ETV Bharat / business

ಜಿಎಸ್​ಟಿ ಬಾಕಿ: ಕೇಂದ್ರದ ಎರಡು ಆಯ್ಕೆ ನೀತಿಗೆ ಕೇರಳ, ಪಂಜಾಬ್ ವಿರೋಧ, ಬಿಹಾರ ಒಪ್ಪಿಗೆ

ಕೇರಳದ ಹಣಕಾಸು ಮಂತ್ರಿ ಥಾಮಸ್ ಇಸಾಕ್ ಮತ್ತು ಪಂಜಾಬ್‌ನ ವಿತ್ತ ಸಚಿವ ಮನ್‌ಪ್ರೀತ್ ಬಾದಲ್ ಅವರು ಕೇಂದ್ರದ ಪ್ರಸ್ತಾವನೆ ವಿರೋಧಿಸಿ, ಸಾರ್ವಜನಿಕರ ನಡೆಗೆ ವಿರುದ್ಧವಾಗಿ ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದರು. ಸಂವಿಧಾನ ಬದ್ಧವಾದ ಜಿಎಸ್​​ಟಿ ಬಾಕಿ ಪಾವತಿಗೆ ಇತರ ರಾಜ್ಯಗಳು ಕೇಂದ್ರವನ್ನು ಸಾಲಕ್ಕೆ ಒತ್ತಾಯಿಸಿದಾಗ ಸಭೆಯ ಆರಂಭದಿಂದಲೂ ಸಾಲ ಪಡೆಯಲು ಬಿಹಾರ ತನ್ನ ಇಚ್ಛೆ ಇರುವುದಾಗಿ ಸಮ್ಮತಿಸಿತು.

ವಿತ್ತ ಸಚಿವೆ ನಿರ್ಮಲಾ ಸೀತರಾಮನ್​
ವಿತ್ತ ಸಚಿವೆ ನಿರ್ಮಲಾ ಸೀತರಾಮನ್​
author img

By

Published : Aug 28, 2020, 4:17 PM IST

41ನೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿ ಸಭೆಯಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಪ್ರಸ್ತಾಪಿಸಿದ ಎರಡು ಆಯ್ಕೆಗಳ ಸೂತ್ರವನ್ನು ಹಲವು ರಾಜ್ಯಗಳು ವಿರೋಧಿಸಿ ಅಸಮಾಧಾನ ವ್ಯಕ್ತಪಡಿಸಿವೆ. ಪ್ರಸಕ್ತ ವರ್ಷದಲ್ಲಿ ತಮ್ಮ ಆದಾಯ ಸಂಗ್ರಹದಲ್ಲಿನ ಕೊರತೆ ನೀಗಿಸಿಕೊಳ್ಳಲು ರಾಜ್ಯಗಳು ರಿಸರ್ವ್ ಬ್ಯಾಂಕ್ ರೂಪಿಸಿದ ಕಾರ್ಯವಿಧಾನದ ಮೂಲಕ ಸಾಲ ಪಡೆಯಬೇಕಿದೆ.

ಕೇರಳದ ಹಣಕಾಸು ಮಂತ್ರಿ ಥಾಮಸ್ ಇಸಾಕ್ ಮತ್ತು ಪಂಜಾಬ್‌ನ ವಿತ್ತ ಸಚಿವ ಮನ್‌ಪ್ರೀತ್ ಬಾದಲ್ ಅವರು ಕೇಂದ್ರದ ಪ್ರಸ್ತಾವನೆ ವಿರೋಧಿಸಿ, ಸಾರ್ವಜನಿಕರ ನಡೆಗೆ ವಿರುದ್ಧವಾಗಿ ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದರು.

ಸಭೆಯಲ್ಲಿ ನಾಟಕೀಯ ಬೆಳವಣಿಗೆಯೊಂದು ನಡೆದಿದ್ದು, ಸಂವಿಧಾನದ ಬದ್ಧವಾದ ಜಿಎಸ್​​ಟಿ ಬಾಕಿ ಪಾವತಿಗೆ ಇತರ ರಾಜ್ಯಗಳು ಕೇಂದ್ರವನ್ನು ಸಾಲಕ್ಕೆ ಒತ್ತಾಯಿಸಿದಾಗ ಸಭೆಯ ಆರಂಭದಿಂದಲೂ ಸಾಲ ಪಡೆಯಲು ಬಿಹಾರ ತನ್ನ ಇಚ್ಛೆ ಇರುವುದಾಗಿ ಸಮ್ಮತಿಸಿತು.

ಬಿಹಾರವು ತನ್ನ ಆದಾಯದ ಕೊರತೆ ಪೂರೈಸಿಕೊಳ್ಳಲು ಹಣವನ್ನು ಎರವಲು ಪಡೆಯಲು ಒಪ್ಪಿಕೊಂಡಿದೆ. ಆದರೆ ಇತರ ರಾಜ್ಯಗಳು ಇದಕ್ಕೆ ವಿರುದ್ಧವಾಗಿವೆ ಎಂದು ಜಿಎಸ್​ಟಿ ಮಂಡಳಿ ಸಭೆಯಲ್ಲಿ ಆರಂಭಿಕ ಚರ್ಚೆಯ ವಿವರ ತಿಳಿದಿರುವ ವ್ಯಕ್ತಿಯೊಬ್ಬರು ಈಟಿವಿ ಭಾರತಗೆ ತಿಳಿಸಿದರು.

ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ವರ್ಚ್ಯುಲ್​​ ಸಭೆಯಲ್ಲಿ, ರಾಜ್ಯಗಳು ಸಾಂವಿಧಾನಿಕವಾಗಿ ಖಾತರಿಪಡಿಸಿದ ಜಿಎಸ್‌ಟಿ ಬಾಕಿ ಪಾವತಿಸಲು ಕೇಂದ್ರವು ಸಾಲವನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು ಎಂದರು.

ಜಿಎಸ್‌ಟಿ ವ್ಯವಸ್ಥೆಯಿಂದ ಆಗಿರುವ ಆದಾಯ ಕೊರತೆಯಾದ 97,000 ಕೋಟಿ ರೂ.ಸಾಲವಾಗಿ ಪಡೆಯುವುದು. ಅಥವಾ, ಜಿಎಸ್‌ಟಿ ಆದಾಯ ಕೊರತೆ ಹಾಗೂ ಕೋವಿಡ್‌–19ನಿಂದ ಆಗಿರುವ ನಷ್ಟವನ್ನೂ ಒಳಗೊಂಡ ಒಟ್ಟು 2.35 ಲಕ್ಷ ಕೋಟಿ ರೂ.ಯನ್ನೂ ಸಾಲವಾಗಿ ಪಡೆಯುವುದು ಎಂಬ ಎರಡು ಆಯ್ಕೆಗಳನ್ನು ಪಡೆಯಬಹುದು ಎಂದು ನಿರ್ಮಲಾ ಸೀತಾರಾಮನ್ ಬ್ರೀಫಿಂಗ್‌ನಲ್ಲಿ ಹೇಳಿದರು.

2017ರ ಜಿಎಸ್​​ಟಿ (ರಾಜ್ಯಗಳಿಗೆ ಪರಿಹಾರ) ಕಾಯ್ದೆ ಅನ್ವಯ, ಐದು ವರ್ಷಗಳ ಪರಿವರ್ತನೆಯ ಅವಧಿಯಲ್ಲಿ ರಾಜ್ಯಗಳು ತಮ್ಮ ಆದಾಯ ಸಂಗ್ರಹಣೆಯಲ್ಲಿನ ಯಾವುದೇ ನಷ್ಟವನ್ನು ಸರಿದೂಗಿಸಲು ಕೇಂದ್ರ ಪಾವತಿಸಬೇಕಿದೆ.

ಕಂದಾಯ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಅವರ ಪ್ರಕಾರ, ಈ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಪರಿಹಾರ ಬಾಕಿ 1.5 ಲಕ್ಷ ಕೋಟಿ ರೂ.ಯಷ್ಟಿದೆ ಎಂದು ಒಪ್ಪಿಕೊಂಡಿದ್ದಾರೆ.

ಕೇಂದ್ರವು ಜಿಎಸ್​​ಟಿ ಪರಿಹಾರದ ಬಾಕಿಗಳನ್ನು ದ್ವಿಮಾನ ಆಧಾರದ ಮೇಲೆ ಪಾವತಿಸುತ್ತದೆ. ಈ ಮೊತ್ತದಲ್ಲಿ ಈಗಾಗಲೇ ಸಾಕಷ್ಟು ಬಾಕಿ ಉಳಿಸಿಕೊಂಡಿದೆ. ಈ ವರ್ಷ ಸರ್ಕಾರದ ಸ್ವಂತ ಯೋಜನೆಯ ಪ್ರಕಾರ ಜಿಎಸ್​ಟಿ ಪರಿಹಾರ ಪಾವತಿ ಸುಮಾರು 3 ಲಕ್ಷ ಕೋಟಿ ರೂ.ಯಷ್ಟಿದೆ.

ಸರ್ಕಾರದ ಅಂದಾಜಿನ ಪ್ರಕಾರ, ಈ ವರ್ಷ ಜಿಎಸ್​​ಟಿ ಸೆಸ್ ಸಂಗ್ರಹದ ರಾಜ್ಯಗಳ ಆದಾಯ ಜಮಾವಣೆಯಲ್ಲಿ ಒಟ್ಟು 3 ಲಕ್ಷ ಕೋಟಿ ರೂ. ಕೊರತೆಯ ಇದ್ದು, ಕೇವಲ 65,000 ಕೋಟಿ ರೂ. ಸಂಗ್ರಹ ಇರಲಿದೆ ಎಂದು ನಿರೀಕ್ಷಿಸಲಾಗಿದೆ.

ಎರಡೂ ಆಯ್ಕೆಗಳನ್ನು ವಿವರವಾದ ರೂಪದಲ್ಲಿ ನೀಡುವಂತೆ ರಾಜ್ಯಗಳು ಕೇಂದ್ರವನ್ನು ಕೇಳಿಕೊಂಡಿವೆ. ಏಳು ದಿನಗಳ ನಂತರ ತಮ್ಮ ಅಭಿಪ್ರಾಯಗಳೊಂದಿಗೆ ಕೇಂದ್ರಕ್ಕೆ ತಿಳಿಸುವುದಾಗಿ ಹೇಳಿವೆ.

ನಾವು ಈ ಬಳಿಕ ಒಂದು ಸಣ್ಣ ಜಿಎಸ್​​ಟಿ ಮಂಡಳಿ ಸಭೆ ನಡೆಸಬಹುದು ಎಂದು ಹಣಕಾಸು ಸಚಿವೆ ಹೇಳಿದ್ದಾರೆ.

-ಕೃಷ್ಣಾನಂದ ತ್ರಿಪಾಠಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.