ನವದೆಹಲಿ: 2021ರಲ್ಲಿ ಎಂಟು ಪ್ರಮುಖ ಕೈಗಾರಿಕೆಗಳು ಅಥವಾ ಐಸಿಐ ಸೂಚ್ಯಂಕವು ಶೇ 126.7 ರಷ್ಟು ಆಗಿದ್ದು, ಇದು 2020ರ ಏಪ್ರಿಲ್ ಸೂಚ್ಯಂಕಕ್ಕೆ ಹೋಲಿಸಿದರೆ ಶೇ 56.1ರಷ್ಟು ಹೆಚ್ಚಾಗಿದೆ.
ಕಳೆದ ವರ್ಷ ಕೊರೊನಾ ವೈರಸ್ ಹರಡುವುದನ್ನು ತಡೆಯಲು ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದ ಉಂಟಾದ ಎಲ್ಲ ಕ್ಷೇತ್ರಗಳಾದ್ಯಂತ ಕೈಗಾರಿಕಾ ಉತ್ಪಾದನೆ ಕಡಿಮೆಯಾಗಿದ್ದರಿಂದ 2021ರ ಏಪ್ರಿಲ್‌ನಲ್ಲಿ ಹೆಚ್ಚಿನ ಬೆಳವಣಿಗೆ ದರವು ಹೆಚ್ಚಾಗಿತ್ತು.
ಸಾಂಕ್ರಾಮಿಕ ಕೋವಿಡ್ -19 ಎರಡನೇ ಅಲೆ ಹೊರ ಹೊಮ್ಮುವಿಕೆಯಿಂದಾಗಿ 2021ರ ಮಾರ್ಚ್ಕ್ಕೆ ಹೋಲಿಸಿದರೆ, ಐಸಿಐನ ಎಂಟು ಪ್ರಮುಖ ಕೈಗಾರಿಕೆಗಳ ಉತ್ಪಾದನೆಯ 2021ರ ಏಪ್ರಿಲ್‌ನಲ್ಲಿ ಶೇ 15.1ರಷ್ಟು ಕುಸಿದಿದೆ.
ಜನವರಿ 2021ರ ಐಸಿಐನ ಅಂತಿಮ ಬೆಳವಣಿಗೆಯ ದರವನ್ನು ಅದರ ತಾತ್ಕಾಲಿಕ ಮಟ್ಟವಾದ ಶೇ 0.1ರಿಂದ ಶೇ 1.3ಕ್ಕೆ ಪರಿಷ್ಕರಿಸಲಾಗಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ 2020-21ರ ಏಪ್ರಿಲ್-ಮಾರ್ಚ್ ಅವಧಿಯಲ್ಲಿ ಐಸಿಐನ ಬೆಳವಣಿಗೆಯ ದರವು ಮೈನಸ್ ಶೇ 6.5ರಷ್ಟಿತ್ತು.
ಆಯ್ದ ಎಂಟು ಪ್ರಮುಖ ಕೈಗಾರಿಕೆಗಳಾದ ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಣಾಗಾರ ಉತ್ಪನ್ನಗಳು, ರಸಗೊಬ್ಬರಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಉತ್ಪಾದನೆಯಲ್ಲಿ ಐಸಿಐ ಸಂಯೋಜನೆ ಮತ್ತು ಉತ್ಪಾದನೆಯ ಕಾರ್ಯಕ್ಷಮತೆಯಾಗಿದೆ.
ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿ (ಐಐಪಿ) ಸೇರಿಸಲಾದ ವಸ್ತುಗಳ ಗಾತ್ರ ಶೇ 40.27ರಷ್ಟು ಎಂಟು ಪ್ರಮುಖ ಕೈಗಾರಿಕೆಗಳನ್ನು ಒಳಗೊಂಡಿದೆ.