ನವದೆಹಲಿ: ನಕಲಿ ದಾಖಲೆಗಳ ಮೇಲೆ ಕಾಲ್ಪನಿಕ ಸಂಸ್ಥೆ ಹುಟ್ಟುಹಾಕಿ 43 ಕೋಟಿ ರೂ. ಮೌಲ್ಯದ ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಂಚಿಸಿದ ಪ್ರಕರಣದಡಿ ಓರ್ವನನ್ನು ಬಂಧಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಹರಿಯಾಣದ ಜಿಎಸ್‌ಟಿ ಇಂಟೆಲಿಜೆನ್ಸ್‌ನ ನಿರ್ದೇಶನಾಲಯದ (ಡಿಜಿಎಂಐ) ಗುರುಗ್ರಾಮ್ ವಲಯ ಘಟಕ (ಜಿ ಝೆಡ್ಯು) ದೆಹಲಿಯ ನಿವಾಸಿ ರವೀಂದರ್ ಕುಮಾರ್ ಎಂಬುವವರನ್ನು ಬಂಧಿಸಿದೆ. ಸರಕು ಅಥವಾ ಸೇವೆಗಳ ನೈಜ ರಶೀದಿ ಮತ್ತು ಪೂರೈಕೆಯಿಲ್ಲದೆ ನಕಲಿ ಇನ್‌ವಾಯ್ಸ್‌ಗಳಲ್ಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಂಚನೆ ಎಸಗಿದ್ದ.
ಇದುವರೆಗೆ ನಡೆದ ತನಿಖೆಯಿಂದ ಕುಮಾರ್ ಅವರು ಹರಿಯಾಣ, ದೆಹಲಿ ಮತ್ತು ಜಾರ್ಖಂಡ್ ಮೂಲದ ಬಹು ಮಾಲೀಕತ್ವ, ಪಾಲುದಾರಿಕೆ ಸಂಸ್ಥೆಗಳು ಮತ್ತು ಖಾಸಗಿ ಸೀಮಿತ ಕಂಪನಿಗಳನ್ನು ಕೇವಲ ಕಾಗದದ ಮೇಲೆ ತೋರಿಸಿ ತೆರಿಗೆ ತಪ್ಪಿಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ಬಹುತೇಕ ರಾಷ್ಟ್ರಗಳ ಆರ್ಥಿಕತೆ 2022ರ ತನಕ ಕೋವಿಡ್‌ಪೂರ್ವ ಮಟ್ಟಕ್ಕೆ ಮರಳದು: ಮೂಡಿಸ್
ರವೀಂದರ್ ಪರಾರಿಯಾಗಿ ತನ್ನ ಸ್ಥಳಗಳನ್ನು ಬದಲಾಯಿಸುತ್ತಲೇ ಇದ್ದನು. ಅಧಿಕಾರಿಗಳು ಆಗಾಗ್ಗೆ ಅವನ ಸ್ಥಳಗಳನ್ನು ಗಮನಿಸುತ್ತಲೇ ಇದ್ದರು. ದೀರ್ಘಕಾಲದ ಮೇಲ್ವಿಚಾರಣೆ ಮತ್ತು ಕಣ್ಗಾವಲಿನ ನಂತರ ಅವನನ್ನು ಬಂಧಿಸಲು ಸಾಧ್ಯವಾಯಿತು ಎಂದು ಹೇಳಿದೆ.
ಎರಡು ಖಾಸಗಿ ಕಂಪನಿಗಳು, ಒಂದು ಪಾಲುದಾರಿಕೆ ಸಂಸ್ಥೆ ಮತ್ತು ಬಹು ಸ್ವಾಮ್ಯದ ಸಂಸ್ಥೆಗಳನ್ನು ರಚಿಸಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. 237.98 ಕೋಟಿ ರೂ. ಸರಕುಗಳಿಲ್ಲದೆ ಒಂದೇ ಇನ್ವಾಯ್ಸ್ ತಯಾರಿಸಿದ್ದ. 43 ಕೋಟಿ ರೂ.ಗಳಿಗಿಂತ ಹೆಚ್ಚಿನ ಮೊತ್ತದ ನಕಲಿ ಐಟಿಸಿಗೆ ರವಾನಿಸಿದ್ದ. ಕುಮಾರ್ ಅವರನ್ನು ಮಾರ್ಚ್ 9ರಂದು ಬಂಧಿಸಿ 14 ದಿನಗಳ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆ.