ETV Bharat / business

ರೇಷನ್‌ ಅಂಗಡಿಗಳಲ್ಲೇ ಅಡುಗೆ ಸಿಲಿಂಡರ್‌ ವಿತರಣೆಗೆ ಕೇಂದ್ರ ಸರ್ಕಾರದ ಚಿಂತನೆ..! - ಸಣ್ಣ ಅಡುಗೆ ಅನಿಲ ಸಿಲಿಂಡರ್‌

ರೇಷನ್‌ ಅಂಗಡಿಗಳ ಮೂಲಕವೇ ಸಣ್ಣ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡುವ ಬಗ್ಗೆ ಯೋಜಿಸುತ್ತಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

govt proposes sale of small lpg cylinders offering financial services via ration shops
ರೇಷನ್‌ ಅಂಗಡಿಗಳಲ್ಲೇ ಅಡುಗೆ ಸಿಲಿಂಡರ್‌ ವಿತರಣೆಗೆ ಕೇಂದ್ರ ಸರ್ಕಾರ ಚಿಂತನೆ..!
author img

By

Published : Oct 28, 2021, 6:31 PM IST

ನವದೆಹಲಿ: ಪಡಿತರ ಅಂಗಡಿಗಳ ಮೂಲಕವೇ ಸಣ್ಣ ಅಡುಗೆ ಅನಿಲ ಸಿಲಿಂಡರ್‌ಗಳ ಮಾರಾಟಕ್ಕೆ ಅವಕಾಶ ನೀಡಲು ಯೋಜಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದರಿಂದ ರೇಷನ್‌ ಅಂಗಡಿ ಮಾಲೀಕರಿಗೆ ಹೆಚ್ಚಿನ ಆರ್ಥಿಕ ಸ್ಥಿರತೆಯನ್ನು ತರುತ್ತದೆ ಎಂದು ಕೇಂದ್ರ ಪಡಿತರ ಇಲಾಖೆ ಕಾರ್ಯದರ್ಶಿ ಸುಧಾಂಶು ಪಾಂಡೆ ತಿಳಿಸಿದ್ದಾರೆ.

ಎಲ್ಲಾ ರಾಜ್ಯಗಳೊಂದಿಗೆ ಸಭೆ ನಡೆಸಿದ ಅವರು, ಪಡಿತರ ಅಂಗಡಿಗಳ ಮೂಲಕ ಸಣ್ಣ ಅಡುಗೆ ಅನಿಲ ಸಿಲಿಂಡರ್ ಮಾರಾಟಕ್ಕೆ ಅವಕಾಶ ಕಲ್ಪಿಸುವ ಆಲೋಚನೆ ಹೊಂದಿದ್ದೇವೆ ಎಂದು ಹೇಳಿದ್ದಾರೆ. ಈ ವಿಷಯದಲ್ಲಿ ಆಸಕ್ತಿ ಹೊಂದಿರುವ ರಾಜ್ಯಗಳಲ್ಲಿನ ಪಡಿತರ ಅಂಗಡಿಗಳಿಗೆ ಅಗತ್ಯ ಬೆಂಬಲವನ್ನು ನೀಡುವುದಾಗಿ ಹಣಕಾಸು ಸೇವೆಗಳ ಇಲಾಖೆ ಬಹಿರಂಗಪಡಿಸಿದೆ.

ಪಡಿತರ ಅಂಗಡಿ ಮಾಲೀಕರಿಗೆ ಮುದ್ರಾ ಸಾಲವನ್ನು ವಿಸ್ತರಿಸಲು ಯೋಜಿಸಿದೆ. ಈ ಅವಕಾಶವನ್ನು ಸ್ವೀಕರಿಸುವಂತೆ ಕೇಂದ್ರ ಪಡಿತರ ಇಲಾಖೆ ಕಾರ್ಯದರ್ಶಿ ರಾಜ್ಯಗಳಿಗೆ ಸಲಹೆ ನೀಡಿದ್ದಾರೆ.

ಕೇಂದ್ರ ಐಟಿ, ಎಲೆಕ್ಟ್ರಾನಿಕ್ಸ್, ಹಣಕಾಸು ಮತ್ತು ಪೆಟ್ರೋಲಿಯಂ ಇಲಾಖೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನ ಅಧಿಕಾರಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.