ETV Bharat / business

ಕೊರೊನಾದಲ್ಲೂ ಭಾರತಕ್ಕೆ ಹರಿದು ಬಂತು ದಾಖಲೆ ಪ್ರಮಾಣದ ವಿದೇಶಿ ವಿನಿಮಯ ನಿಧಿ!

author img

By

Published : Nov 13, 2020, 8:15 PM IST

ಅಕ್ಟೋಬರ್ 30ಕ್ಕೆ ಕೊನೆಗೊಂಡ ಹಿಂದಿನ ವಾರದಲ್ಲಿ ಮೀಸಲು ನಿಧಿ 183 ಮಿಲಿಯನ್ ಡಾಲರ್​​​ಗಳಿಂದ 560.715 ಬಿಲಿಯನ್ ಡಾಲರ್​ಗೆ ಏರಿಕೆಯಾಗಿದೆ. ಒಟ್ಟಾರೆ ಮೀಸಲಿನಲ್ಲಿನ ಪ್ರಮುಖ ವಿದೇಶಿ ಚಾಲ್ತಿ ಆಸ್ತಿ (ಎಫ್‌ಸಿಎ) ಹೆಚ್ಚಳವಾಗಿ ಮೀಸಲು ನಿಧಿಯ ಪ್ರಮಾಣ ಏರಿಕೆಯಾಗಿದೆ.

Forex reserves
ವಿದೇಶಿ ವಿನಿಮಯ

ಮುಂಬೈ: ದೇಶದ ವಿದೇಶಿ ವಿನಿಮಯ ಸಂಗ್ರಹವು 7.779 ಬಿಲಿಯನ್ ಡಾಲರ್​ಗಳಷ್ಟು ಏರಿಕೆಯಾಗಿದ್ದು, ನವೆಂಬರ್ 6ರಂದು ಕೊನೆಗೊಂಡ ವಾರದಲ್ಲಿ ಸಾರ್ವಕಾಲಿಕ ಗರಿಷ್ಠ 568.494 ಬಿಲಿಯನ್ ಡಾಲರ್​ಗೆ ತಲುಪಿದೆ ಎಂದು ಆರ್‌ಬಿಐ ಅಂಕಿ-ಅಂಶಗಳು ತಿಳಿಸಿವೆ.

ಅಕ್ಟೋಬರ್ 30ಕ್ಕೆ ಕೊನೆಗೊಂಡ ಹಿಂದಿನ ವಾರದಲ್ಲಿ ಮೀಸಲು ನಿಧಿ 183 ಮಿಲಿಯನ್ ಡಾಲರ್​​​ಗಳಿಂದ 560.715 ಬಿಲಿಯನ್ ಡಾಲರ್​ಗೆ ಏರಿಕೆಯಾಗಿದೆ. ಒಟ್ಟಾರೆ ಮೀಸಲಿನಲ್ಲಿನ ಪ್ರಮುಖ ವಿದೇಶಿ ಚಾಲ್ತಿ ಆಸ್ತಿ (ಎಫ್‌ಸಿಎ) ಹೆಚ್ಚಳವಾಗಿ ಮೀಸಲು ನಿಧಿಯ ಪ್ರಮಾಣ ಏರಿಕೆಯಾಗಿದೆ.

ಎಫ್‌ಸಿಎಯು 6.403 ಬಿಲಿಯನ್ ಡಾಲರ್‌ಗಳಿಂದ 524.742 ಬಿಲಿಯನ್ ಡಾಲರ್‌ಗಳಿಗೆ ಏರಿದೆ ಎಂದು ಕೇಂದ್ರ ಬ್ಯಾಂಕಿನ ಸಾಪ್ತಾಹಿಕ ಅಂಕಿ-ಅಂಶಗಳು ತಿಳಿಸಿವೆ.

ಡಾಲರ್ ಪರಿಭಾಷೆಯಲ್ಲಿ ಹೇಳುವುದಾದರೆ, ಅಮೆರಿಕದ ಡಾಲರ್​ ಅಲ್ಲದ ಯುನಿಟ್, ಪೌಂಡ್ ಮತ್ತು ಯೆನ್​ನಂತಹ ವಿದೇಶಿ ವಿನಿಮಯ ಮೀಸಲುಗಳ ಏರಿಳಿತ ನಿಧಿ ಸಂಗ್ರಹಕ್ಕೆ ಮತ್ತೊಂದು ಕಾರಣವಾಗಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಅಂಕಿ-ಅಂಶಗಳ ಪ್ರಕಾರ, ನ. 6ಕ್ಕೆ ಕೊನೆಗೊಂಡ ವಾರದಲ್ಲಿ ಚಿನ್ನದ ನಿಕ್ಷೇಪವು 1.328 ಮಿಲಿಯನ್ ಅಮೆರಿಕನ್​ ಡಾಲರ್‌ನಿಂದ 37.587 ಬಿಲಿಯನ್ ಡಾಲರ್‌ಗೆ ಏರಿದೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜತೆಗಿನ ವಿಶೇಷ ಡ್ರಾಯಿಂಗ್ ರೈಟ್ಸ್​ ವಾರದಲ್ಲಿ 7 ಮಿಲಿಯನ್ ಡಾಲರ್​ಗೆ ಏರಿಕೆಯಾಗಿ 1.488 ಬಿಲಿಯನ್ ಡಾಲರ್​ಗೆ ತಲುಪಿದೆ.

ಐಎಂಎಫ್‌ ಜತೆಗಿನ ದೇಶದ ಮೀಸಲು ಸ್ಥಾನವು 40 ಮಿಲಿಯನ್ ಡಾಲರ್‌ಗಳಿಂದ 4.676 ಬಿಲಿಯನ್ ಡಾಲರ್‌ಗೆ ಏರಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.