ETV Bharat / business

ರಾಜ್ಯಗಳ ಜಿಎಸ್​ಟಿ ನಷ್ಟ ಪರಿಹಾರ:  5 ವರ್ಷ ಮೀರಿ ವಿಸ್ತರಿಸುವ ಸಾಧ್ಯತೆ

2019ರ ಆಗಸ್ಟ್​ ತಿಂಗಳಿಂದ ಆದಾಯ ಸಂಗ್ರಹಣೆಯಲ್ಲಿ ಇಳಿಕೆಯಾಗುತ್ತಿದ್ದು, ರಾಜ್ಯಗಳಿಗೆ ಜಿಎಸ್​ಟಿ ಪರಿಹಾರ ಪಾವತಿ ವಿಳಂಬವಾಗಿದೆ. ಕಟ್- ಆಫ್ ಐದನೇ ವರ್ಷವನ್ನು ಮೀರಿ ಕನಿಷ್ಠ ಎರಡು ವರ್ಷಗಳಾದರೂ ಪರಿಹಾರ ಸೆಸ್​ನ ಸುಂಕವನ್ನು ವಿಸ್ತರಿಸಲು ಜಿಎಸ್​ಟಿ ಕೌನ್ಸಿಲ್ ಅನುಮೋದನೆ ಪಡೆಯಲು ಕೇಂದ್ರವು ಈಗ ಎದುರು ನೋಡುತ್ತಿದೆ.

GST council
ಜಿಎಸ್​ಟಿ
author img

By

Published : May 21, 2020, 3:58 PM IST

ನವದೆಹಲಿ: ದೇಶಾದ್ಯಂತ ಜಿಎಸ್‌ಟಿ ಸಂಗ್ರಹದಲ್ಲಿನ ತೀವ್ರ ಕುಸಿತ ಮತ್ತು ಆರ್ಥಿಕ ಚಟುವಟಿಕೆಗಳ ಅಡೆತಡೆ ಎದುರಿಸುತ್ತಿರುವ ಕೇಂದ್ರ ಸರ್ಕಾರ, ತನ್ನ ಸಾಲಗಳ ಒಂದು ಭಾಗವನ್ನು ಬಳಸಿಕೊಂಡು ರಾಜ್ಯಗಳಿಗೆ ನೀಡಬೇಕಿರುವ ಜಿಎಸ್‌ಟಿ ಪರಿಹಾರವನ್ನು 6ನೇ ಅಥವಾ ನಂತರದ ವರ್ಷಗಳಲ್ಲಿ ಸೆಸ್ ಸಂಗ್ರಹದ ಮೂಲಕ ಮರುಪಾವತಿಸಲು ಚಿಂತಿಸುತ್ತಿದೆ.

ಜಿಎಸ್​ಟಿ ಕಾಯ್ದೆ ಪ್ರಕಾರ, ಜುಲೈ 2017ರಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಜಾರಿಗೆ ಬಂದ ನಂತರ ಮೊದಲ ಐದು ವರ್ಷಗಳವರೆಗೆ ಯಾವುದೇ ಆದಾಯ ನಷ್ಟಕ್ಕೆ ರಾಜ್ಯಗಳಿಗೆ ಸಂಪೂರ್ಣ ಪರಿಹಾರದ ಭರವಸೆ ನೀಡಿದೆ. ಕೇಂದ್ರ ಸರ್ಕಾರವು 2016-17 ಮೂಲ ವರ್ಷದಲ್ಲಿ ಪರಿಹಾರ ಮೊತ್ತವನ್ನು ಆದಾಯದ ಮೇಲೆ ಶೇಕಡಾ 14ಕ್ಕೆ ನಿಗದಿ ಪಡಿಸಲಾಗಿದೆ.

ರಾಜ್ಯಗಳಿಗೆ ಸಂಪೂರ್ಣ ಜಿಎಸ್​ಟಿ ಪರಿಹಾರವನ್ನು 2022ರ ಹಣಕಾಸು ವರ್ಷದರವರೆಗೆ ಐದು ವರ್ಷಗಳ ಅವಧಿಗೆ ಪಾವತಿಸಬೇಕಾಗುತ್ತದೆ. ಕೆಲವು ವಸ್ತುಗಳ ಮೇಲೆ ಜಿಎಸ್​ಟಿ ಪರಿಹಾರ ಸೆಸ್ ವಿಧಿಸುತ್ತದೆ.

2019ರ ಆಗಸ್ಟ್​ ತಿಂಗಳಿಂದ ಆದಾಯ ಸಂಗ್ರಹಣೆಯಲ್ಲಿ ಇಳಿಕೆಯಾಗುತ್ತಿದ್ದು, ರಾಜ್ಯಗಳಿಗೆ ಜಿಎಸ್​ಟಿ ಪರಿಹಾರ ಪಾವತಿ ವಿಳಂಬವಾಗಿದೆ. ಕಟ್-ಆಫ್ ಐದನೇ ವರ್ಷವನ್ನು ಮೀರಿ ಕನಿಷ್ಠ ಎರಡು ವರ್ಷಗಳಾದರೂ ಪರಿಹಾರ ಸೆಸ್​ನ ಸುಂಕವನ್ನು ವಿಸ್ತರಿಸಲು ಜಿಎಸ್​ಟಿ ಕೌನ್ಸಿಲ್ ಅನುಮೋದನೆ ಪಡೆಯಲು ಕೇಂದ್ರವು ಈಗ ಎದುರು ನೋಡುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.