ETV Bharat / business

ತೆರಿಗೆ ಪಾವತಿಸಿಲ್ಲವೇ!  ಹೊಸ ಟಿಡಿಎಸ್ ನಿಯಮಗಳು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಗೊತ್ತಾ? - ಹೊಸ ಟಿಡಿಎಸ್ ನಿಯಮ

ಹೊಸ ಟಿಡಿಎಸ್ ನಿಯಮದ ಪ್ರಕಾರ, ಹಿಂದಿನ ಮೂರು ವರ್ಷಗಳಿಂದ ತೆರಿಗೆ ಪಾವತಿ ಮಾಡದ ತೆರಿಗೆದಾರರಿಗೆ ನಗದು ಹಿಂಪಡೆಯುವಿಕೆಯ ಮಿತಿಯನ್ನು ಹಿಂದಿನ 1 ಕೋಟಿ ರೂ.ಗಳಿಂದ 20 ಲಕ್ಷರೂ.ಗೆ ಇಳಿಸಲಾಗಿದೆ. ಅಂತಹ ತೆರಿಗೆದಾರರು 20 ಲಕ್ಷ ರೂ.ಗಳಿಗಿಂತ ಹೆಚ್ಚು ಹಣ ಡ್ರಾ ಮಾಡಿದ್ದರೆ, ಅವರು ಈಗ ಶೇ.2ರಷ್ಟು ಟಿಡಿಯಸ್ ಆಗಿ ಪಾವತಿ ಮಾಡಬೇಕಾಗುತ್ತದೆ. ಇನ್ನು ಈ ನಿಯಮವು ಜುಲೈ 1, 2020ರಿಂದ ಜಾರಿಗೆ ಬರಲಿದೆ.

tax
tax
author img

By

Published : Apr 25, 2020, 3:30 PM IST

ಹೈದರಾಬಾದ್: ನೀವು ಹಿಂದಿನ ಮೂರು ಹಣಕಾಸು ವರ್ಷಗಳಲ್ಲಿ ಆದಾಯತೆರಿಗೆ (ಐಟಿಆರ್) ಸಲ್ಲಿಸದೇ ಇದ್ದು, ಅಲ್ಲದೇ 20 ಲಕ್ಷ ರೂ.ಗಿಂತ ಹೆಚ್ಚು ಹಣವನ್ನು ಬ್ಯಾಂಕ್​ನಿಂದ ಡ್ರಾ ಮಾಡಿದ್ದಲ್ಲಿ, ನೀವು ಡ್ರಾ ಮಾಡಿದ ಹಣದ ಮೇಲೆ 2 ಶೇ. ಟಿಡಿಎಸ್(ತೆರಿಗೆ ಮೂಲಗಳಲ್ಲಿ ಕಡಿತ) ಚಾರ್ಜ್ ಮಾಡಲಾಗುತ್ತದೆ.

ಹಿಂದಿನ ಮೂರು ಹಣಕಾಸು ವರ್ಷಗಳಲ್ಲಿ ಆದಾಯ ತೆರಿಗೆ ಪಾವತಿಸದೇ, 20 ಲಕ್ಷಕ್ಕಿಂತ ಹೆಚ್ಚು ಹಣ ಡ್ರಾ ಮಾಡಿದ್ದರೆ, ಶೇ2ರಷ್ಟು ತೆರಿಗೆ ಮೂಲಗಳಲ್ಲಿ ಕಡಿತ ಮಾಡಲಾಗುತ್ತದೆ. ಒಂದು ವೇಳೇ ಹಣ ಹಣ ಡ್ರಾ 1 ಕೋಟಿಗಿಂತ ಹೆಚ್ಚಿದ್ದರೆ, ಇದು 5 ಶೇ. ಆಗುತ್ತದೆ.

ಹೊಸ ಟಿಡಿಎಸ್(ಟ್ಯಾಕ್ಸ್ ಡಿಡಕ್ಟೆಡ್‍ ಯಟ್ ಸೋರ್ಸ್) ನಿಯಮದ ಪ್ರಕಾರ, ಹಿಂದಿನ ಮೂರು ವರ್ಷಗಳಿಂದ ತೆರಿಗೆ ಪಾವತಿ ಮಾಡದ ತೆರಿಗೆದಾರರಿಗೆ ನಗದು ಹಿಂಪಡೆಯುವಿಕೆಯ ಮಿತಿಯನ್ನು ಹಿಂದಿನ 1 ಕೋಟಿ ರೂ.ಗಳಿಂದ 20 ಲಕ್ಷರೂ.ಗೆ ಇಳಿಸಲಾಗಿದೆ. ಅಂತಹ ತೆರಿಗೆದಾರರು 20 ಲಕ್ಷ ರೂ.ಗಳಿಗಿಂತ ಹೆಚ್ಚು ಹಣ ಡ್ರಾ ಮಾಡಿದ್ದರೆ, ಅವರು ಈಗ ಶೇ.2ರಷ್ಟು ಟಿಡಿಯಸ್ ಆಗಿ ಪಾವತಿ ಮಾಡಬೇಕಾಗುತ್ತದೆ. ಇನ್ನು ಈ ನಿಯಮವು ಜುಲೈ 1, 2020ರಿಂದ ಜಾರಿಗೆ ಬರಲಿದೆ.

ಟಿಡಿಎಸ್‍ಎಂದರೇನು?

ಟಿಡಿಎಸ್, ಒಬ್ಬ ತೆರಿಗೆದಾರನ ಆದಾಯದ ಮೂಲದ ಮೇಲೆ ತೆರಿಗೆ ಕಡಿತ ಮಾಡುವ ವಿಧಾನವಾಗಿದೆ. ನಗದು ಪಾವತಿಗಳನ್ನು ಕಡಿಮೆಗೊಳಿಸಲು 2019ರ ಕೇಂದ್ರ ಬಜೆಟ್‍ನಲ್ಲಿ ಟಿಡಿಎಸ್‍ನಲ್ಲಿ 1 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಡ್ರಾ ಮಾಡುವ ಸಂಬಂಧ 194N ಸೆಕ್ಷನ್ ಪರಿಚಯಿಸಲಾಗಿದೆ. ಈ ಸೆಕ್ಷನ್​ ಟಿಡಿಎಸ್ ಕಡಿತಗೊಳಿಸಲು ಬ್ಯಾಂಕ್, ಸಹಕಾರಿ ಬ್ಯಾಂಕ್ ಮತ್ತು ಅಂಚೆ ಕಚೇರಿಗಳಿಗೆ ನಿರ್ದೇಶನ ನೀಡುತ್ತದೆ.

ಸದ್ಯ ಹಣಕಾಸು ಕಾಯ್ದೆ 2020ರ ಪ್ರಕಾರ, ಜುಲೈ 1, 2020ರಿಂದ ಜಾರಿ ಬರುವಂತೆ ಟಿಡಿಎಸ್‍ನ ಈ ಮಿತಿಯನ್ನು 20 ಲಕ್ಷ ರೂ.ಗೆ ಇಳಿಸಲಾಗಿದೆ. ಮೂರು ವರ್ಷಗಳ ಕಾಲ ತೆರಿಗೆ ಪಾವತಿಸದ ತೆರಿಗೆದಾರರು ಒಂದು ವೇಳೆ 1 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಡ್ರಾ ಮಾಡಿದ್ದಲ್ಲಿ, ಟಿಡಿಎಸ್‍ ದರವನ್ನು ಶೇ.5ಕ್ಕೆ ಹೆಚ್ಚಿಸಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.