ETV Bharat / business

ಪ್ರೀತಿ ಪಾತ್ರರಿಗೆ 'ಆಕ್ಸಿಜನ್ ಕಾನ್ಸಂಟ್ರೇಟರ್​' ಗಿಫ್ಟ್​ ಮಾಡಲು ಅನುಮತಿ: ಅಂಚೆ, ಆನ್​ಲೈನ್ ಖರೀದಿಗೂ ಅಸ್ತು! - ಭಾರತ ಕೋವಿಡ್​-19 ಪ್ರಕರಣಗಳ ಅಪ್ಡೇಟಾ

ಆಮ್ಲಜನಕ ಸಾಂದ್ರತೆಯು ವೈದ್ಯಕೀಯ ಸಾಧನವಾಗಿದೆ. ಹೆಚ್ಚುತ್ತಿರುವ ಕೋವಿಡ್​ -19 ಪ್ರಕರಣಗಳಿಂದಾಗಿ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ. ಈ ಸಾಂದ್ರಕಗಳು ಗಾಳಿ ಸೆರೆ ಹಿಡಿಯುತ್ತವೆ ಮತ್ತು ಫಿಲ್ಟರ್ ಮಾಡುತ್ತವೆ. ಆಮ್ಲಜನಕದ ಸಿಲಿಂಡರ್‌ಗಳಿಗಿಂತ ಭಿನ್ನವಾಗಿ ಇದು ನಿಗದಿತ ಪ್ರಮಾಣದ ಆಮ್ಲಜನಕ ಮಾತ್ರ ಸಂಗ್ರಹಿಸುತ್ತದೆ.

oxygen
oxygen
author img

By

Published : May 1, 2021, 4:47 PM IST

ನವದೆಹಲಿ: ಹೆಚ್ಚುತ್ತಿರುವ ಕೋವಿಡ್​-19 ಪ್ರಕರಣಗಳಿಂದಾಗಿ ಆಮ್ಲಜನಕದ ಬೇಡಿಕೆಯೂ ಏರಿಕೆ ಆಗುತ್ತಿದೆ. ಈ ಮಧ್ಯೆ ಉಡುಗೊರೆ ವಿಭಾಗದ ಅಡಿ ಪೋಸ್ಟ್, ಕೊರಿಯರ್ ಅಥವಾ ಇ-ಕಾಮರ್ಸ್ ಪೋರ್ಟಲ್‌ಗಳ ಮೂಲಕ ವೈಯಕ್ತಿಕ ಬಳಕೆಗಾಗಿ ಆಮ್ಲಜನಕ ಸಾಂದ್ರತೆ (ಕಾನ್ಸಂಟ್ರೇಟರ್‌) ಆಮದು ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.

ಆಮ್ಲಜನಕ ಸಾಂದ್ರತೆಗಳಿಗೆ ವಿನಾಯಿತಿಯನ್ನು 2021ರ ಜುಲೈ 31ರವರೆಗೆ ಮಾತ್ರ ಅನುಮತಿಸಲಾಗಿದೆ. ಮಾರ್ಗಸೂಚಿಗಳ ಪ್ರಕಾರ, 1,000 ರೂ.ಗಿಂತ ಹೆಚ್ಚಿನ ಉಡುಗೊರೆಗಳು ಕಸ್ಟಮ್ಸ್ ಸುಂಕ ಮತ್ತು ಶೇ 28ರಷ್ಟು ಜಿಎಸ್​ಟಿ ಒಳಗೊಂಡಿರುತ್ತದೆ.

ಆಮ್ಲಜನಕ ಸಾಂದ್ರತೆಯು ವೈದ್ಯಕೀಯ ಸಾಧನವಾಗಿದೆ. ಹೆಚ್ಚುತ್ತಿರುವ ಕೋವಿಡ್​ -19 ಪ್ರಕರಣಗಳಿಂದಾಗಿ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ. ಈ ಸಾಂದ್ರಕಗಳು ಗಾಳಿಯನ್ನು ಸೆರೆಹಿಡಿಯುತ್ತವೆ ಮತ್ತು ಫಿಲ್ಟರ್ ಮಾಡುತ್ತವೆ. ಆಮ್ಲಜನಕದ ಸಿಲಿಂಡರ್‌ಗಳಿಗಿಂತ ಭಿನ್ನವಾಗಿ ಇದು ನಿಗದಿತ ಪ್ರಮಾಣದ ಆಮ್ಲಜನಕ ಮಾತ್ರ ಸಂಗ್ರಹಿಸುತ್ತದೆ.

ವೈಯಕ್ತಿಕ ಬಳಕೆಗಾಗಿ ಆಮ್ಲಜನಕ ಸಾಂದ್ರತೆ ಆಮದು ಮಾಡಿಕೊಳ್ಳುವುದನ್ನು ಸರ್ಕಾರವು ಅಂಚೆ, ಕೊರಿಯರ್ ಅಥವಾ ಇ - ಕಾಮರ್ಸ್ ಪೋರ್ಟಲ್‌ಗಳ ಮೂಲಕ ವಿನಾಯಿತಿ ಪಡೆದ ವರ್ಗಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಅಲ್ಲಿ ಕಸ್ಟಮ್ಸ್ ಕ್ಲಿಯರೆನ್ಸ್ ಅನ್ನು ಉಡುಗೊರೆಯಾಗಿ ಕೋರಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಈ ಮೊದಲು ಆಮ್ಲಜನಕ ಸಾಂದ್ರಕಗಳನ್ನು ಪಟ್ಟಿಯಲ್ಲಿ ಉಲ್ಲೇಖಿಸಿರಲಿಲ್ಲ. ಈಗ ಕೋವಿಡ್​-19 ಪ್ರಕರಣಗಳಿಂದಾಗಿ ಅದರ ಹೆಚ್ಚಿನ ಬೇಡಿಕೆಯು ಈ ಪಟ್ಟಿಗೆ ಸೇರುವಂತೆ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.