ETV Bharat / business

ಗ್ರಾಮೀಣ, ನಗರ ಸ್ವ-ಸಹಾಯ ಗುಂಪುಗಳಿಗೆ ಸಿಹಿ ಸುದ್ದಿ ಕೊಟ್ಟರು ನಿರ್ಮಲಾ ಸೀತಾರಾಮನ್ - Business News

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಮುಂಗಡ ಪತ್ರ 2020-21ರ ಕುರಿತು ದೇಶಾದ್ಯಂತ ಆಯ್ದ ನಗರಗಳಲ್ಲಿ ಉದ್ಯಮಿಗಳ ಜೊತೆ ಸಂವಾದ ಕಾರ್ಯಕ್ರಮ ನಡೆಸುತ್ತಿದ್ದಾರೆ.

Finance Minister Nirmala Sitharaman
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
author img

By

Published : Feb 27, 2020, 6:05 PM IST

ಗುವಾಹಟಿ: ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಮಂಡನೆ ಬಳಿಕದ ಉದ್ದಿಮೆ ಪ್ರತಿನಿಧಿಗಳೊಂದಿಗೆ ಸಂವಾದ ಕಾರ್ಯಕ್ರಮದ ನಿಮಿತ್ತ ಈಶಾನ್ಯ ಭಾರತದ ಪ್ರತಿನಿಧಿಗಳೊಂದಿಗೆ ಇಂದು ಚರ್ಚೆ ನಡೆಸಿದರು.

ಕಾರ್ಯಕ್ರಮದದಲ್ಲಿ ವ್ಯಾಪಾರ ಮತ್ತು ಕೈಗಾರಿಕಾ ಪ್ರತಿನಿಧಿಗಳು, ಅರ್ಥಶಾಸ್ತ್ರಜ್ಞರು ಮತ್ತು ನೀತಿ ತಜ್ಞರನ್ನು ಭೇಟಿಯಾಗಿ, 'ಈಶಾನ್ಯ ಭಾರತದ ಕೈಗಾರಿಕಾ ಅಭಿವೃದ್ಧಿಗೆ ಅಗತ್ಯವಾದ ಸಹಕಾರ ಒದಗಿಸುವುದಾಗಿ' ಭರವಸೆ ನೀಡಿದ್ದಾರೆ.

ಸರ್ಕಾರವು ಸ್ಥಿರವಾಗಿ ಕಡಿಮೆ ಹಿಂಜರಿತದ ಮಧ್ಯೆಯೂ ಉತ್ತಮವಾಗಿ ಆಡಳಿತ ನಡೆಸಿಕೊಂಡು ಹೋಗುತ್ತಿದೆ. ತೆರಿಗೆಗೆ ಸಂಬಂಧಿಸಿದ ಎಲ್ಲ ವಿವಾದಗಳನ್ನು ಬಗೆಹರಿಸಲಾಗುವುದು ಎಂದು ಹೇಳಿದರು. ಸಂವಾದದಲ್ಲಿ ಸೀತಾರಾಮನ್​ ಅವರೊಂದಿಗೆ ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್, ಡಿಇಎ ಕಾರ್ಯದರ್ಶಿ ಅತಾನು ಚಕ್ರವರ್ತಿ, ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಮತ್ತು ಕಂದಾಯ ಕಾರ್ಯದರ್ಶಿ ಎ.ಬಿ. ಪಾಂಡೆ ಸಹ ಭಾಗವಹಿಸಿದ್ದರು.

ಅಗತ್ಯವಿರುವ ಜನರಿಗೆ ತಮ್ಮ ಸಣ್ಣ ಉದ್ಯಮಗಳನ್ನು ಆರಂಭಿಸಲು ಅಥವಾ ಅವುಗಳನ್ನು ವಿಸ್ತರಿಸಲು ಸ್ಥಳೀಯ ಸ್ವ-ಸಹಾಯ ಗುಂಪುಗಳಿಗೆ ಸಾಲ ನೀಡುವಿಕೆ ಪ್ರಮಾಣವನ್ನು ಹೆಚ್ಚಿಸಲು ಅನುಮತಿ ನೀಡಲಾಗುವುದು. ಇದರಿಂದ ಆರ್ಥಿಕತೆಯ ಮೇಲೆ ಪೂರಕವಾದ ಪರಿಣಾಮ ಬೀರಲಿದೆ. ಈಶಾನ್ಯದ ರಾಜ್ಯಗಳು ತಮ್ಮ ಸಾಂಪ್ರದಾಯಿಕ ಕೈಗಾರಿಕೆಗಳಲ್ಲಿ ಉತ್ತಮ ಸಾಧನೆ ತೋರಲು ಸೌಲಭ್ಯಗಳು ಹೊಂದಿರಬೇಕು ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.