ನವದೆಹಲಿ: ಮೇ, ಜೂನ್ ಮತ್ತು ಜುಲೈ ವೇಳೆಯಲ್ಲಿ 11 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆ ಪೂರೈಸುವುದಕ್ಕೆ ಏಪ್ರಿಲ್ 28ರಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಶೇ 100ರಷ್ಟು ಮುಂಗಡ 1732.50 ಕೋಟಿ ರೂ.ಗೆ ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.
ಟಿಡಿಎಸ್ ನಂತರ 1699.50 ಕೋಟಿ ರೂ.ಯಷ್ಟು ಮೊತ್ತವನ್ನು ಏಪ್ರಿಲ್ 28ರಂದು ಎಸ್‌ಐಐ ಸ್ವೀಕರಿಸಿದೆ ಎಂದು ಹೇಳಿದೆ.
ಕೋವಿಶೀಲ್ಡ್ ಲಸಿಕೆ ಪೂರೈಕೆಗಾಗಿ 10 ಕೋಟಿ ಡೋಸ್‌ಗಳ ಕೊನೆಯ ಆದೇಶಕ್ಕೆ ಮೇ 3ರವರೆಗೆ 8.744 ಕೋಟಿ ಡೋಸ್ ವಿತರಿಸಲಾಗಿದೆ. ಕೋವಿಡ್-19ಗಾಗಿ ಕೇಂದ್ರವು ಯಾವುದೇ ಹೊಸ ಆರ್ಡರ್ ನೀಡಿಲ್ಲ ಎಂದು ಆರೋಪಿಸಿರುವ ಮಾಧ್ಯಮ ವರದಿ ತಪ್ಪಾಗಿದೆ ಮತ್ತು ಸತ್ಯ ಆಧರಿಸಿಲ್ಲ ಎಂದು ಸಚಿವಾಲಯ ಸ್ಪಷ್ಟನೆ ನೀಡಿದೆ.
ಹೆಚ್ಚುವರಿಯಾಗಿ ಮೇ, ಜೂನ್ ಮತ್ತು ಜುಲೈ ಅವಧಿಯಲ್ಲಿ ಐದು ಕೋಟಿ ಕೋವಾಕ್ಸಿನ್ ಪ್ರಮಾಣಗಳಿಗೆ ಏಪ್ರಿಲ್ 28ರಂದು ಭಾರತ್ ಬಯೋಟೆಕ್ ಇಂಡಿಯಾ ಲಿಮಿಟೆಡ್‌ಗೆ (ಬಿಬಿಐಎಲ್) 787.50 ಕೋಟಿ ರೂ. ಶೇ 100ರಷ್ಟು ಮುಂಗಡ ಬಿಡುಗಡೆ ಮಾಡಲಾಗಿದೆ. ಈ ಮೊತ್ತ ಏಪ್ರಿಲ್ 28ರಂದು ಸ್ವೀಕರಿಸಿದ್ದಾರೆ.
ಕೊವಾಕ್ಸಿನ್ ಲಸಿಕೆ ಸರಬರಾಜುಗಾಗಿ ಎರಡು ಕೋಟಿ ಡೋಸ್‌ಗಳ ಕೊನೆಯ ಆದೇಶಕ್ಕೆ ವಿರುದ್ಧವಾಗಿ, ಮೇ 3 ರವರೆಗೆ 0.8813 ಕೋಟಿ ಡೋಸ್‌ಗಳನ್ನು ವಿತರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.