ETV Bharat / business

ಏಷ್ಯಾದ 2ನೇ ಶ್ರೀಮಂತ ವ್ಯಕ್ತಿ ಸ್ಥಾನ ಕಳೆದುಕೊಂಡ ಗೌತಮ್​ ಅದಾನಿ

ಒಂದೇ ವಾರದಲ್ಲಿ 97 ಸಾವಿರ ಕೋಟಿ ರೂ. ಕಳೆದುಕೊಂಡಿರುವ ಗೌತಮ್​ ಅದಾನಿ ಇದೀಗ ಏಷ್ಯಾದ 2ನೇ ಶ್ರೀಮಂತ ವ್ಯಕ್ತಿ ಸ್ಥಾನ ಕಳೆದುಕೊಂಡಿದ್ದಾರೆ.

author img

By

Published : Jun 18, 2021, 8:22 PM IST

Gautam Adani
Gautam Adani

ನವದೆಹಲಿ: ತಿಂಗಳ ಹಿಂದೆ ಏಷ್ಯಾದ ಎರಡನೇ ಅತಿದೊಡ್ಡ ಶ್ರೀಮಂತ, ಭಾರತದ ಬಿಲಿಯನೇರ್​ ಆಗಿ ಹೊರಹೊಮ್ಮಿದ್ದ ಗೌತಮ್​ ಅದಾನಿ, ಒಂದೇ ವಾರದಲ್ಲಿ 97 ಸಾವಿರ ಕೋಟಿಗೂ ಅಧಿಕ ಹಣ, ಆಸ್ತಿ ಕಳೆದುಕೊಂಡಿರುವ ಕಾರಣ ಇದೀಗ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ. ಮಾಧ್ಯಮದಲ್ಲಿನ ವರದಿಯೊಂದರಿಂದಾಗಿ ಗೌತಮ್​ ಅದಾನಿ ಆಸ್ತಿಯಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಇಳಿಕೆಯಾಗ್ತಿದ್ದು, ಷೇರು ಮಾರುಕಟ್ಟೆಯಲ್ಲೂ ಇನ್ನಿಲ್ಲದ ರೀತಿಯಲ್ಲಿ ನಷ್ಟ ಅನುಭವಿಸುತ್ತಿದ್ದಾರೆ.

ಇದನ್ನೂ ಓದಿರಿ: ಒಂದೇ ಮುಹೂರ್ತದಲ್ಲಿ ತನ್ನಿಬ್ಬರು ಪ್ರೇಯಸಿಯರನ್ನೂ ವರಿಸಿದ ಯುವಕ!

ನಾಲ್ಕು ದಿನಗಳ ಅಂತರದಲ್ಲಿ ದಾಖಲೆಯ $12 ಬಿಲಿಯನ್​ ಹಣ ಕಳೆದುಕೊಂಡಿರುವ ಕಾರಣ, ಏಷ್ಯಾದ ಟಾಪ್​ ಶ್ರೀಮಂತರ ಪಟ್ಟಿಯಲ್ಲಿ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ. ಸದ್ಯ ಅವರ ಆಸ್ತಿ $74.9 ಬಿಲಿಯನ್​ದಿಂದ $62.7 ಬಿಲಿಯನ್​ಗೆ ಇಳಿಕೆಯಾಗಿದೆ. ಕಳೆದ ಕೆಲ ದಿನಗಳ ಹಿಂದೆ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ನಾಗಾಲೋಟದ ರೀತಿಯಲ್ಲಿ ಗೌತಮ್​ ಅದಾನಿ ಮುನ್ನುಗ್ಗುತ್ತಿದ್ದರು. ಆದರೆ ಮಾಧ್ಯಮದಲ್ಲಿ ವರದಿವೊಂದು ಪ್ರಕಟಗೊಳ್ಳುತ್ತಿದ್ದಂತೆ ಅವರ ಅಸ್ತಿ ಕರಗುತ್ತಿದೆ. ವೈಯಕ್ತಿಕವಾಗಿ ಸಹ ಅಪಾರ ಪ್ರಮಾಣದ ಆಸ್ತಿ ಕಳೆದುಕೊಂಡಿದ್ದಾರೆ ಎಂದು ಮಾಧ್ಯಮಗಳು ಮಾಹಿತಿ ಹಂಚಿಕೊಂಡಿವೆ.

ಈ ಹಿಂದೆ ಕೇವಲ ಕಲ್ಲಿದ್ದಲು ಉದ್ಯಮಿಯಾಗಿದ್ದ ಅದಾನಿ, ಸದ್ಯ ಬಂದರು, ಗಣಿ ಮತ್ತು ವಿದ್ಯುತ್​ ಸ್ಥಾವರವನ್ನೂ ತಮ್ಮ ಸಾಮ್ರಾಜ್ಯದ ತೆಕ್ಕೆಗೆ ತೆಗೆದುಕೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.