ರಾಯ್‌ಪುರ (ಚತ್ತೀಸ್ಗಢ): ಇಂಧನ ಬೆಲೆಗಳು ಮಂಗಳವಾರದ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿರುವುದರಿಂದ, ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ಅಂತಾರಾಷ್ಟ್ರೀಯ ತೈಲ ದರಗಳ ಮೇಲೆ ಅವಲಂಬಿತವಾಗಿವೆ. ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಅವುಗಳ ಏರಿಕೆಯ ವೆಚ್ಚದ ಸಮಸ್ಯೆ ನಿಭಾಯಿಸಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ರಾಯ್‌ಪುರದಲ್ಲಿರುವ ಚತ್ತೀಸ್ಗಢ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್, ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ಜಾಗತಿಕ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ದರಗಳನ್ನು ಅವಲಂಬಿಸಿರುತ್ತದೆ. ಹಾಗಾಗಿ, ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಇಂಧನ ಸಮಸ್ಯೆಯನ್ನು ನಿಭಾಯಿಸಬೇಕು. ಏಕೆಂದರೆ ಅವರು ತೈಲ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುತ್ತಾರೆ ಎಂದು ಹೇಳಿದರು.
ಶೇ 99 ರಷ್ಟು ಆಮದು
ಭಾರತವು ತನ್ನ ಪೆಟ್ರೋಲ್ ಮತ್ತು ಡೀಸೆಲ್ ಅವಶ್ಯಕತೆಗಳಲ್ಲಿ ಶೇ 99 ರಷ್ಟು ಆಮದು ಮಾಡಿಕೊಳ್ಳಬೇಕಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕ ಮತ್ತು ತೆರಿಗೆಯನ್ನು ಕೇಂದ್ರ ಮಾತ್ರ ವಿಧಿಸುವುದಿಲ್ಲ. ನಾವು 100 ಲೀಟರ್ (ಪೆಟ್ರೋಲ್ ಅಥವಾ ಡೀಸೆಲ್) ಬಳಸಿದರೆ, ನಾವು 99 ಲೀಟರ್ ಅನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕು. ವಿದೇಶದಲ್ಲಿ ತೈಲ ದರಗಳ ಪ್ರಕಾರ, ಬೆಲೆಗಳನ್ನು ಇಲ್ಲಿ ನಿಗದಿಪಡಿಸಲಾಗಿದೆ ಎಂದರು.
ಜಾಗತಿಕ ಧಾರಣೆ ಮೇಲೆ ದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ನಿಗದಿ
ಜಾಗತಿಕ ತೈಲ ಮಾರುಕಟ್ಟೆಯಲ್ಲಿ ದರ ಬದಲಾದಾಗ, ಅದು ನಮ್ಮ ಮೇಲೂ ಪರಿಣಾಮ ಬೀರುತ್ತದೆ. ಕೇಂದ್ರವು ಒಂದು ನಿಗದಿತ ಮೊತ್ತವನ್ನು ತೆರಿಗೆಯಾಗಿ ವಿಧಿಸುತ್ತದೆ. ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಅಲ್ಲ. ಆದರೆ, ರಾಜ್ಯ ಸರ್ಕಾರಗಳು ಪೆಟ್ರೋಲ್, ಡೀಸೆಲ್ ಮೇಲೆ ವ್ಯಾಟ್ ವಿಧಿಸುತ್ತವೆ ಎಂದು ತಿಳಿಸಿದರು.
ಏರಿಕೆಯಾಗುತ್ತಿರುವ ಇಂಧನ ಬೆಲೆಗಳಿಂದ ಖಂಡಿತವಾಗಿಯೂ ಸಾಮಾನ್ಯ ನಾಗರಿಕರ ಮೇಲೆ ಆರ್ಥಿಕ ಹೊರೆ ಹೆಚ್ಚಿಸಿದೆ. ಈ ರಚನೆಯಲ್ಲಿ ಕೇಂದ್ರ ಮತ್ತು ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತೆರಿಗೆ ವಿಧಿಸುತ್ತವೆ. ಬೆಲೆಗಳು ಏರುತ್ತಿವೆ ಎಂದು ನಾನು ನಂಬುತ್ತೇನೆ ಮತ್ತು ಖಂಡಿತವಾಗಿಯೂ ಸಾಮಾನ್ಯ ಜನರ ಮೇಲೆ ಹೊರೆಯಾಗುತ್ತದೆ. ಆದರೆ ಕೇಂದ್ರ ಮತ್ತು ರಾಜ್ಯಗಳು ಈ ಸಮಸ್ಯೆಯನ್ನು ನಿಭಾಯಿಸಬೇಕು ಎಂದು ಹೇಳಿದರು.
2014 ರ ಮಟ್ಟಕ್ಕೆ ಏರಿದ ಕಚ್ಚಾತೈಲ ಬೆಲೆ
2014 ರಿಂದ ಈಚೆಗೆ ಅಂತಾರಾಷ್ಟ್ರೀಯ ತೈಲ ಬೆಲೆಗಳು ಗರಿಷ್ಠ ಮಟ್ಟವನ್ನು ತಲುಪಿದ ನಂತರ ಮಂಗಳವಾರ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ನವದೆಹಲಿಯಲ್ಲಿ ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ಬೆಲೆಯನ್ನು 25 ಪೈಸೆ ಮತ್ತು ಡೀಸೆಲ್ ಬೆಲೆಯನ್ನು ಅನ್ನು 30 ಪೈಸೆ ಹೆಚ್ಚಿಸಲಾಗಿದೆ.
ದೆಹಲಿಯಲ್ಲಿ ಇಂದು ಪೆಟ್ರೋಲ್ ಬೆಲೆ ಎಷ್ಟು?
ಇದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 102.64 ರೂ. ಮತ್ತು ಮುಂಬೈನಲ್ಲಿ ರೂ. 108.67 ಕ್ಕೆ ತಲುಪಿದೆ. ಡೀಸೆಲ್ ದರಗಳು ಕೂಡ ದೆಹಲಿಯಲ್ಲಿ ರೂ. 91.07 ಮತ್ತು ಮುಂಬೈನಲ್ಲಿ ರೂ. 98.80 ರ ಗರಿಷ್ಠ ದಾಖಲೆಯನ್ನು ಮುಟ್ಟಿದೆ.
ಜಾಗತಿಕ ಬೆಂಚ್‌ಮಾರ್ಕ್ ಬ್ರೆಂಟ್ ಪ್ರತಿ ಬ್ಯಾರೆಲ್‌ಗೆ 81.51 ಡಾಲರ್‌ಗೆ ಜಿಗಿದಿದ್ದರೆ, ಪಶ್ಚಿಮ ಟೆಕ್ಸಾಸ್ ಇಂಟರ್‌ಮೀಡಿಯಟ್ ಬ್ಯಾರೆಲ್‌ಗೆ 77.76 ಡಾಲರ್‌ಗೆ ಏರಿದೆ.