ನವದೆಹಲಿ: ಭಾರತದಲ್ಲಿ ಉತ್ತಮ ಪರಿಸರಕ್ಕಾಗಿ ಹಣಕಾಸು ನೀತಿಗಳ ಆಯ್ಕೆಗಳನ್ನು ಮಾಡಿಕೊಳ್ಳಲಾಗಿದೆ. ಹಾಗೂ ನವೀಕರಿಸಬಹುದಾದ ಸಂಪನ್ಮೂಲ ಉತ್ತೇಜಿಸಲು ರಿಯಾಯಿತಿ ತೆರಿಗೆ ದರಗಳು ಜಾರಿಯಲ್ಲಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಮುಂಬರುವ ಜಿ-20 ಉನ್ನತ ಮಟ್ಟದ ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ ಸಭೆ ಹಿನ್ನೆಲೆಯಲ್ಲಿಇಟಲಿಯಲ್ಲಿಂದು ನಡೆದ 'ತೆರಿಗೆ ನೀತಿ ಮತ್ತು ಹವಾಮಾನ ಬದಲಾವಣೆ' ಕುರಿತ ವಿಚಾರ ಸಂಕಿರಣದ ವರ್ಚುವಲ್‌ನಲ್ಲಿ ಸೀತಾರಾಮನ್ ಭಾಗವಹಿಸಿದ್ದರು. ಈ ವೇಳೆ ಅವರು, ಪರಿಸರ ರಕ್ಷಣೆಗಾಗಿ ಭಾರತದಲ್ಲಿನ ಸಂಶೋಧನಾ ನೀತಿಗಳನ್ನು ವಿವರಿಸಿದರು. ದೇಶದ ಹೊಸ ಇಂಧನದ ಚಿತ್ರಣ, ಡಿಜಿಟಲ್ ನಾವೀನ್ಯತೆ ಮತ್ತು ಪರ್ಯಾಯ ಹೊಸ ಇಂಧನಗಳ ನೀತಿಗಳು ಸಹಕಾರಿಯಾಗಿವೆ ಎಂದು ಹೇಳಿದರು.
ಇದನ್ನೂ ಓದಿ: ಕರ್ನಾಟಕದ 10 ಜಿಲ್ಲೆಗಳಲ್ಲಿ ಕೋವಿಡ್ ಹೆಚ್ಚಾಗಿದೆ: ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ
ಶುದ್ಧ ಇಂಧನವನ್ನು ಸಕ್ರೀಯಗೊಳಿಸಲು ಅಂತಾರಾಷ್ಟ್ರೀಯ ಸೌರ ಒಕ್ಕೂಟವನ್ನು ರಚಿಸಿ ಇಂಧನದ ದಕ್ಷತೆ ಮತ್ತು ಅರಣ್ಯೀಕರಣದ ಬಗ್ಗೆ ಪ್ರಚಾರ ಮಾಡಬೇಕು ಎಂದರು.
ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಲ್ಲಿ ತಂತ್ರಜ್ಞಾನದ ಪಾತ್ರವನ್ನು ಒತ್ತಿ ಹೇಳಿದ ಸೀತಾರಾಮನ್, ಇಂಧನಕ್ಕೆ ಪರ್ಯಾಯವಾದ ಸಂಪನ್ಮೂಲದ ಪೂರೈಕೆ ಮತ್ತು ತಂತ್ರಜ್ಞಾನ ಹೆಚ್ಚಿಸಲು ಅಂತಾರಾಷ್ಟ್ರೀಯ ಸಹಕಾರಕ್ಕೆ ಕರೆ ನೀಡಿದರು.