ನವದೆಹಲಿ: ಕೇಂದ್ರ ಸರ್ಕಾರವು 24 ರಾಜ್ಯಗಳ 62 ನಗಳಲ್ಲಿ ಇ- ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಅನುಮತಿ ನೀಡಲಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಫೇಮ್ ಇಂಡಿಯಾ ಯೋಜನೆಯಡಿ 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 62 ನಗರಗಳಲ್ಲಿ 2,636 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಅನುಮತಿ ನೀಡಿದೆ. ಇದು ಮೂಲ ಉಪಕರಣ ತಯಾರಕರಿಗೆ ಹೊಸ ಎಲೆಕ್ಟ್ರಿಕ್ ವಾಹನ ಮಾದರಿಗಳನ್ನು ಬಿಡುಗಡೆ ಮಾಡಲು ಉತ್ತೇಜನ ನೀಡುತ್ತದೆ ಎಂದರು.
ನಗರಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ನಿಯೋಜಿಸಲು ಫೆಮಾ ಇಂಡಿಯಾ ಯೋಜನೆಯ ಹಂತ ಎರಡರ ಅಡಿಯಲ್ಲಿ ಪ್ರೋತ್ಸಾಹ ಧನಗಳನ್ನು ಪಡೆಯಲು ಹೆವಿ ಇಂಡಸ್ಟ್ರಿ ಇಲಾಖೆ ಸಂಸ್ಥೆಗಳಿಂದ ಆಸಕ್ತಿಯ ಅಭಿವ್ಯಕ್ತಿಗಳನ್ನು ಆಹ್ವಾನಿಸಿತ್ತು.
ಈ ಎಲ್ಲಾ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಆಯ್ದ ನಗರಗಳಲ್ಲಿ 4 ಕಿ.ಮೀ x 4 ಕಿ.ಮೀ ಗ್ರಿಡ್‌ನಲ್ಲಿ ಕನಿಷ್ಠ ಒಂದು ಚಾರ್ಜಿಂಗ್ ಸ್ಟೇಷನ್ ಲಭ್ಯವಾಗಲಿದೆ. ಇದು ಎಲೆಕ್ಟ್ರಿಕ್ ವಾಹನಗಳ ಬಳಕೆದಾರರ ವಿಶ್ವಾಸವನ್ನು ಹೆಚ್ಚಿಸಲಿದ್ದು, ಮೂಲಸೌಕರ್ಯಗಳ ಕೊರತೆಯಿಂದ ಹಿಂಜರಿಯುತ್ತಿದ್ದ ಎಲೆಕ್ಟ್ರಿಕ್ ವಾಹನೋದ್ಯಮಕ್ಕೆ ಉತ್ತೇಜನ ಸಿಗಲಿದೆ. ಹೊಸ ಮಾದರಿಗಳ ಬಿಡುಗಡೆ ಮಾಡಲು ಇದು ನೆರವಾಗಲಿದೆ ಎಂದು ಸಚಿವರು ಹೇಳಿದರು.
ಮಹಾರಾಷ್ಟ್ರದಲ್ಲಿ 317, ಆಂಧ್ರಪ್ರದೇಶದಲ್ಲಿ 266, ತಮಿಳುನಾಡಿನಲ್ಲಿ 256, ಗುಜರಾತ್ನಲ್ಲಿ 228, ರಾಜಸ್ಥಾನಲ್ಲಿ 205, ಉತ್ತರ ಪ್ರದೇಶದಲ್ಲಿ 207, ಕರ್ನಾಟಕದಲ್ಲಿ 172, ಮಧ್ಯಪ್ರದೇಶದಲ್ಲಿ 159, ಪಶ್ಚಿಮ ಬಂಗಾಳದಲ್ಲಿ 141, ತೆಲಂಗಾಣದಲ್ಲಿ 138, ಕೇರಳದಲ್ಲಿ 131 ಸೇರಿ 24 ರಾಜ್ಯಗಳಲ್ಲಿ ಒಟ್ಟು 2,636 ಇ-ಚಾರ್ಜಿಂಗ್ ಕೇಂದ್ರಗಳು ಸ್ಥಾಪನೆ ಆಗಲಿವೆ.