ಮುಂಬೈ: ಸೋಮವಾರ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಿಲ್ಲದೆ 10 ಗ್ರಾಂನ 24 ಕ್ಯಾರೆಟ್ ಚಿನ್ನವು 47,220 ರೂ. ಮಾರಾಟವಾಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,220 ರೂ. ಆಗಿದ್ದು, ಬೆಳ್ಳಿಯ ದರದಲ್ಲಿ ಯಾವುದೇ ಬದಲಾವಣೆಯಾಗದೆ 1 ಕೆ.ಜಿಗೆ 64,400 ರೂ.ನಂತೆ ಮಾರಾಟವಾಗಿದೆ.
ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ದರ 51,560 ರೂ., ಮುಂಬೈನಲ್ಲಿ ಹಳದಿ ಲೋಹ 47,220 ರೂ. ದೆಹಲಿ ಮತ್ತು ಮುಂಬೈನಲ್ಲಿ ಇಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಕ್ರಮವಾಗಿ ರೂ 47,260 ಮತ್ತು ರೂ 46,220 ಆಗಿದೆ.
ಇತ್ತ ಚೆನ್ನೈನಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನ 49,550 ರೂ.ಗೆ ಮಾರಾಟವಾಗುತ್ತಿದ್ದರೆ, 10 ಗ್ರಾಂ 22 ಕ್ಯಾರೆಟ್ ಚಿನ್ನ ರೂ.45,420ಕ್ಕೆ ಮಾರಾಟವಾಗುತ್ತಿದೆ. ಕೋಲ್ಕತ್ತಾದಲ್ಲಿ 10 ಗ್ರಾಂಗೆ 50,100 ರೂ.ಗೆ ಮಾರಾಟವಾಗುತ್ತಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ 47,510 ರೂ.ಗೆ ತಲುಪಿದೆ.
ಬೆಂಗಳೂರಲ್ಲೂ ಯಥಾಸ್ಥಿತಿ
ಬೆಂಗಳೂರು ನಗರದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 45,110 ಮತ್ತು 24-ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 49,210 ರೂ. ಇದೆ. ಪ್ರತಿ ಒಂದು ಕೆ.ಜಿ ಬೆಳ್ಳಿಯೂ 64,400 ರೂಪಾಯಿಗೆ ಮಾರಾಟವಾಗುತ್ತಿದೆ.
ಓದಿ: ನೋಟ್ ಬ್ಯಾನ್ಗೆ 5 ವರ್ಷ: ದೇಶದಲ್ಲಿ ನಗದು ವ್ಯವಹಾರದ ಜೊತೆಗೆ ಡಿಜಿಟಲ್ ಪೇಮೆಂಟ್ ಹೆಚ್ಚಳ