ETV Bharat / business

ಭಾನುವಾರದ ಬ್ರೇಕ್​: ಪೆಟ್ರೋಲ್​, ಡೀಸೆಲ್​ ಬೆಲೆ ಏರಿಸದೇ ವಾಹನ ಸವಾರರಿಗೆ ರಿಲೀಫ್​

ಇಂಧನ ಬೆಲೆಯಲ್ಲಿ ಇಂದು ಯಾವುದೇ ರೀತಿಯ ಏರಿಕೆಯಾಗದ ಕಾರಣ ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್​ ಹಾಗೂ ಬೆಂಗಳೂರಿನಲ್ಲಿ ಪೆಟ್ರೋಲ್​, ಡೀಸೆಲ್ ದರ ನಿನ್ನೆಯಷ್ಟೇ ಇದೆ.

author img

By

Published : Jun 28, 2020, 11:42 AM IST

Updated : Jun 28, 2020, 11:59 AM IST

Fuel price
ಇಂಧನ ಬೆಲೆ

ನವದೆಹಲಿ: ಸತತ 21 ದಿನಗಳಿಂದ ಪೆಟ್ರೋಲ್​, ಡೀಸೆಲ್​ ಬೆಲೆ ಏರಿಸುತ್ತಾ ಬಂದಿದ್ದ ತೈಲ ಕಂಪನಿಗಳು ವಾಹನ ಸವಾರರಿಗೆ ಇಂದು ಕೊಂಚ ವಿರಾಮ​​ ನೀಡಿದೆ.

ನಿನ್ನೆ ಲೀಟರ್​ ಪೆಟ್ರೋಲ್​ಗೆ 25 ಪೈಸೆ, ಡೀಸೆಲ್​ಗೆ 21 ಪೈಸೆ ಏರಿಕೆಯಾಗಿತ್ತು. ಈ ಮೂಲಕ ದೇಶದ ಪ್ರಮುಖ ನಗರಗಳಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ಬೆಲೆ 80 ರೂ. ದಾಟಿದೆ.

ಇಂದು ಯಾವುದೇ ರೀತಿಯ ದರ ಏರಿಕೆಯಾಗದ ಕಾರಣ ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್​ ಹಾಗೂ ಬೆಂಗಳೂರಿನಲ್ಲಿ ಪೆಟ್ರೋಲ್​, ಡೀಸೆಲ್ ದರ ನಿನ್ನೆಯಷ್ಟೇ ಇದೆ. (ಲೀಟರ್​ ಬೆಲೆ -ರೂಪಾಯಿಗಳಲ್ಲಿ)

ನಗರ ಪೆಟ್ರೋಲ್ ಡೀಸೆಲ್​
ದೆಹಲಿ 80.38 80.40
ಕೋಲ್ಕತ್ತಾ 82.05 75.52
ಮುಂಬೈ 87.14 78.71
ಚೆನ್ನೈ 83.59 77.61
ಬೆಂಗಳೂರು 82.99 76.45

82 ದಿನಗಳ ಲಾಕ್​ಡೌನ್​ ಬಳಿಕ ತೈಲ ಕಂಪನಿಗಳು ಜೂನ್​ 7 ರಿಂದ ಸತತ 21 ದಿನಗಳ ಕಾಲ ಇಂಧನ ಬೆಲೆ ಹೆಚ್ಚಳವಾಗುತ್ತಾ ಬಂದಿತ್ತು. ಕೋವಿಡ್​ ಬಿಕ್ಕಟ್ಟಿನಿಂದಾಗಿ ಜನರು ಸಂಕಷ್ಟದಲ್ಲಿ ಸಿಲುಕಿರುವ ವೇಳೆ ಕೇಂದ್ರ ಸರ್ಕಾರ ಗಾಯದ ಮೇಲೆ ಬರೆ ಹಾಕುತ್ತಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್​ ಇದರ ವಿರುದ್ಧ ಹೋರಾಟಕ್ಕೆ ಮುಂದಾಗಿದೆ.

Last Updated : Jun 28, 2020, 11:59 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.