ETV Bharat / business

ಹೊಸ ಹೋಂಡಾ ಅಮೇಜ್ ಬಿಡುಗಡೆ: ಆರಂಭಿಕ ಬೆಲೆ ಎಷ್ಟು ಗೊತ್ತಾ..? - ಹೋಂಡಾ ಅಮೇಜ್ ಬೆಲೆ

ಹೋಂಡಾ ಕಾರ್ಸ್​ ಇಂಡಿಯಾ ಲಿಮಿಟೆಡ್​ ಹೋಂಡಾ ಅಮೇಜ್​​ನ 2021 ಮಾಡೆಲ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಬೆಲೆ 6.32 ಲಕ್ಷ ರೂ.

Amaze
ಹೊಸ ಹೋಂಡಾ ಅಮೇಜ್
author img

By

Published : Aug 18, 2021, 6:12 PM IST

ನವದೆಹಲಿ: ಹೋಂಡಾ ಕಾರ್ಸ್ ತನ್ನ ಸೆಡಾನ್ ಕಾರು ಹೋಂಡಾ ಅಮೇಜ್​​ನ 2021 ಮಾಡೆಲ್ ಹೋಂಡಾ ಅಮೇಜ್‌-2021 ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಆರಂಭಿಕ ಎಕ್ಸ್ ಶೋರೂಂ ಬೆಲೆ ರೂ 6.32 ಲಕ್ಷ ರೂ. ಆಗಿದೆ.

ಇದರ ಉನ್ನತ ರೂಪಾಂತರದ ಎಕ್ಸ್ ಶೋರೂಂ ಬೆಲೆ 11.15 ಲಕ್ಷ ರೂ. ಎಂದು ನಿಗದಿಪಡಿಸಲಾಗಿದೆ. ಈ ಕಾರಿನ ಬುಕ್ಕಿಂಗ್ ಕೂಡ ಆರಂಭವಾಗಿದ್ದು, ಒಟ್ಟು 5 ಬಣ್ಣದ ವೇರಿಯಂಟ್​ಗಳಲ್ಲಿ ಇದು ಲಭ್ಯ ಇರಲಿದೆ.

ಏನೇನು ಪೀಚರ್ಸ್​​​ ಇದರಲ್ಲಿವೆ

ಹೊಸ ಹೋಂಡಾ ಅಮೇಜ್‌ 2021 ಕಾರನ್ನು ಪೆಟ್ರೋಲ್ ಇಂಜಿನ್ ಮತ್ತು ಡೀಸೆಲ್ ಇಂಜಿನ್​​​ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಕಾರನ್ನು ಮೂರು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ (ಮ್ಯಾನುಯಲ್) - New AMAZE VX, New AMAZE S ಮತ್ತು New AMAZE E. ಪೆಟ್ರೋಲ್ ರೂಪಾಂತರವು 1.2 ಲೀಟರ್ i-VTEC ಇಂಜಿನ್ ಹೊಂದಿದೆ. ಇದರ ಮೈಲೇಜ್ ಪ್ರತಿ ಕಿಲೋಮೀಟರಿಗೆ 18.6 ಕಿಲೋಮೀಟರ್. ಡೀಸೆಲ್ ರೂಪಾಂತರವು 1.5-ಲೀಟರ್ i-DTEC ಎಂಜಿನ್ ಹೊಂದಿದೆ. ಇದರ ಮೈಲೇಜ್ ಪ್ರತಿ ಕಿಲೋಮೀಟರಿಗೆ 24.7 ಕಿಲೋಮೀಟರ್. ಈ ಹೊಸ ಮಾದರಿಯ ಕಾರು ಪ್ಲಾಟಿನಂ ವೈಟ್ ಪರ್ಲ್, ರೆಡಿಯಂಟ್ ರೆಡ್, ಮಿಟಿಯೋರೈಡ್ ಗ್ರೇ, ಲುನಾರ್ ಸಿಲ್ವರ್ ಹಾಗೂ ಗೋಲ್ಡನ್ ಬ್ರೌನ್ ನಲ್ಲಿ ಲಭ್ಯವಿದೆ.

ಎಲ್ಇಡಿ ಪೊಸಿಶನ್ಸ್ ಹ್ಯಾಲೊಜೆನ್ ಹೆಡ್ ಲ್ಯಾಂಪ್ಸ್, ಎಲ್ಇಡಿ ರಿಯರ್ ಕಾಂಬಿನೇಷನ್ ಲ್ಯಾಂಪ್ಸ್, ಎಲ್ಇಡಿ ಟರ್ನ್ ಇಂಡಿಕೇಟರ್ ಆನ್ ಡೋರ್ ಮಿರರ್ಸ್, ಬಂಪರ್ ವಿತ್ ಆರ್ ಆರ್ ರಿಫ್ಲೆಕ್ಟರ್, ಕ್ರೋಮ್ ಇನ್ಸೈಡ್ ಡೋರ್ ಹ್ಯಾಂಡಲ್ಸ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್, ಟಿಲ್ಟ್ ಸ್ಟೀರಿಂಗ್ ಈ ಕಾರು ಒಳಗೊಂಡಿರಲಿದೆ.

ಈವರೆಗೂ ಇಷ್ಟೊಂದು ವ್ಯವಹಾರ

"2013 ರಲ್ಲಿ ಪ್ರಾರಂಭವಾದಾಗಿನಿಂದ, ಅಮೇಜ್ ನಮ್ಮ ಯಶಸ್ವಿ ಮಾದರಿಯಾಗಿದೆ ಮತ್ತು ಭಾರತದಲ್ಲಿ ನಮ್ಮ ವ್ಯವಹಾರದ ಪ್ರಮುಖ ಆಧಾರಸ್ತಂಭವಾಗಿದೆ. ಕಳೆದ ಎಂಟು ವರ್ಷಗಳಲ್ಲಿ ಇದರ ಸಂಚಿತ ಮಾರಾಟವು ದೇಶದಲ್ಲಿ 4.5 ಲಕ್ಷ ಘಟಕಗಳನ್ನು ದಾಟಿದೆ" ಎಂದು ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ( ಎಚ್‌ಸಿಐಎಲ್) ಅಧ್ಯಕ್ಷ ಮತ್ತು ಸಿಇಒ ಗಾಕು ನಾಕಾನಿಶಿ ಸುದ್ದಿಗಾರರಿಗೆ ತಿಳಿಸಿದರು.

ಅಮೇಜ್ ಅನ್ನು ಭಾರತೀಯ ಗ್ರಾಹಕರಿಗಾಗಿ ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಪ್ರತ್ಯೇಕವಾಗಿ ಭಾರತದಲ್ಲಿ ತಯಾರಿಸಲಾಗಿದೆ ಎಂದು ಅವರು ಹೇಳಿದರು. ಈ ಮಾದರಿಯು ದೇಶದ ಅತಿ ಹೆಚ್ಚು ಮಾರಾಟವಾಗುವ ಸೆಡಾನ್‌ಗಳಲ್ಲಿ ತನ್ನ ಸ್ಥಾನವನ್ನು ಕಾಯ್ದುಕೊಂಡಿದೆ ಎಂದು ನಕನಿಶಿ ತಿಳಿಸಿದ್ದಾರೆ.

ಈ ಮಾದರಿಯನ್ನು ದಕ್ಷಿಣ ಆಫ್ರಿಕಾ ಮತ್ತು ಕೆಲವು ನೆರೆಯ ರಾಷ್ಟ್ರಗಳಾದ ನೇಪಾಳ ಮತ್ತು ಭೂತಾನ್‌ಗೆ ರಫ್ತು ಮಾಡಲಾಗುತ್ತಿದೆ ಎಂದು ನಕಾನಿಶಿ ಹೇಳಿದರು. ಕಳೆದ ಎರಡು ವರ್ಷ ಮತ್ತು ಅರ್ಧ ವರ್ಷಗಳು ದೇಶೀಯ ಆಟೋ ಉದ್ಯಮಕ್ಕೆ ಅತ್ಯಂತ ಕಷ್ಟಕರವಾಗಿದೆ ಎಂದು ನಕನಿಷಿ ವಿವರಿಸಿದ್ರು.

2019ರಲ್ಲಿ ಮಾರಾಟ ಕ್ಷೀಣಿಸುತ್ತಾ ಸಾಗಿತು ಮತ್ತು ನಂತರ ಕೋವಿಡ್ ಬಿಕ್ಕಟ್ಟು ಉದ್ಯಮದ ಮೇಲೆ ವ್ಯಾಪಕ ಪರಿಣಾಮ ಬೀರಿದೆ ಎಂದು ಅವರು ಹೇಳಿದರು. ಎರಡನೇ ಕೋವಿಡ್ ಅಲೆ ಪ್ರಭಾವ ಬೀರಿದರೂ ಕಾರು ಮಾರಾಟ ಮತ್ತೊಮ್ಮೆ ಗಮನಾರ್ಹವಾಗಿ ಸುಧಾರಿಸಿದೆ ಎಂದು ನಕನಿಶಿ ತಿಳಿಸಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.