ETV Bharat / business

SMS ಮೂಲಕ Nil GST ರಿಟರ್ನ್ ಫೈಲ್ ಮಾಡುವುದು ಹೇಗೆ?: ಇಲ್ಲಿದೆ ಕಂಪ್ಲೀಟ್ ಗೈಡ್ - ಕಂಪ್ಲೀಟ್ ಗೈಡ್

GSTR-3B ಇದೊಂದು ಸ್ವಯಂ ಘೋಷಿತ ಫಾರ್ಮ್ ಆಗಿದ್ದು, ಜಿಎಸ್​ಟಿ ನೋಂದಣಿ ಮಾಡಿಕೊಂಡಿದ್ದು, ಯಾವುದೇ ವ್ಯವಹಾರ ನಡೆಸಿಲ್ಲದವರೂ ಇದನ್ನು ಸಲ್ಲಿಸಬಹುದು. ಜಿಎಸ್​ಟಿ ಅಡಿ ತೋರಿಸಲು ಯಾವುದೇ ವ್ಯವಹಾರಗಳಿರದವರು ಈ ಮೂಲಕ Nil GST ರಿಟರ್ನ್ ಫೈಲ್ ಮಾಡಬಹುದು. ಆದಾಗ್ಯೂ ಕಂಪೋಸಿಶನ್ ಡೀಲರ್ಸ್, ಇನ್ಪುಟ್ ಸರ್ವಿಸ್ ಡಿಸ್ಟ್ರಿಬ್ಯೂಟರ್ಸ್ ಮತ್ತು ನಾನ್ ರೆಸಿಡೆಂಟ್ ತೆರಿಗೆದಾತರು ಈ ವ್ಯವಸ್ಥೆಯನ್ನು ಬಳಸುವಂತಿಲ್ಲ.

Nil GST Return through SMS
Nil GST Return through SMS
author img

By

Published : Jun 9, 2020, 1:41 PM IST

ನವದೆಹಲಿ: ಕೊರೊನಾ ವೈರಸ್​ನ ಬಿಕ್ಕಟ್ಟಿನ ಸಮಯದಲ್ಲಿ ಜಿಎಸ್​ಟಿ ಪಾವತಿದಾರರಿಗೆ ಜಿಎಸ್​ಟಿ ಫೈಲಿಂಗ್ ಸುಲಭಗೊಳಿಸುವ ಸಲುವಾಗಿ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಇಲಾಖೆಯು (ಸಿಬಿಐಸಿ) ಹೊಸ ವ್ಯವಸ್ಥೆಯೊಂದನ್ನು ಜಾರಿಗೊಳಿಸಿದೆ. ಇನ್ನು ಕೇವಲ ಒಂದು ಎಸ್​ಎಂಎಸ್​​​​​ ಕಳುಹಿಸುವುದರ ಮೂಲಕ ತೆರಿಗೆದಾತರು Nil GST ಫೈಲ್ ಮಾಡಬಹುದಾಗಿದೆ.

ಸೋಮವಾರ ಜೂನ್ 8 ರಿಂದ ಜಾರಿಯಾಗಿರುವ ಈ ಹೊಸ ವ್ಯವಸ್ಥೆಯಲ್ಲಿ ಮಾಸಿಕ ಜಿಎಸ್​ಟಿ ರಿಟರ್ನ್​​ನ GSTR-3B ಫಾರ್ಮ್ ಅನ್ನು ಒಂದು ಎಸ್​ಎಂಎಸ್​​​ ಮೂಲಕ ಸಲ್ಲಿಸಬಹುದು. ಅಂದರೆ GSTR-3B ರಿಟರ್ನ್ ಫೈಲ್ ಮಾಡಲು ಈಗ ತೆರಿಗೆದಾತರು ಜಿಎಸ್​ಟಿ ಪೋರ್ಟಲ್​ಗೆ ಲಾಗಿನ್ ಆಗುವುದು ಕಡ್ಡಾಯವಲ್ಲ.

"ಹೊಸ ವ್ಯವಸ್ಥೆಯಿಂದ 22 ಲಕ್ಷ ನೋಂದಾಯಿತ ತೆರಿಗೆದಾರರಿಗೆ ಜಿಎಸ್​ಟಿ ಫೈಲಿಂಗ್ ನಿಯಮ ಪಾಲಿಸಲು ಅನುಕೂಲವಾಗಲಿದೆ. ಇವರು ಮಾಸಿಕ ಜಿಎಸ್​ಟಿ ರಿಟರ್ನ್ ಫೈಲಿಂಗ್​ಗೆ ಜಿಎಸ್​ಟಿ ಪೋರ್ಟಲ್​ಗೆ ಲಾಗಿನ್ ಆಗುವುದು ಇನ್ನು ಅಗತ್ಯವಿಲ್ಲ." ಎಂದು ಸಿಬಿಐಸಿ ಸುತ್ತೋಲೆಯಲ್ಲಿ ತಿಳಿಸಿದೆ.

ಎಸ್​ಎಂಎಸ್ ಮೂಲಕ GSTR-3B ರಿಟರ್ನ್ ಫಾರ್ಮ್ ಸಲ್ಲಿಸುವ ವ್ಯವಸ್ಥೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಾರ್ಯಗತಗೊಳಿಸಲಾಗಿದೆ. ಅಲ್ಲದೆ ತೆರಿಗೆದಾರರು ತಾವು ಎಸ್​ಎಂಎಸ್ ಮೂಲಕ ಸಲ್ಲಿಸಿದ GSTR-3B ರಿಟರ್ನ್ ಫಾರ್ಮ್ ಯಶಸ್ವಿಯಾಗಿ ಸಲ್ಲಿಕೆಯಾಗಿರುವ ಬಗ್ಗೆ ಖಾತರಿಪಡಿಸಿಕೊಳ್ಳಬಹುದು ಎಂದು ಸಿಬಿಐಸಿ ಹೇಳಿದೆ.

ಬಳಕೆದಾರರು ತಮ್ಮ GSTIN ಅಕೌಂಟಿಗೆ ಲಾಗಿನ್ ಮಾಡಿ Services>Returns>Track Return Status ಪುಟದಲ್ಲಿ ನಿಲ್ ಜಿಎಸ್​ಟಿ ರಿಟರ್ನ್ ಯಶಸ್ವಿಯಾಗಿರುವ ಬಗ್ಗೆ ಪರಿಶೀಲಿಸಬಹುದಾಗಿದೆ.

GSTR-3B ರಿಟರ್ನ್ ಯಾರೆಲ್ಲ ಫೈಲ್ ಮಾಡಬಹುದು?

GSTR-3B ಇದೊಂದು ಸ್ವಯಂ ಘೋಷಿತ ಫಾರ್ಮ್ ಆಗಿದ್ದು, ಜಿಎಸ್​ಟಿ ನೋಂದಣಿ ಮಾಡಿಕೊಂಡಿದ್ದು ಯಾವುದೇ ವ್ಯವಹಾರ ನಡೆಸಿಲ್ಲದವರೂ ಇದನ್ನು ಸಲ್ಲಿಸಬಹುದು. ಜಿಎಸ್​ಟಿ ಅಡಿ ತೋರಿಸಲು ಯಾವುದೇ ವ್ಯವಹಾರಗಳಿರದವರು ಈ ಮೂಲಕ Nil GST ರಿಟರ್ನ್ ಫೈಲ್ ಮಾಡಬಹುದು. ಆದಾಗ್ಯೂ ಕಂಪೋಸಿಶನ್ ಡೀಲರ್ಸ್, ಇನ್ಪುಟ್ ಸರ್ವಿಸ್ ಡಿಸ್ಟ್ರಿಬ್ಯೂಟರ್ಸ್ ಮತ್ತು ನಾನ್ ರೆಸಿಡೆಂಟ್ ತೆರಿಗೆದಾತರು ಈ ವ್ಯವಸ್ಥೆಯನ್ನು ಬಳಸುವಂತಿಲ್ಲ.

ಪ್ರತಿಯೊಂದು ನೋಂದಾಯಿತ GSTN ಸಂಖ್ಯೆಗೆ ಪ್ರತಿ ತಿಂಗಳು ಪ್ರತ್ಯೇಕ GSTR-3B ಸಲ್ಲಿಸಬೇಕಿದ್ದು, ಇದನ್ನು ಪರಿಷ್ಕರಿಸಲು ಅವಕಾಶವಿಲ್ಲ.

Nil GST return ಫೈಲ್ ಮಾಡುವ ಸ್ಟೆಪ್-ಬೈ-ಸ್ಟೆಪ್ ಗೈಡ್

1. Nil GSTR-3B ರಿಟರ್ನ್ ಫೈಲ್ ಮಾಡಲು ಬಯಸುವ ಜಿಎಸ್​ಟಿ ನೋಂದಾಯಿತರು ಫೋನಿನಲ್ಲಿ ಎಸ್​ಎಂಎಸ್ ಸಂದೇಶ ಆಪ್ ತೆರೆದು ಅದರಲ್ಲಿ NIL ಎಂದು ಟೈಪ್ ಮಾಡಿ ಒಂದು ಜಾಗ ಬಿಟ್ಟು, 3B ಎಂದು ಬರೆದು ಮತ್ತೆ ಒಂದು ಜಾಗ ಬಿಟ್ಟು, GSTIN ಸಂಖ್ಯೆ ನಮೂದಿಸಿ ಮತ್ತೊಂದು ಜಾಗ ಬಿಟ್ಟು, MMYYYY ಮಾದರಿಯಲ್ಲಿ ರಿಟರ್ನ್ ಫೈಲ್ ಮಾಡುತ್ತಿರುವ ತಿಂಗಳು ಮತ್ತು ವರ್ಷವನ್ನು ನಮೂದಿಸಬೇಕು.

2. NIL<space>3B<space>GSTIN<space>Tax period ಈ ಮಾದರಿಯಲ್ಲಿ ಬರೆದಾಗ ಅದು ಹೀಗೆ ಕಾಣಿಸುತ್ತದೆ: ‘NIL 3B 09XXXXXXXXXXXZC 052020’ . ಈಗ ಎಸ್ಸೆಮ್ಮೆಸ್ ಅನ್ನು 14409 ಗೆ ಸೆಂಡ್ ಮಾಡಬೇಕು.

3. ಎಸ್ಸೆಮ್ಮೆಸ್ ಕಳುಹಿಸಿದ ನಂತರ ಬಳಕೆದಾರರಿಗೆ 6 ಅಂಕಿಯ ಕೋಡ್ ಬರುತ್ತದೆ ಹಾಗೂ ಇದು ಮುಂದಿನ ಅರ್ಧ ಗಂಟೆಯವರೆಗೆ ಚಾಲ್ತಿಯಲ್ಲಿರುತ್ತದೆ. ಉದಾಹರಣೆಗೆ ಆ ಕೋಡ್ ಹೀಗೆ ಕಾಣಿಸುತ್ತದೆ: 123456 is the CODE for Nil filing of GSTR3B for09XXXXXXXXXXXZC for period 052020. Code validity 30 min.

ಎಸ್​ಎಂಎಸ್ ಮೂಲಕ ಕಳುಹಿಸಲಾದ Nil GST ರಿಟರ್ನ್ ಫೈಲಿಂಗ್ ಖಾತರಿಪಡಿಸಿಕೊಳ್ಳುವುದು ಹೇಗೆ?

ತಾನು ಕಳುಹಿಸಿದ Nil GST ರಿಟರ್ನ್ ಯಶಸ್ವಿಯಾಗಿದೆಯಾ ಅಥವಾ ಇಲ್ಲವಾ ಎಂಬುದನ್ನು ಮತ್ತೊಂದು ಎಸ್ಸೆಮ್ಮೆಸ್ ಕಳುಹಿಸುವ ಮೂಲಕ ಖಾತರಿಪಡಿಸಿಕೊಳ್ಳಬಹುದು. ಅದಕ್ಕಾಗಿ ಬಳಕೆದಾರರು ಈ ಮುಂದೆ ತಿಳಿಸಲಾದ ರೀತಿಯಲ್ಲಿ ಎಸ್ಸೆಮ್ಮೆಸ್ ಬರೆಯಬೇಕು: CNF <space>3B<space>Code, ಇದರಲ್ಲಿ ಬಳಕೆದಾರರು ತಮಗೆ ಬಂದ 6 ಅಂಕಿಯ ಕೋಡ್​ ಅನ್ನು ನಮೂದಿಸಬೇಕು. ಆಗ ಬಳಕೆದಾರರ ಎಸ್​ಎಂಎಸ್ ಹೀಗೆ ಕಾಣಿಸುತ್ತದೆ: CNF 3B 123456. ಈಗ ಇದನ್ನು ಮತ್ತೆ 14409 ಇದೇ ಸಂಖ್ಯೆಗೆ ಸೆಂಡ್ ಮಾಡಬೇಕು.

ಹೀಗೆ ಮಾಡಿದ ನಂತರ GSTN ಪೋರ್ಟಲ್​ನಿಂದ ಮರು ಎಸ್​ಎಂಎಸ್ ಬರುತ್ತದೆ ಹಾಗೂ ಅದು ಈ ರೀತಿಯಾಗಿರುತ್ತದೆ: “Your, 09XXXXXXXXXXXZC, GSTR3B for 052020 is filed successfully and acknowledged vide ARN is AA070219000384. Please use this ARN to track the status of your return.”

ಇದರ ಹೊರತಾಗಿ ಬಳಕೆದಾರನು GSTN ಪೋರ್ಟಲ್​ಗೆ ಲಾಗಿನ್ ಮಾಡಿ Services>Returns>Track Return Status ಪುಟದಲ್ಲಿಯೂ Nil GST ರಿಟರ್ನ್ ಪರಿಶೀಲಿಸಬಹುದು.

ಎಸ್​ಎಂಎಸ್ಎಸ್ಸೆಮ್ಮೆಸ್ ಮೂಲಕ ಅಟೊಮೇಟೆಡ್ GSTN ಸಹಾಯ ಪಡೆಯುವುದು ಹೇಗೆ?

ಜಿಎಸ್​ಟಿ ಬಳಕೆದಾರರು 6 ಅಂಕಿಯ ಎಸ್​ಎಂಎಸ್ ಕಳುಹಿಸುವ ಮೂಲಕ ಸಹಾಯ ಪಡೆಯಬಹುದು. ಇದಕ್ಕಾಗಿ HELP<Space>3B ಎಂದು ಬರೆಯಬೇಕು. ಅದು ಹೀಗೆ ಕಾಣಿಸುತ್ತದೆ: Help 3B. ಈಗ ಇದನ್ನು 14409 ಸಂಖ್ಯೆಗೆ ಕಳುಹಿಸಿದಲ್ಲಿ Nil GSTR-3B ಫೈಲಿಂಗ್​ನ ಮಾದರಿಗಳು ನಿಮ್ಮ ಫೋನಿಗೆ ಬರುತ್ತವೆ.

StepSMS to 14409Receive from VD-GSTIND
Initiate Nil Filing

NIL<space>3B<space>GSTIN<space>Tax period

Ex. NIL 3B 09XXXXXXXXXXXZC 052020

123456 is the CODE for Nil filing of GSTR3B for 09XXXXXXXXXXXZC for period 052020. Code validity 30 min.
Confirming Nil Filing

CNF <space>3B<space>Code

Ex. CNF 3B 123456

Your, 09XXXXXXXXXXXZC, GSTR3B for 052020 is filed successfully and acknowledged vide ARN is AA070219000384. Please use this ARN to track the status of your return.
For Help, anytime

HELP<Space>3B

Ex. Help 3B

To file NIL return of GSTIN for Mar 2020: NIL 3B 07CQZCD1111I4Z7 032020

To confirm Nil filing: CNF 3B CODE

More details: www.gst.gov.in

(ಲೇಖಕರು: ಕೃಷ್ಣಾನಂದ ತ್ರಿಪಾಠಿ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.