ನವದೆಹಲಿ: ಕಳೆದ ಕೆಲ ದಿನಗಳಿಂದ ನಿರಂತರವಾಗಿ ಇಳಿಕೆ ಹಾದಿ ಹಿಡಿದಿದ್ದ ಹಳದಿ ಲೋಹದಲ್ಲಿ ಇಂದು ದಿಢೀರ್ ಏರಿಕೆ ಕಂಡು ಬಂದಿದ್ದು, ಇದರಿಂದ ಆಭರಣ ಪ್ರಿಯರಿಗೆ ಶಾಕ್ ಆಗಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 422 ರೂಪಾಯಿ ಏರಿಕೆಯಾಗಿದೆ. ಈ ಮೂಲಕ 45,560ರೂ ಆಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಮೇಲಿನ ಬೇಡಿಕೆ ಹೆಚ್ಚಾಗಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು HDFC ಸೆಕ್ಯೂರಿಟಿಸ್ ತಿಳಿಸಿದ್ದು, ಬೆಳ್ಳಿ ಬೆಲೆಯಲ್ಲೂ 113ರೂಪಾಯಿ ಏರಿಕೆ ಕಂಡು ಬಂದಿದೆ. ಈ ಮೂಲಕ ಪ್ರತಿ ಕೆಜಿ ಬೆಳ್ಳಿ ಬೆಲೆ ಸದ್ಯ 61,314 ರೂಪಾಯಿ ಆಗಿದೆ.
ಇದನ್ನೂ ಓದಿರಿ: ಅಂತ್ಯಕ್ರಿಯೆ ನಡೆಸಲು ಹಣವಿಲ್ಲ ಎಂದು ಫ್ರಿಡ್ಜ್ನಲ್ಲಿ ಅಜ್ಜನ ಮೃತದೇಹವಿಟ್ಟ ಮೊಮ್ಮಗ!
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ಗೆ USD 1,756 ಆಗಿದ್ದು, ಬೆಳ್ಳಿ ಬೆಳೆ USD 23.44 ಆಗಿದೆ. ಕಳೆದೊಂದು ವಾರದಿಂದ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಇಳಿಕೆ ಕಂಡು ಬಂದಿತ್ತು. ಹೀಗಾಗಿ 10 ಗ್ರಾಂ ಚಿನ್ನದ ಬೆಲೆ 44 ಸಾವಿರ ಗಡಿಗೆ ಬಂದಿತ್ತು.