ETV Bharat / business

ಫ್ರಾಂಕ್ಲಿನ್​ನ 6 ಯೋಜನೆ ಸ್ಥಗಿತ: ಕೇಂದ್ರ ಪ್ರಾಮಾಣಿಕವಾಗಿ ಸಮಸ್ಯೆ ಬಗೆಹರಿಸಲಿ: ಚಿದು - ಫ್ರಾಂಕ್ಲಿನ್

ಕೊರೊನಾ ವೈರಸ್ ಲಾಕ್‌ಡೌನ್‌ ಕಾರಣದಿಂದ ಮಾರುಕಟ್ಟೆಯು ಶೀಘ್ರದಲ್ಲೇ ಸಹಜ ಸ್ಥಿತಿಗೆ ಬರುವುದಿಲ್ಲ ಎಂಬ ಕಾರಣಕ್ಕೆ ಫ್ರಾಂಕ್ಲಿನ್ ಇಂಡಿಯಾ ಆಲ್ಟ್ರಾ ಶಾರ್ಟ್‌ ಬಾಂಡ್‌ ಫಂಡ್‌, ಫ್ರಾಂಕ್ಲಿನ್ ಇಂಡಿಯಾ ಶಾರ್ಟ್‌ ಟರ್ಮ್‌ ಇನ್‌ಕಮ್‌ ಪ್ಲ್ಯಾನ್, ಫ್ರಾಂಕ್ಲಿನ್‌ ಇಂಡಿಯಾ ಕ್ರೆಡಿಟ್‌ ರಿಸ್ಕ್‌ ಫಂಡ್‌, ಫ್ರಾಂಕ್ಲಿನ್‌ ಇಂಡಿಯಾ ಸೇವಿಂಗ್ಸ್‌ ಫಂಡ್‌, ಫ್ರಾಂಕ್ಲಿನ್‌ ಇಂಡಿಯಾ ಡೈನಮಿಕ್‌ ಅಕ್ರುವಲ್‌ ಫಂಡ್ ಹಾಗೂ ಫ್ರಾಂಕ್ಲಿನ್‌ ಇಂಡಿಯಾ ಲೋ ಡ್ಯುರೇಷನ್‌ ಫಂಡ್‌ ಯೋಜನೆಗಳನ್ನು ನಿಲ್ಲಿಸಿದೆ.

P Chidambaram
ಪಿ ಚಿದಂಬರಂ
author img

By

Published : Apr 25, 2020, 4:02 PM IST

ನವದೆಹಲಿ: ಫ್ರಾಂಕ್ಲಿನ್ ಟೆಂಪಲ್ಟನ್ ಮ್ಯೂಚವಲ್​ ಫಂಡ್ (ಎಫ್​ಟಿಎಂಎಫ್​) ತನ್ನ ಆರು ಸ್ಥಿರ ಆದಾಯ ಸಾಲ ಯೋಜನೆಗಳನ್ನು ನಿಲ್ಲಿಸಿದೆ. ಇದು ಮ್ಯೂಚುವಲ್ ಫಂಡ್ ಉದ್ಯಮ ಮತ್ತು ಹಣಕಾಸು ಮಾರುಕಟ್ಟೆಗಳಿಗೆ ಗಂಭೀರ ಕಾಳಜಿಯ ವಿಷಯವಾಗಿದೆ. ಈ ಸಮಸ್ಯೆ ಪರಿಹರಿಸಲು ಸರ್ಕಾರ ತ್ವರಿತ ಕ್ರಮಗಳನ್ನು ಪ್ರಾಮಾಣಿಕವಾಗಿ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಪಿ. ಚಿದಂಬರಂ ಒತ್ತಾಯಿಸಿದ್ದಾರೆ.

ಆರು ಸಾಲ ಯೋಜನೆಗಳ ಸ್ಥಗಿತದ ಫ್ರಾಂಕ್ಲಿನ್ ಟೆಂಪಲ್ಟನ್ ಮ್ಯೂಚುವಲ್ ಫಂಡ್ ನಿರ್ಧಾರವು ಹೂಡಿಕೆದಾರರು, ಮ್ಯೂಚುವಲ್ ಫಂಡ್ ಉದ್ಯಮ ಮತ್ತು ಹಣಕಾಸು ಮಾರುಕಟ್ಟೆಗಳಿಗೆ ತೀವ್ರ ಕಳವಳಕಾರಿ ಆಗಿದೆ ಎಂದು ಚಿದಂಬರಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2008ರ ಅಕ್ಟೋಬರ್ ಮೊದಲ ವಾರದಲ್ಲಿ (ಜಾಗತಿಕ ಆರ್ಥಿಕ ಬಿಕ್ಕಟ್ಟಿನ ವೇಳೆ) ಮ್ಯೂಚುವಲ್ ಫಂಡ್‌ಗಳ ದ್ರವ್ಯತೆ ಒತ್ತಡವನ್ನು ಎದುರಿಸಿದಾಗ ಇದೇ ರೀತಿಯ ಪರಿಸ್ಥಿತಿ ಉದ್ಭವಿಸಿತ್ತು. ಆಗ ಸರ್ಕಾರ ಕೂಡಲೇ ಆರ್‌ಬಿಐ, ಸೆಬಿ (ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ), ಐಬಿಎ (ಇಂಡಿಯನ್ ಬ್ಯಾಂಕ್​ಗಳ ಸಂಘ), ಎಎಂಎಫ್‌ಐ (ಅಸೋಸಿಯೇಷನ್ ​​ಆಫ್ ಮ್ಯೂಚುವಲ್ ಫಂಡ್ಸ್ ಇನ್ ಇಂಡಿಯಾ) ಮತ್ತು ಇತರರನ್ನು ಸಂಪರ್ಕಿಸಿತ್ತು ಎಂದರು.

ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿಯ (ಎಫ್‌ಎಸ್‌ಡಿಸಿ) ತುರ್ತು ಸಭೆ ಕರೆಯಲಾಗಿತ್ತು. ಆ ದಿನದ ಅಂತ್ಯದ ವೇಳೆಗೆ ಪರಿಹಾರ ದೊರಕಿತ್ತು ಎಂದು ಈ ಹಿಂದಿನ ತಮ್ಮ ನಡೆಯನ್ನು ಉಲ್ಲೇಖಿಸಿದ್ದಾರೆ.

ಮರುದಿನ ಬೆಳಗ್ಗೆ ಆರ್​ಬಿಐ ಮತ್ತು ಸೆಬಿ ಅಧಿಕಾರಿಗಳು ಬೆಳಗ್ಗೆ 8 ಗಂಟೆಗೆ ಭೇಟಿಯಾದರು. ಆರ್​ಬಿಐ 14 ದಿನಗಳ ವಿಶೇಷ ರೆಪೊ ಸೌಲಭ್ಯ ಘೋಷಿಸಿತು. ಹೆಚ್ಚುವರಿ ಶೇ 0.5ರಷ್ಟು ಎನ್​ಡಿಟಿಎಲ್ ಅನ್ನು ಅನುಮತಿಸಿತ್ತು. ಈ ಮೂಲಕ ಪರಿಸ್ಥಿತಿಯನ್ನು ಪರಿಹರಿಸಲಾಗಿತ್ತು ಎಂದರು.

ಅದೃಷ್ಟವಶಾತ್, ಶನಿವಾರ ಮತ್ತು ಭಾನುವಾರ ಮಾರುಕಟ್ಟೆಗಳು ಮುಚ್ಚಲ್ಪಡುತ್ತವೆ ಮತ್ತು ಸರ್ಕಾರವು ತ್ವರಿತವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಪರಿಸ್ಥಿತಿಯನ್ನು ತ್ವರಿತವಾಗಿ ಪರಿಹರಿಸುತ್ತದೆ ಎಂದು ಅವರು ನಿರೀಕ್ಷಿಸುತ್ತಾರೆ ಎಂದು ಚಿದಂಬರಂ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.