ETV Bharat / business

ಸರ್ಕಾರ ಸಾಮಾಜಿಕ ಭದ್ರತೆ ಒದಗಿಸಿ ಕಾರ್ಮಿಕ ಕಾನೂನು ಸುಧಾರಿಸಬೇಕಿದೆ: ಉದಯ್ ಕೋಟಕ್ - ವಿದೇಶಿ ಹೂಡಿಕೆ

ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ)ದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕೋಟಕ್ ಮಹೀಂದ್ರಾ ಬ್ಯಾಂಕಿನ ಸಿಇಒ ಉದಯ್ ಕೋಟಕ್, ವಲಸೆ ಕಾರ್ಮಿಕರ ಸಾಮಾಜಿಕ ಭದ್ರತೆ ಕುರಿತು ಮಾತನಾಡಿದ್ದಾರೆ.

Uday Kotak
ಉದಯ್ ಕೋಟಕ್
author img

By

Published : Jun 5, 2020, 5:10 PM IST

ನವದೆಹಲಿ: ದೇಶದಲ್ಲಿ ವಿದೇಶಿ ಹೂಡಿಕೆಯನ್ನು ಆಕರ್ಷಿಸಬೇಕೆಂದರೆ ಕಾರ್ಮಿಕ ಕಾನೂನುಗಳನ್ನು ಸುಧಾರಿಸುವ ಅವಶ್ಯಕತೆಯಿದೆ. ಆದರೆ ಎಲ್ಲಾ ರಾಜ್ಯ ಸರ್ಕಾರಗಳು ವಲಸೆ ಕಾರ್ಮಿಕರಿಗೆ ಮೊದಲು ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಈಟಿವಿ ಭಾರತ ಕೇಳಿದ ಪ್ರಶ್ನೆಯೊಂದಕ್ಕೆ ಕೋಟಕ್ ಮಹೀಂದ್ರಾ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಉದಯ್ ಕೋಟಕ್ ಪ್ರತಿಕ್ರಿಯಿಸಿದ್ದಾರೆ.

ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಮಹಾರಾಷ್ಟ್ರ ಸೇರಿ ಅನೇಕ ರಾಜ್ಯಗಳು ಕಾರ್ಮಿಕ ಕಾನೂನನ್ನು ತಿದ್ದುಪಡಿ ಮಾಡಿದ್ದು, ಕಾರ್ಮಿಕರಿಗೆ ವಾರಕ್ಕೆ ಇದ್ದ ಕೆಲಸದ ಅವಧಿಯ ಗರಿಷ್ಠ ಮಿತಿಯನ್ನು ಹೆಚ್ಚಳ ಮಾಡಿವೆ. ಅಷ್ಟೇ ಅಲ್ಲದೆ ಕಾರ್ಮಿಕ ಕಲ್ಯಾಣಕ್ಕಾಗಿ ಇದ್ದ ಸೌಲಭ್ಯಗಳನ್ನು ರದ್ದು ಮಾಡಿವೆ. ಈ ಮೂಲಕ ಕಾರ್ಮಿಕರ ಮೇಲಿನ ಶೋಷಣೆಗೆ ಮತ್ತೆ ಬುನಾದಿ ಹಾಕಿರುವ ಆರೋಪ ಎದುರಿಸುತ್ತಿವೆ.

ವಿದೇಶಿ ಹೂಡಿಕೆದಾರರನ್ನು ಸೆಳೆಯುವುದು ಇದರ ಹಿಂದಿನ ಉದ್ದೇಶವಾಗಿದೆ. ಕೆಲವು ಪಾಶ್ಚಿಮಾತ್ಯ ದೇಶಗಳು ಹಾಗೂ ಚೀನಾ ಸರ್ಕಾರದ ಜೊತೆಗಿನ ಸಂಬಂಧ ಹುಳಿಯಾಗಿದ್ದು, ಚೀನಾ ಬಿಟ್ಟು ಇತರ ಪ್ರದೇಶದಲ್ಲಿ ಹೂಡಿಕೆ ಮಾಡಲು ಕೆಲ ದೇಶಗಳು ಯೋಚಿಸುತ್ತಿವೆ. ಇಂತಹ ಸಂದರ್ಭದಲ್ಲಿ ಭಾರತದಲ್ಲಿ ಅವರು ಹೂಡಿಕೆ ಮಾಡುವಂತೆ ಆಕರ್ಷಿಸಲು ಕಾರ್ಮಿಕ ಕಾನೂನುಗಳಿಗಿದ್ದ ನಿರ್ಬಂಧಗಳನ್ನು ಕೆಲ ರಾಜ್ಯಗಳು ಸಡಿಲಗೊಳಿಸಿವೆ.

ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ)ದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಉದಯ್ ಕೋಟಕ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಹಲವು ವರ್ಷಗಳಿಂದ ಅನೇಕ ಕಾರಣಗಳಿಂದಾಗಿ ದೇಶದಲ್ಲಿ ಖಾಸಗಿ ಹೂಡಿಕೆಗಳನ್ನು ಮಾಡಲಾಗುತ್ತಿದೆ. ಹೂಡಿಕೆಯಿಂದ ಮಾತ್ರ ಉದ್ಯೋಗ ಸೃಷ್ಟಿಸಲು ಸಾಧ್ಯ. ಆದರೆ ಮೊದಲು ಕಾರ್ಮಿಕರ ಹಿತದೃಷ್ಟಿ, ಸಾಮಾಜಿಕ ಭದ್ರತೆಯನ್ನು ಕಾಪಾಡಬೇಕು. ವಲಸೆ ಕಾರ್ಮಿಕರು ತಮಗೆ ಬೇಕಾದಾಗ ಅವರ ಊರುಗಳಿಗೆ ತೆರಳಲು ಅವಕಾಶ ಮಾಡಿಕೊಡಬೇಕು. ಅಸ್ತಿತ್ವದಲ್ಲಿರುವ ವ್ಯವಸ್ಥೆಯ ಬದಲಾವಣೆ ಆಗಬೇಕು. ವಲಸೆ ಕಾರ್ಮಿಕರಿಗೆ ನಗರಗಳಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.