ಲಸಿಕೆ, ಅಥವಾ ಲೈವ್ ಅಟೆನ್ಯುವೇಟೆಡ್ ಲಸಿಕೆಗಳಂತಹ ಎಲ್ಲಾ ಲಸಿಕೆ ಪ್ಲಾಟ್‌ಫಾರ್ಮ್‌ಗಳಲ್ಲಿ, ಕೋವಿಡ್ -19ಗಾಗಿ ಅಭಿವೃದ್ಧಿಪಡಿಸುತ್ತಿರುವ ಲಸಿಕೆಗಳು ಸುರಕ್ಷಿತವೆಂದು ಭಾರತ್ ಬಯೋಟೆಕ್ ಹೇಳಿದೆ.

'ಇದು ಭಾರತ್ ಬಯೋಟೆಕ್ ಬಿಬಿವಿ -152 ಹೋಲ್​-ವೈರಿಯನ್ SARS-CoV-2 ಲಸಿಕೆ. ಈ ಲಸಿಕೆಗಳು ಸುರಕ್ಷಿತವಾಗಿವೆ ಮತ್ತು ಪ್ರತಿಕೂಲ ಅಡ್ಡಪರಿಣಾಮಗಳು ಕಡಿಮೆ ಇವೆ. ಹಂತ 1 ಮತ್ತು 2 ಕ್ಲಿನಿಕಲ್ ಪ್ರಯೋಗಗಳಲ್ಲಿ ಸುಮಾರು 755 ಮಂದಿ ಭಾಗವಹಿಸಿದ್ದರು. ಅವರಿಗೆ ಲಸಿಕೆ ನೀಡಲಾಗಿದೆ. ಈ ಪ್ರಯೋಗಗಳಲ್ಲಿ ಯಾವುದೇ ಗಂಭೀರ ಪ್ರತಿಕೂಲ ಪರಿಣಾಮಗಳು ಎದುರಾಗಿಲ್ಲ. ಬಿಬಿವಿ -152 ಲಸಿಕೆಯು ವ್ಯಾಕ್ಸಿನೇಷನ್ ಮಾಡಿದ 14 ದಿನಗಳ ನಂತರ ಪರಿಣಾಮ ಬೀರಲಿದೆ. ಆದ್ದರಿಂದ ಪ್ರಯೋಗದಲ್ಲಿ ಭಾಗಿಯಾಗುವವರು ಮುನ್ನೆಚ್ಚರಿಕೆ ವಹಿಸಬೇಕು.

ಇದನ್ನು ಓದಿ: ಬಿಗ್ ಬ್ರೇಕಿಂಗ್​: ಭಾರತ್ ಬಯೋಟೆಕ್​​ನ ಕೊವಾಕ್ಸಿನ್ ಲಸಿಕೆ​ ಪರಿಣಾಮಕಾರಿ ಫಲಿತಾಂಶ!

ಇದು ಸ್ವಯಂಸೇವಕರ ದೇಹದ ಪ್ರತಿರಕ್ಷಣಾ ಸ್ಪಂದನೆಯನ್ನು ಹೆಚ್ಚಿಸಿದ್ದು, ಲಸಿಕೆಗೆ ಸಂಬಂಧಿಸಿದಂತೆ ಯಾವುದೇ ಗಂಭೀರ ಅಡ್ಡಪರಿಣಾಮ ಕಂಡುಬಂದಿಲ್ಲ. ಹೀಗಾಗಿ ಲಸಿಕೆ ಹೆಚ್ಚು ಪರಿಣಾಮಕಾರಿ ಎನಿಸಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಕೋವ್ಯಾಕ್ಸಿನ್, ಭಾರತದ ಮೊದಲ ಸಂಪೂರ್ಣ ಸ್ವದೇಶಿ ನಿರ್ಮಿತ ಲಸಿಕೆಯಾಗಿದ್ದು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.