ನವದೆಹಲಿ: ಇಂದು ಬಹುನಿರೀಕ್ಷಿತ 2021-22ರ ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, ಮಾಜಿ ಹಣಕಾಸು ಸಚಿವ ಹಾಗೂ ಕಾಂಗ್ರೆಸ್ನ ಹಿರಿಯ ನಾಯಕ ಪಿ.ಚಿದಂಬರಂ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.
ಕೊರೊನಾ ಸಾಂಕ್ರಾಮಿಕ ಹಾಗೂ ಗಡಿ ಬಿಕ್ಕಟ್ಟಿನ ನಡುವೆ ಆರೋಗ್ಯ ಹಾಗೂ ರಕ್ಷಣಾ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದಲ್ಲಿ ಅನುದಾನ ಬಿಡುಗಡೆ ಮಾಡುವುದು ಅನಿವಾರ್ಯವಾಗಿದೆ. ಇದರಲ್ಲಿ ಯಾವುದೇ ರೀತಿಯ ಚೌಕಾಸಿ ಮಾಡಲು ಆಗುವುದಿಲ್ಲ. ಆದರೆ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಸರ್ಕಾರದ ಬಳಿ ಈ ವಲಯಗಳಿಗೆ ಅನುದಾನ ನೀಡಲು ಅಷ್ಟೊಂದು ಹಣವಿದೆಯೇ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.
-
Watch out for increase in healthcare expenditure and increase in defence expenditure. These are two non-negotiables
— P. Chidambaram (@PChidambaram_IN) February 1, 2021 " class="align-text-top noRightClick twitterSection" data="
Then watch out for the 10 heads highlighted by the Congress party on 28th January
">Watch out for increase in healthcare expenditure and increase in defence expenditure. These are two non-negotiables
— P. Chidambaram (@PChidambaram_IN) February 1, 2021
Then watch out for the 10 heads highlighted by the Congress party on 28th JanuaryWatch out for increase in healthcare expenditure and increase in defence expenditure. These are two non-negotiables
— P. Chidambaram (@PChidambaram_IN) February 1, 2021
Then watch out for the 10 heads highlighted by the Congress party on 28th January
ಆರೋಗ್ಯ ಹಾಗೂ ರಕ್ಷಣಾ ವಲಯವನ್ನು ಹೊರತುಪಡಿಸಿ, ಜನವರಿ 28ರಂದು ಕಾಂಗ್ರೆಸ್ ಪಕ್ಷ ನೀಡಿದ 10 ಅಂಶಗಳ ಬಜೆಟ್ ಅಜೆಂಡಾವನ್ನು ವಿತ್ತ ಸಚಿವರು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ. ಈ 10 ಅಂಶಗಳ ಬಗ್ಗೆ ಅರ್ಥಶಾಸ್ತ್ರಜ್ಞರು ಮತ್ತು ಸಾಮಾಜ ವಿಜ್ಞಾನಿಗಳಲ್ಲಿ ಒಮ್ಮತವಿದೆ ಎಂದು ಮಾಜಿ ಹಣಕಾಸು ಸಚಿವರು ಟ್ವೀಟ್ನಲ್ಲಿ ಹೇಳಿದ್ದಾರೆ.
-
Apart from increase in allocations for Healthcare and Defence, I shall rate the Budget on the 10 points outlined by the Congress party
— P. Chidambaram (@PChidambaram_IN) January 31, 2021 " class="align-text-top noRightClick twitterSection" data="
There is broad consensus among economists and social scientists on these 10 points.
">Apart from increase in allocations for Healthcare and Defence, I shall rate the Budget on the 10 points outlined by the Congress party
— P. Chidambaram (@PChidambaram_IN) January 31, 2021
There is broad consensus among economists and social scientists on these 10 points.Apart from increase in allocations for Healthcare and Defence, I shall rate the Budget on the 10 points outlined by the Congress party
— P. Chidambaram (@PChidambaram_IN) January 31, 2021
There is broad consensus among economists and social scientists on these 10 points.
ಈಗಿನ ಹಣಕಾಸು ಸಚಿವರು ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಆರ್ಥಿಕ ಹಿಂಜರಿತದ ನಾಯಕತ್ವ ಹೊರಲಿದ್ದಾರೆ. ಯಾರ ಮಾತೂ ಕೇಳದ ಹಠಮಾರಿ ಮೋದಿ ಸರ್ಕಾರ ಕಾಲ್ಪನಿಕ ಬಜೆಟ್ ಮಂಡಿಸಲಿದೆ ಎಂದು ಬಜೆಟ್ ಅಧಿವೇಶನಕ್ಕೂ ಮುನ್ನ ಚಿದಂಬರಂ ವ್ಯಂಗ್ಯ ಮಾಡಿದ್ದರು.