ETV Bharat / business

ಕೆಳಮುಖವಾದ ಬಂಗಾರ-ಬೆಳ್ಳಿ ದರ : ಶೇ.016ರಷ್ಟು ಕುಸಿತ ಕಂಡ ಚಿನ್ನ - ಬೆಳ್ಳಿಯ ಬೆಲೆ

ಮಲ್ಟಿ ಕಮೋಡಿಟಿ ಎಕ್ಸ್​ಚೇಂಜ್ (ಎಂಸಿಎಕ್ಸ್) ನಲ್ಲಿನ ಚಿನ್ನದ ಬೆಲೆ ಬೆಳಿಗ್ಗೆ 10.14 ರ ವೇಳೆಗೆ ಶೇ.0.16 ಕುಸಿದು 47,557 ರೂ.ಗೆ ತಲುಪಿದೆ. ಈ ಹಿಂದೆ 47,633 ರೂ. ಇತ್ತು..

Gold
ಬಂಗಾರ-ಬೆಳ್ಳಿ
author img

By

Published : May 12, 2021, 2:20 PM IST

ದುರ್ಬಲ ಜಾಗತಿಕ ಸೂಚನೆಗಳ ನಡುವೆ ಚಿನ್ನ, ಬೆಳ್ಳಿ ಬೆಲೆ ಕುಸಿದಿದೆ. ಮಲ್ಟಿ ಕಮೋಡಿಟಿ ಎಕ್ಸ್​ಚೇಂಜ್ (ಎಂಸಿಎಕ್ಸ್) ನಲ್ಲಿನ ಚಿನ್ನದ ಬೆಲೆ ಬೆಳಿಗ್ಗೆ 10.14 ರ ವೇಳೆಗೆ ಶೇ.0.16 ಕುಸಿದು 47,557 ರೂ.ಗೆ ತಲುಪಿದೆ. ಈ ಹಿಂದೆ 47,633 ರೂ. ಇತ್ತು.

ಇನ್ನು, ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ ಶೇ.0.54 ಅಥವಾ 385 ರೂ.ಗಳ ಕುಸಿತ ಕಂಡಿದ್ದು, ಮಂಗಳವಾರ ದಿನಾಂತ್ಯಕ್ಕೆ 71,544 ರೂ. ಆಗಿದೆ. ಈ ಹಿಂದೆ 71,929 ರೂ.ಗೆ ತಲುಪಿತ್ತು.

ಭಾರತದಲ್ಲಿ ಚಿನ್ನದ ಬೆಲೆಯನ್ನು ಅಂತಾರಾಷ್ಟ್ರೀಯ ಪ್ರವೃತ್ತಿಗಳು ಮತ್ತು ರೂಪಾಯಿ-ಡಾಲರ್ ವಿನಿಮಯ ದರದಿಂದ ನಡೆಸಲಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಬುಧವಾರ ಕುಸಿದಿವೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಔನ್ಸ್‌ಗೆ 1,830.30 ಡಾಲರ್‌ ಮತ್ತು ಬೆಳ್ಳಿ ಔನ್ಸ್‌ಗೆ 27.492 ಡಾಲರ್‌ಗೆ ಸಮತಟ್ಟಾಗಿದೆ.

"ಡಾಲರ್ ಸ್ವಲ್ಪ ಬಲಗೊಂಡಿದೆ. ಹಣದುಬ್ಬರ ದರವು ನಿರೀಕ್ಷೆಗಿಂತ ಹೆಚ್ಚಿದ್ದರೆ, ಕೇಂದ್ರೀಯ ಬ್ಯಾಂಕುಗಳು ತಮ್ಮ ವಿತ್ತೀಯ ನೀತಿಗಳನ್ನು ನಿರೀಕ್ಷೆಗಿಂತ ವೇಗವಾಗಿ ಬಿಗಿಗೊಳಿಸುವುದನ್ನು ಪರಿಗಣಿಸಲು ಇದು ಪ್ರೋತ್ಸಾಹಿಸಬಹುದು" ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ಡೈಲಿ ಎಫ್‌ಎಕ್ಸ್‌ನ ತಂತ್ರಜ್ಞ ಮಾರ್ಗರೇಟ್ ಯಾಂಗ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.