ETV Bharat / business

ಕೊರೊನಾ ತಂದಿಟ್ಟ ಫಜೀತಿ... ಎಲ್ಲಿದ್ದ ಬಡ್ಡಿದರ ಎಲ್ಲಿಗೆ ಬಂತು?

author img

By

Published : Apr 2, 2020, 11:10 PM IST

ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿಯನ್ನು ಶೇ 8.4 ರಿಂದ ಶೇ 7.6ಕ್ಕೆ ಕಡಿತಗೊಳಿಸಲಾಗಿದೆ. ಹಿರಿಯ ನಾಗರಿಕರ 5 ವರ್ಷಗಳ ಅವಧಿಯ ಉಳಿತಾಯ ಯೋಜನೆಗಳ ಬಡ್ಡಿ ದರ ಶೇ 8.6 ರಿಂದ ಶೇ 7.4ಕ್ಕೆ ಇಳಿಕೆಯಾಗಿದೆ. 5 ವರ್ಷ ಅವಧಿಯ ರಾಷ್ಟ್ರೀಯ ಉಳಿತಾಯ ಪತ್ರದ (ಎನ್‌ಎಸ್‌ಇ) ಬಡ್ಡಿ ದರವನ್ನು ಶೇ 7.6 ರಿಂದ ಶೇ 6.6ಕ್ಕೆ ಇಳಿಕೆ ಮಾಡಲಾಗಿದೆ.

interest rates
ಬಡ್ಡಿ ದರ

ನವದೆಹಲಿ: ಕೇಂದ್ರ ಸರ್ಕಾರ ಏಪ್ರಿಲ್‌ - ಜೂನ್‌ ಅವಧಿಗೆ ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರಗಳನ್ನು ಶೇ 0.70 ರಿಂದ ಶೇ 1.40ರ ವರೆಗೆ ಕಡಿತಗೊಳಿಸಿದೆ.

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌) ಬಡ್ಡಿ ದರವನ್ನು ಶೇ 7.9 ರಿಂದ ಶೇ 7.1ಕ್ಕೆ ಪರಿಷ್ಕರಿಸಲಾಗಿದ್ದು, ಶೇ 0.8 ಕಡಿತವಾಗಿದೆ. ಅಂಚೆ ಇಲಾಖೆಯ ನಾನಾ ಸಣ್ಣಉಳಿತಾಯ ಯೋಜನೆಗಳ ಬಡ್ಡಿ ದರದಲ್ಲಿ ಶೇ 1.4ರ ವರೆಗೆ ಇಳಿಸಲಾಗಿದೆ.

interest rates
ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರ

5 ವರ್ಷಗಳ ಮಾಸಿಕ ಆದಾಯ ಯೋಜನೆಯ ಬಡ್ಡಿ ದರವನ್ನು ಶೇ 7.6ರಿಂದ ಶೇ 6.6ಕ್ಕೆ ಕಡಿತಗೊಳಿಸಲಾಗಿದೆ. ಕಿಸಾನ್‌ ವಿಕಾಸ್‌ ಪತ್ರದ ಬಡ್ಡಿ ದರ ಶೇ 7.6 ರಿಂದ ಶೇ 6.9ಕ್ಕೆ ಇಳಿದಿದೆ. ಪಬ್ಲಿಕ್​ ಪ್ರಾವಿಡೆಂಟ್​ ಫಂಡ್ ಯೋಜನೆ ಹಾಗೂ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯ ಬಡ್ಡಿದರದಲ್ಲಿ ಸಹ ಇಳಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.