ನವದೆಹಲಿ: ಈ ಹಣಕಾಸು ವರ್ಷದಲ್ಲಿ ಒಂದು ತಿಂಗಳಲ್ಲಿ 11.73 ಲಕ್ಷ ತೆರಿಗೆದಾರರಿಗೆ 15,438 ಕೋಟಿ ರೂ. ತೆರಿಗೆ ಬಾಕಿ ಮರುಪಾವತಿ ನೀಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಈ ವೈಯಕ್ತಿಕ ಆದಾಯ ತೆರಿಗೆಯಲ್ಲಿ 5,047 ಕೋಟಿ ರೂ. ಮರುಪಾವತಿಯನ್ನು 11.51 ಲಕ್ಷ ಪ್ರಕರಣಗಳಲ್ಲಿ ನೀಡಲಾಗಿದೆ. 21,487 ತೆರಿಗೆದಾರರಿಗೆ 10,392 ಕೋಟಿ ರೂ. ಕಾರ್ಪೊರೇಟ್ ತೆರಿಗೆ ಮರುಪಾವತಿ ನೀಡಲಾಗಿದೆ.
ಸಿಬಿಡಿಟಿ 2021ರ ಏಪ್ರಿಲ್ 1ರಿಂದ 2021 ಮೇ 3ರವರೆಗೆ 11.73 ಲಕ್ಷಕ್ಕೂ ಹೆಚ್ಚು ತೆರಿಗೆದಾರರಿಗೆ 15,438 ಕೋಟಿ ರೂ. ತೆರಿಗೆ ಬಾಕಿ ಮರುಪಾವತಿ ನೀಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ. ಮರುಪಾವತಿ ಯಾವ ಹಣಕಾಸು ವರ್ಷಕ್ಕೆ ಐ-ಟಿ ಇಲಾಖೆ ನಿರ್ದಿಷ್ಟಪಡಿಸಿಲ್ಲ.
2021ರ ಮಾರ್ಚ್ 31ರಂದು ಕೊನೆಗೊಂಡ ಹಿಂದಿನ ಹಣಕಾಸು ವರ್ಷದಲ್ಲಿ ಇಲಾಖೆ 2.382 ಲಕ್ಷ ಕೋಟಿ ಮೌಲ್ಯದ ಮರುಪಾವತಿಯನ್ನು 2.38 ಕೋಟಿಗೂ ಹೆಚ್ಚು ತೆರಿಗೆದಾರರಿಗೆ ನೀಡಿತ್ತು.