ETV Bharat / business

ನಾಳೆ GST ಮಂಡಳಿ ಸಭೆ: ಕೋವಿಡ್​ ಸಂಬಂಧಿತ ಔಷಧಿಗಳ ಮೇಲಿನ ತೆರಿಗೆ ಕಡಿತ ಸಾಧ್ಯತೆ

author img

By

Published : Jun 11, 2021, 6:49 PM IST

ವೈದ್ಯಕೀಯ ದರ್ಜೆಯ ಆಮ್ಲಜನಕ, ಆಕ್ಸಿಮೀಟರ್, ಹ್ಯಾಂಡ್ ಸ್ಯಾನಿಟೈಸರ್ ಮತ್ತು ವೆಂಟಿಲೇಟರ್‌ಗಳಂತಹ ಕೋವಿಡ್​-19 ಪರಿಹಾರ ಸಾಮಗ್ರಿಗಳ ಮೇಲಿನ ಜಿಎಸ್‌ಟಿ ರಿಯಾಯಿತಿಗಳ ಕುರಿತು ಮೇಘಾಲಯ ಉಪಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ನೇತೃತ್ವದ ಸಚಿವರ ತಂಡದ ವರದಿ ಬಗ್ಗೆ ಮಂಡಳಿ ಸಭೆಯಲ್ಲಿ ಚರ್ಚಿಸಲಾಗುತ್ತದೆ.

FM
FM

ನವದೆಹಲಿ: ಶನಿವಾರ ನಡೆಯುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮಂಡಳಿ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಹಿಸಲಿದ್ದು, ಕೋವಿಡ್ -19 ಸಂಬಂಧಿತ ಅತ್ಯಾವಶ್ಯಕ ಮತ್ತು ಕಪ್ಪು ಶಿಲೀಂಧ್ರ ಔಷಧಿಗಳಿಗೆ ತೆರಿಗೆ ವಿನಾಯಿತಿ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ನಿರೀಕ್ಷೆಯಿದೆ.

44ನೇ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್​, ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರು ಮತ್ತು ಹಿರಿಯ ಸಚಿವರು ಭಾಗವಹಿಸಲಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಟ್ವೀಟ್ ಮಾಡಿದೆ.

ಓದಿ: ಕೋವಿಡ್ 2.0 ಬ್ಯಾಂಕ್​ ಸಾಲ ನಿಷೇಧ: 'ನಾವು ಹಣಕಾಸಿನ ತಜ್ಞರಲ್ಲ', ಅರ್ಜಿದಾರರಿಗೆ ಸುಪ್ರೀಂ ಸಂದೇಶ!

ಇದಲ್ಲದೆ, ಕೋವಿಡ್​-19 ಚಿಕಿತ್ಸೆಗಾಗಿ ಲಸಿಕೆ, ಔಷಧ ಮತ್ತು ಸೋಂಕು ಪತ್ತೆಗಾಗಿ ಪರೀಕ್ಷಾ ಕಿಟ್‌ಗಳ ಮೇಲಿನ ತೆರಿಗೆ ವಿನಾಯಿತಿ ಬಗ್ಗೆ ಸಹ ಸಚಿವರ ತಂಡ ಪರಿಶೀಲಿಸಿದೆ. ಸರ್ಕಾರದಲ್ಲಿನ ಕೆಲವು ರಾಜ್ಯ ಹಣಕಾಸು ಮಂತ್ರಿಗಳು ಕೋವಿಡ್​-19 ಅವಶ್ಯಕಗಳ ಮೇಲೆ ದರ ಕಡಿತಕ್ಕೆ ಮುಂದಾಗಿದ್ದಾರೆಂದು ತಿಳಿದು ಬಂದಿದೆ. ಕೋವಿಡ್​-19 ಎಸೆನ್ಷಿಯಲ್‌ಗಳಿಗೆ ದರಗಳನ್ನು ಶಿಫಾರಸು ಮಾಡಲು ಸಚಿವರ ತಂಡದ ಸಮಿತಿ ರಚಿಸಲಾಯಿತು.

ಕಾಂಗ್ರೆಸ್ ಪಕ್ಷ ಮತ್ತು ಇತರ ವಿರೋಧ ಪಕ್ಷಗಳ ಆಡಳಿತ ನಡೆಸುವ ರಾಜ್ಯಗಳ ಸರ್ಕಾರಗಳು ತೆರಿಗೆ ಕಡಿತಗೊಳಿಸುವಂತೆ ಒತ್ತಾಯಿಸುತ್ತಿವೆ. ಆದರೆ, ಈ ಕ್ರಮವು ಜನರಿಗೆ ಸ್ಪಷ್ಟವಾದ ಲಾಭ ತಂದುಕೊಡುವುದಿಲ್ಲ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ. ಪ್ರಸ್ತುತ, ದೇಶೀಯವಾಗಿ ತಯಾರಿಸಿದ ಲಸಿಕೆಗಳ ಮೇಲೆ ಶೇ. 5ರಷ್ಟು ಜಿಎಸ್​ಟಿ ವಿಧಿಸಲಾಗುತ್ತಿದೆ. ಕೋವಿಡ್ -19 ಔಷಧಗಳು ಮತ್ತು ಆಮ್ಲಜನಕ ಸಾಂದ್ರಕಗಳಿಗೆ ಶೇ. 12ರಷ್ಟು ತೆರಿಗೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.