ETV Bharat / business

ಅಂಬಾನಿ ಹಿಂದಿಕ್ಕಿ ಏಷ್ಯಾದಲ್ಲಿ ಅತ್ಯಂತ ಶ್ರೀಮಂತ ಉದ್ಯಮಿ ಪಟ್ಟ ಗಿಟ್ಟಿಸಿಕೊಂಡ ಅದಾನಿ - ಗೌತಮ್ ಅದಾನಿ ಬಳಿಯಿತುವ ಆಸ್ತಿ

ದಿನವೊಂದಕ್ಕೆ ಕೋಟ್ಯಂತರ ರೂಪಾಯಿ ಸಂಪಾದನೆ ಮಾಡಿದರೆ, ಮುಟ್ಟಿದ್ದೆಲವೂ ಚಿನ್ನವಾದರೆ, ವರ್ಷದ ಪ್ರತಿದಿನವೂ ತಮ್ಮ ವ್ಯವಹಾರಗಳಲ್ಲಿ ಸಫಲರಾದರೆ ಅವರನ್ನು ಅದಾನಿ ಎಂದು ಕರೆಯಬಹುದೇನೋ?. ಏಕೆ ಗೊತ್ತಾ? ಈಗಿನ ಅಂಕಿ ಅಂಶಗಳಂತೆ ಏಷಿಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಗೌತಮ್ ಅದಾನಿ ಹೊರಹೊಮ್ಮಿದ್ದಾರೆ.

Gautam Adani Becomes Asias Richest Person, surpasses Mukesh Ambani
ಅಂಬಾನಿಯನ್ನು ಹಿಂದಿಕ್ಕಿ ಏಷ್ಯಾದಲ್ಲಿ ಅತ್ಯಂತ ಶ್ರೀಮಂತ ಉದ್ಯಮಿ ಪಟ್ಟ ಗಿಟ್ಟಿಸಿಕೊಂಡ ಅದಾನಿ
author img

By

Published : Nov 25, 2021, 9:55 AM IST

ಮುಂಬೈ: ಇಲ್ಲಿಯವರೆಗೆ ಮುಕೇಶ್ ಅಂಬಾನಿಗಿದ್ದ ಏಷ್ಯಾದ ಅತ್ಯಂತ ಶ್ರೀಮಂತ ಉದ್ಯಮಿ ಪಟ್ಟ ಜಾರಿದ್ದು, ಅದು ಗೌತಮ್ ಅದಾನಿ ಬಳಿ ಸೇರಿದೆ. ಕಳೆದ ವರ್ಷದಲ್ಲಿ ಅದಾನಿ ಸಂಪತ್ತು 55 ಬಿಲಿಯನ್ ಡಾಲರ್ ಏರಿಕೆ ಕಂಡಿದೆ. ಅಂದರೆ ದಿನಕ್ಕೆ ಸಾವಿರ ಕೋಟಿ ರೂಪಾಯಿಯಂತೆ 4.12 ಲಕ್ಷ ಕೋಟಿ ರೂಪಾಯಿ ಹೆಚ್ಚಳವಾಗಿದೆ.

ಇದೇ ಸಮಯದಲ್ಲಿ ಮುಕೇಶ್ ಅಂಬಾನಿ ಸಂಪತ್ತು 14.3 ಬಿಲಿಯನ್ ಡಾಲರ್ ಅಂದರೆ 1.07 ಲಕ್ಷ ಕೋಟಿ ರೂಪಾಯಿ ಹೆಚ್ಚಾಗಿದೆ. ಈ ಮೂಲಕ ಒಂದು ವರ್ಷದ ಅವಧಿಯಲ್ಲಿ ಅತಿ ಹೆಚ್ಚು ಸಂಪತ್ತು ಗಳಿಸಿದ ಕೀರ್ತಿಗೆ ಗೌತಮ್ ಅದಾನಿ ಪಾತ್ರರಾಗಿದ್ದಾರೆ. ಒಂದು ವರ್ಷದಲ್ಲಿ ಹೆಚ್ಚು ಸಂಪತ್ತು ಗಳಿಸಿದ ಮಾತ್ರಕ್ಕೆ ಅವರು ಶ್ರೀಮಂತರಾಗುವುದಿಲ್ಲವಾದರೂ, ಇತ್ತೀಚಿನ ಬೆಳವಣಿಗೆಯೊಂದು ಮುಕೇಶ್ ಅಂಬಾನಿಯನ್ನು ಏಷ್ಯಾದ ಅತ್ಯಂತ ಶ್ರೀಮಂತ ಉದ್ಯಮಿ ಪಟ್ಟದಿಂದ ಇಳಿಸಿದೆ.

ಕರಗಿದ ಅಂಬಾನಿ ಸಂಪತ್ತು

ಬ್ಲೂಮ್​ಬರ್ಗ್ ಮಾಹಿತಿ ಪ್ರಕಾರ ಇದಕ್ಕೂ ಮುನ್ನ ಮುಕೇಶ್ ಅಂಬಾನಿ ಸಂಪತ್ತು 9100 ಕೋಟಿ ಡಾಲರ್​ ಇದ್ದು(91 billion Doller), ಏಷ್ಯಾದ ಶ್ರೀಮಂತರಲ್ಲಿ ಮೊದಲ ಸ್ಥಾನದಲ್ಲಿದ್ದರು. ಇದೇ ವೇಳೆ ಗೌತಮ್ ಅದಾನಿಯ ಸಂಪತ್ತು 8880 ಕೋಟಿ ಡಾಲರ್​ಗಳಿತ್ತು(88 billion Doller) . ಅಂದರೆ ಏಷ್ಯಾದ ಶ್ರೀಮಂತರಲ್ಲಿ ಅದಾನಿ ಎರಡನೇ ಸ್ಥಾನದಲ್ಲಿದ್ದರು. ಬುಧವಾರ ರಿಲಯನ್ಸ್‌ ಇಂಡಸ್ಟ್ರೀಸ್‌(ಆರ್‌ಐಎಲ್‌) ಷೇರುಗಳ ಬೆಲೆ ಇಳಿದ ಕಾರಣಕ್ಕೆ ಮುಕೇಶ್ ಅಂಬಾನಿಯ ಸಂಪತ್ತೂ ಕರಗಿದೆ.

ಹೌದು, ಸೌದಿ ಅರೇಬಿಯಾ ಮೂಲದ ಸೌದಿ ಅರಾಮ್ಕೋ ಕಂಪನಿ 1500 ಕೋಟಿ ಡಾಲರ್​ನ ರಿಲಯನ್ಸ್‌ ಇಂಡಸ್ಟ್ರೀಸ್​ನೊಂದಿಗಿನ ಒಪ್ಪಂದವನ್ನು ರದ್ದು ಮಾಡಿದೆ. ಇದರಿಂದಾಗಿ ಬಾಂಬೆ ಷೇರು ಮಾರುಕಟ್ಟೆಯಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್ ಒಂದು ಷೇರು ಬೆಲೆ ಶೇಕಡಾ 1.48ರಷ್ಟು ಕಡಿಮೆಯಾಗಿದೆ. ಇದರಿಂದಾಗಿ ರಿಲಯನ್ಸ್‌ ಇಂಡಸ್ಟ್ರೀಸ್ ಮೌಲ್ಯದ 22 ಸಾವಿರ ಕೋಟಿಗೆ ಇಳಿಕೆಯಾಗಿದೆ.

ಮುಕೇಶ್ ಅಂಬಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್​ನಲ್ಲಿ ಶೇಕಡಾ 50ರಷ್ಟಿದ್ದು, ಉದ್ಯಮದಲ್ಲಿನ ಅವರ ಪಾಲು 11 ಸಾವಿರ ಕೋಟಿಗೆ ಇಳಿಕೆಯಾಗಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ ಇನ್‌ಫ್ರಾಸ್ಟ್ರಕ್ಚರ್‌ ಷೇರು ಸಹ ಶೇಕಡಾ 1.57ರಷ್ಟು ನಷ್ಟಕ್ಕೆ ಒಳಗಾಗಿದೆ. ಇದರಿಂದ ಮುಕೇಶ್ ಅಂಬಾನಿ ಒಟ್ಟು ಸಂಪತ್ತಿನಲ್ಲಿ ಗಣನೀಯವಾಗಿ ಇಳಿಕೆಯಾಗಿದೆ.

ಅದಾನಿ ಮಿಂಚಿಂಗ್​

ಸದ್ಯಕ್ಕೆ ಅದಾನಿ ಗ್ರೂಪ್‌ ಸಂಸ್ಥೆಯ ಒಟ್ಟು ಮಾರುಕಟ್ಟೆ ಮೌಲ್ಯ 10 ಲಕ್ಷ ಕೋಟಿ ರೂಪಾಯಿಯಿದೆ. ರಿಲಯನ್ಸ್‌ ಇಂಡಸ್ಟ್ರೀಸ್​ನ ಮಾರುಕಟ್ಟೆ ಮೌಲ್ಯ 14.91 ಲಕ್ಷ ಕೋಟಿ ರೂಪಾಯಿ ಇದೆ. ಆದರೆ ಮುಕೇಶ್ ಅಂಬಾನಿಯ ಪಾಲು ರಿಯಲನ್ಸ್ ಇಂಡಸ್ಟ್ರೀಸ್​ನಲ್ಲಿ ಶೇಕಡಾ 50ರಷ್ಟು ಮಾತ್ರ ಇದೆ.

ಇದನ್ನೂ ಓದಿ: Drug war: ಮೂವರನ್ನು ಕೊಂದು, ಹೆಣಗಳನ್ನು ನೇತುಹಾಕಿದ್ದು ಯಾಕೆ ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.