ಮುಂಬಯಿ: ರಿಲಯನ್ಸ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆಯಾದ ಆರ್‌ಆರ್‌ವಿಎಲ್‌ನಲ್ಲಿ ಜಿಐಸಿ 5,512.5 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ಘೋಷಿಸಿವೆ. ಈ ಹೂಡಿಕೆಯಿಂದ ಆರ್‌ಆರ್‌ವಿಎಲ್‍ನ ಪ್ರೀ-ಮನಿ ಈಕ್ವಿಟಿ ಮೌಲ್ಯವು 4.285 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ. ಜಿಐಸಿಯ ಹೂಡಿಕೆಯು ಫುಲ್ಲಿ ಡೈಲ್ಯೂಟೆಡ್ ಬೇಸಿಸ್‌ನಲ್ಲಿ ಆರ್‌ಆರ್‌ವಿಎಲ್‌ನಲ್ಲಿ ಶೇ.1.22 ಈಕ್ವಿಟಿ ಪಾಲುದಾರಿಕೆಗೆ ಸಮಾನವಾಗಿರಲಿದೆ.
ಆರ್‌ಆರ್‌ವಿಎಲ್‌ನ ಅಂಗಸಂಸ್ಥೆಯಾದ ರಿಲಯನ್ಸ್ ರಿಟೇಲ್ ಲಿಮಿಟೆಡ್, ದೇಶದಾದ್ಯಂತ ತನ್ನ 12,000 ಮಳಿಗೆಗಳಲ್ಲಿ ಸೇವೆ ಒದಗಿಸುತ್ತಿರುವ ಭಾರತದ ಅತಿದೊಡ್ಡ, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮತ್ತು ಅತ್ಯಂತ ಹೆಚ್ಚು ಲಾಭದಾಯಕವಾದ ರೀಟೇಲ್ ವ್ಯವಹಾರವನ್ನು ನಿರ್ವಹಿಸುತ್ತಿದೆ.
ರಿಲಯನ್ಸ್ ರೀಟೇಲ್ ಕುಟುಂಬಕ್ಕೆ ಜಿಐಸಿಯನ್ನು ಸ್ವಾಗತಿಸಲು ನನಗೆ ತುಂಬಾ ಸಂತೋಷವಾಗಿದೆ. ಸುಮಾರು ನಾಲ್ಕು ದಶಕಗಳ ಕಾಲ ವಿಶ್ವದೆಲ್ಲೆಡೆ ಯಶಸ್ವಿ ದೀರ್ಘಕಾಲೀನ ಮೌಲ್ಯ ಹೂಡಿಕೆಯ ದಾಖಲೆಯನ್ನು ಹೊಂದಿರುವ ಜಿಐಸಿ, ಭಾರತೀಯ ರೀಟೇಲ್ ಉದ್ಯಮ ಬದಲಿಸುವ ಉದ್ದೇಶದಲ್ಲಿ ಪಾಲುದಾರಿಕೆ ಮಾಡಿಕೊಳ್ಳುತ್ತಿದೆ ಎನ್ನುವುದು ನನಗೆ ಖುಷಿಕೊಟ್ಟಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಹೇಳಿದ್ದಾರೆ.
ಭಾರತದ ಚಿಲ್ಲರೆ ಮಾರುಕಟ್ಟೆಯಲ್ಲಿ ಬಲವಾದ ಬೆಳವಣಿಗೆಗೆ ರಿಲಯನ್ಸ್ ರೀಟೇಲ್ ಅನ್ನು ಸಜ್ಜುಗೊಳಿಸಲು ರಿಲಯನ್ಸ್‌ನೊಂದಿಗೆ ಪಾಲುದಾರರಾಗಲು ಜಿಐಸಿ ಸಂತೋಷಡುತ್ತದೆ ಎಂದು ಜಿಐಸಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಿಮ್ ಚೌ ಕಿಯಾಟ್ ತಿಳಿಸಿದ್ದಾರೆ.