ETV Bharat / business

ನಿಮ್ಮ ಕಾರಿಗೆ ಉತ್ತಮ ವಿಮಾ ಪಾಲಿಸಿ ಆಯ್ಕೆ ಬಗೆ ಹೇಗೆ? ಇಲ್ಲಿದೆ ಉತ್ತರ.. - ನೋ ಕ್ಲೇಮ್ ಬೋನಸ್ ಎಂದರೇನು

ಲಕ್ಷಾಂತರ ರೂಪಾಯಿ ಮೌಲ್ಯದ ಕಾರು ಖರೀದಿ ಮಾಡುವ ಜನರು, ವಿಮೆ ಪಾಲಿಸಿ ಮಾಡಿಸಿಕೊಳ್ಳುವ ವಿಚಾರದಲ್ಲಿ ಮಾತ್ರ ನಿರ್ಲಕ್ಷ್ಯ ತೋರುತ್ತಾರೆ. ವಿಮೆ ಮಾಡಿಕೊಂಡರೆ ಆಗುವ ಉಪಯೋಗಗಳು ಮತ್ತು ಯಾವ ರೀತಿಯ ವಿಮೆ ಮಾಡಿಸಿಕೊಳ್ಳಬೇಕು ಎಂಬ ವಿವರ ಇಲ್ಲಿದೆ.

How to choose the best car insurance policy
ನಿಮ್ಮ ಕಾರಿಗೆ ಉತ್ತಮ ವಿಮಾ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಉತ್ತರ
author img

By

Published : Dec 7, 2021, 9:46 AM IST

ಸ್ವಂತ ಕಾರಿನಲ್ಲಿ ಪ್ರಯಾಣಿಸುವುದು ಪ್ರತಿಯೊಬ್ಬರ ಕನಸು. ಆ ಕನಸನ್ನು ನನಸಾಗಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಆದರೆ ತಮ್ಮ ಕಾರುಗಳಿಗೆ ವಿಮೆ ತೆಗೆದುಕೊಳ್ಳುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಾರೆ. ಎಂದಾದರೂ ಒಮ್ಮೆ ಅಪಘಾತವಾದಾಗ ಮಾತ್ರ ವಿಮೆ ಮಾಡಿಸಿದ್ದರೆ, ಚೆನ್ನಾಗಿರ್ತಿತ್ತು ಎಂದು ಅಲವತ್ತುಕೊಳ್ಳುತ್ತಾರೆ. ಕೆಲವರು ಮುಂಜಾಗ್ರತಾ ಕ್ರಮವಾಗಿ ವಿಮೆ ಮಾಡಿಸಿದರೆ, ಇನ್ನೂ ಕೆಲವರು ಬೇರೆ ವ್ಯಕ್ತಿಗಳ ಮಾಡಿದ ತಪ್ಪನ್ನು ನೋಡಿ, ತಮ್ಮ ವಾಹನಗಳಿಗೆ ವಿಮೆ ಮಾಡಿಸುತ್ತಾರೆ.

ಕೋವಿಡ್ ನಂತರ, ಅನೇಕರು ತಮ್ಮ ಸ್ವಂತ ವಾಹನಗಳಲ್ಲಿ ಪ್ರಯಾಣಿಸಲು ಬಯಸುತ್ತಿದ್ದು, ಕಾರು ಖರೀದಿಸುವವರ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಕಾನೂನಿನ ಪ್ರಕಾರ, ಪ್ರತಿ ವಾಹನಕ್ಕೂ ವಿಮೆ ಕಡ್ಡಾಯವಾಗಿದೆ.

ವಾಹನ ವಿಮೆಯ ವಿಧಗಳು:

ವಾಹನ ವಿಮೆಗಳಲ್ಲಿ ಸಮಗ್ರ ವಿಮೆ (Comprehensive Insurance) ಮತ್ತು ಮೂರನೇ ವ್ಯಕ್ತಿಯ ವಿಮೆ (Third Party Insurance) ಎಂಬ ಎರಡು ವಿಮೆಗಳಿವೆ. ವಾಹನವನ್ನು ರಸ್ತೆಗೆ ತರಬೇಕಾದರೆ ಈ Third Party Insurance ಕಡ್ಡಾಯ.

ಈಗ ವಾಹನ ವಿಮಾ ಪಾಲಿಸಿಗಳು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಲಭ್ಯವಿದೆ. ಇತ್ತೀಚಿನ ದಿನಗಳಲ್ಲಿ ಅನೇಕರು ಆನ್‌ಲೈನ್‌ನಲ್ಲಿ ಪಾಲಿಸಿಗಳನ್ನು ನವೀಕರಣ ಮಾಡಲು ಬಯಸುತ್ತಾರೆ. ಆನ್‌ಲೈನ್‌ನಲ್ಲಿ ಪಾಲಿಸಿಗಳನ್ನು ನವೀಕರಣ ಮಾಡುವವರಿಗೆ ಸಹಾಯ ಮಾಡಲೆಂದೇ ವಿಮಾ ಕಂಪನಿಗಳ ಹೆಲ್ಪ್​ ಸೆಂಟರ್​ಗಳು ಸಿದ್ಧವಾಗಿರುತ್ತವೆ. ಕಾರಿಗೆ ಹೊಸ ವಿಮಾ ಪಾಲಿಸಿ ತೆಗೆದುಕೊಳ್ಳುವಾಗ ಅಥವಾ ನವೀಕರಿಸುವಾಗ ತೆಗೆದುಕೊಳ್ಳುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ನಿಮ್ಮ ಆಯ್ಕೆ ಸಮಗ್ರ ವಿಮೆಯಾಗಿರಲಿ:

ಸಾಮಾನ್ಯವಾಗಿ ಜನರು ಕಡಿಮೆ ಪ್ರೀಮಿಯಂ ಇರುವ ಪಾಲಿಸಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಹಾಗೆ ಮಾಡುವುದರಿಂದ ಅನೇಕ ಅನಾನುಕೂಲಗಳಾಗುವ ಸಾಧ್ಯತೆ ಇರುತ್ತದೆ. ಅನೇಕ ಅಂಶಗಳನ್ನು ಗಣನೆಗೆ ತೆಗೆದುಕೊಂಡ ನಂತರ ಸೂಕ್ತ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳುವುದು ಬುದ್ದಿವಂತ ವಾಹನ ಚಾಲಕರ ಲಕ್ಷಣವಾಗಿದೆ.

ಯಾವಾಗಲೂ ನಿಮ್ಮ ವಾಹನಕ್ಕೆ ಸಂಪೂರ್ಣ ರಕ್ಷಣೆ ಒದಗಿಸುವ Comprehensive Insurance ಅನ್ನು ಆಯ್ಕೆ ಮಾಡಿಕೊಂಡರೆ ಒಳ್ಳೆಯದು. ಇದು ಕಾನೂನು ಕಡ್ಡಾಯ ಮಾಡಿರುವ Third Party Insurance ಅನ್ನೂ ಒಳಗೊಂಡಿರುತ್ತದೆ. ಕಾನೂನು ಪಾಲಿಸಲು ಮಾತ್ರವೇ Third Party Insurance ಅನ್ನು ಕೊಂಡುಕೊಂಡರೆ, ಅದು ಕಷ್ಟಕಾಲಕ್ಕೆ ನೆರವಾಗುತ್ತದೆ. ನಿಮ್ಮ ವಾಹನಕ್ಕೆ ಸಣ್ಣಪುಟ್ಟ ಅವಘಡ ಸಂಭವಿಸಿದರೂ ದುರಸ್ತಿಗೆ ಸಾವಿರಾರು ರೂಪಾಯಿ ವೆಚ್ಚವಾಗುತ್ತದೆ ಎಂಬುದನ್ನು ಮರೆಯಬಾರದು.

ಇನ್ನು Comprehensive Insurance ಪಾಲಿಸಿಯಲ್ಲಿ ಪ್ರೀಮಿಯಂ ಕಡಿಮೆ ಇದೆ ಎಂಬ ಕಾರಣಕ್ಕೆ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಬಾರದು. ವಿಮೆ ಕ್ಲೇಮ್ ಆಗುವ ಪ್ರಕ್ರಿಯೆ ಮತ್ತು ಆ ವಿಮೆ ಒದಗಿಸುವ ಸೇವೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದ ನಂತರವೇ ವಿಮೆಯನ್ನು ತೆಗೆದುಕೊಳ್ಳಬೇಕು.

ಪಾಲಿಸಿ ಖರೀದಿಸಿದ ನಂತರ:

ಅವಧಿ ಮುಗಿಯುವ ಮೊದಲೇ ಪಾಲಿಸಿಯನ್ನು ನವೀಕರಿಸಬೇಕು. ಇಲ್ಲದಿದ್ದರೆ, ನೋ ಕ್ಲೈಮ್ ಬೋನಸ್ (ಎನ್‌ಸಿಬಿ) ಕಳೆದುಕೊಳ್ಳುವ ಅಪಾಯವಿದೆ. ಆದ್ದರಿಂದ, ಗಡುವಿನ ಮೊದಲು ನವೀಕರಣವನ್ನು ಮಾಡಲು ಮರೆಯಬಾರದು.

ನೋ ಕ್ಲೇಮ್ ಬೋನಸ್ ಎಂದರೆ ಒಂದು ಕಾರಿಗೆ ವಿಮೆ ಮಾಡಿಸಿರುತ್ತೀರಿ. ಆ ಕಾರಿಗೆ ನೀವು ಗಡುವು ಮೀರುವ ಮೊದಲು ನವೀಕರಣ ಮಾಡುತ್ತಿರುತ್ತೀರಿ. ಒಂದು ವೇಳೆ ನೀವು ಕಾರನ್ನು ಮಾರಿದಾಗ ಆ ನೋ ಕ್ಲೇಮ್ ಬೋನಸ್ ನಿಮ್ಮ ಬಳಿಯೇ ಉಳಿಯುತ್ತದೆ. ಹೊಸದಾಗಿ ಕಾರನ್ನು ಖರೀದಿಸಿದ ನಂತರ ಆ ವಿಮಾ ಪಾಲಿಸಿಯನ್ನು ಈ ಕಾರಿಗೆ ಅಳವಡಿಸಿಕೊಳ್ಳಬಹುದು.

ನೀವು ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವಾಗ, ಅದರಲ್ಲಿ ನಮೂದಿಸಲಾದ ವಾಹನ ಮತ್ತು ಮಾಲೀಕರ ವಿವರಗಳು ಸರಿಯಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಗಮನಕ್ಕೆ ಬರುವ ತಪ್ಪುಗಳನ್ನು ತಕ್ಷಣವೇ ವಿಮಾ ಕಂಪನಿಯ ಗಮನಕ್ಕೆ ತರಬೇಕಾಗುತ್ತದೆ. ಯಾವುದೇ ಸಂದರ್ಭದಲ್ಲೂ ಮೋಸದ ವಿಮಾ ಪಾಲಿಸಿಗಳನ್ನು ನಂಬಬಾರದು.

ಇದನ್ನೂ ಓದಿ: ಒಂದೇ ಒಂದು ಜೂಮ್ ಕರೆಯಲ್ಲಿ 900ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಬಾಸ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.