ETV Bharat / business

ದಿಕ್ಕೆಟ್ಟ ವಾಹನ, ಬಿಸ್ಕೆಟ್​​ ಉದ್ಯಮಕ್ಕೆ ಕೈಕೊಟ್ಟ ಮೋದಿ ಸರ್ಕಾರ? ಹೋಟೆಲ್ ಉದ್ಯಮದತ್ತ ಒಲವು - hotel industry

ವಾಹನೋದ್ಯಮ ಹಾಗೂ ಬಿಸ್ಕೆಟ್​ ತಯಾರಿಕೆ ವಲಯ ಕಳೆದ ಕೆಲವು ತಿಂಗಳಿಂದ ತೀವ್ರವಾದ ಬೆಳವಣಿಗೆ ಕುಸಿತ ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜಿಎಸ್​ಟಿ ಸ್ಲ್ಯಾಬ್ ದರ ಕಡಿತಗೊಳಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಆಟೋಮೊಬೈಲ್​ ಉದ್ಯಮವು ಈಗಿನ ಜಿಎಸ್​ಟಿ ಸ್ಲ್ಯಾಬ್ ದರವನ್ನು ಶೇ 28ರಿಂದ ಶೇ 18ಕ್ಕೆ  ಹಾಗೂ ಬಿಸ್ಕೆಟ್​ ಉದ್ಯಮವು ಶೇ 18ರಷ್ಟು ಇರುವ ತೆರಿಗೆಯನ್ನು ಶೇ 5ರಷ್ಟಕ್ಕೆ ಇಳಿಸುವಂತೆ ಕೋರಲಾಗಿತ್ತು.

ಸಾಂದರ್ಭಿಕ ಚಿತ್ರ
author img

By

Published : Sep 18, 2019, 9:36 PM IST

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮಂಡಳಿಯ ಸಭೆಯು ಶುಕ್ರವಾರ ನಡೆಯಲಿದ್ದು, ಇದಕ್ಕೂ ಮೊದಲು ನಡೆದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಬಿಸ್ಕೆಟ್​ನಿಂದ ಹಿಡಿದು ಕಾರಿನವರೆಗಿನ ಸರಕುಗಳ ಮೇಲಿನ ತೆರಿಗೆ ಕಡಿತದ ಬೇಡಿಕೆಯನ್ನು ಅಧಿಕಾರಿಗಳ ಸಮಿತಿ ತಿರಸ್ಕರಿಸಿದೆ.

ಬಿಗಿಯಾದ ಆದಾಯದ ಹಿಡಿತ ಸಡಿಲಗೊಂಡು ಯಾವುದೇ ಕಡಿತದ ನಿರ್ಧಾರ ತೆಗೆದುಕೊಂಡರೆ ಕೇಂದ್ರ ಮತ್ತು ರಾಜ್ಯ ಆದಾಯ ಸಂಗ್ರಹಣೆಗೆ ಧಕ್ಕೆ ಆಗಲಿದೆ ಎಂಬ ನಿಲುವು ತೆಗೆದುಕೊಂಡ ಕೇಂದ್ರ ಮತ್ತು ರಾಜ್ಯಗಳ ಕಂದಾಯ ಅಧಿಕಾರಿಗಳನ್ನು ಒಳಗೊಂಡ ಜಿಎಸ್​ಟಿ ಮಂಡಳಿಯ ಫಿಟ್​ಮೆಂಟ್ ಸಮಿತಿ, ವಾಹನಗಳ ಮೇಲಿನ ಜಿಎಸ್​ಟಿ ಸ್ಲ್ಯಾಬ್​ ದರ ಕಡಿತದಲ್ಲಿ ಯಾವುದೇ ಬದಲಾವಣೆಗೆ ಸೂಚಿಸಿಲ್ಲ.

ವಾಹನೋದ್ಯಮ ಹಾಗೂ ಬಿಸ್ಕೆಟ್​ ತಯಾರಿಕೆ ವಲಯ ಕಳೆದ ಕೆಲವು ತಿಂಗಳಿಂದ ತೀವ್ರವಾದ ಬೆಳವಣಿಗೆ ಕುಸಿತ ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜಿಎಸ್​ಟಿ ಸ್ಲ್ಯಾಬ್ ದರ ಕಡಿತಗೊಳಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಆಟೋಮೊಬೈಲ್​ ಉದ್ಯಮವು ಈಗಿನ ಜಿಎಸ್​ಟಿ ಸ್ಲ್ಯಾಬ್ ದರವನ್ನು ಶೇ 28ರಿಂದ ಶೇ 18ಕ್ಕೆ ಹಾಗೂ ಬಿಸ್ಕೆಟ್​ ಉದ್ಯಮವು ಶೇ 18ರಷ್ಟು ಇರುವ ತೆರಿಗೆಯನ್ನು ಶೇ 5ರಷ್ಟಕ್ಕೆ ಇಳಿಸುವಂತೆಯೂ ಕೇಂದ್ರವನ್ನು ಕೋರಲಾಗಿತ್ತು.

ಜಿಎಸ್​ಟಿ ತೆರಿಗೆ ದರ ಇಳಿಸುವ ಬಗ್ಗೆ ಫಿಟ್​ಮೆಂಟ್​ ಸಮಿತಿ ಶಿಫಾರಸು ಸಲ್ಲಿಸಬೇಕಿದ್ದು, ದರ ತಗ್ಗಿಸುವ ಬಗ್ಗೆ ಅದು ಯಾವುದೇ ಪ್ರಸ್ತಾವನೆ ಮಾಡಿಲ್ಲ. ವಾಹನ ಮಾರುಕಟ್ಟೆ ಹಾಗೂ ಬ್ಯಾಂಕ್​ಗಳ ವಲಯದಲ್ಲಿ ಆಗುತ್ತಿರುವ ಬದಲಾವಣೆಗಳ ಕಾರಣವನ್ನು ಮುಂದಿಟ್ಟುಕೊಂಡು ಯಾವುದೇ ಬದಲಾವಣೆಗೆ ಸಮಿತಿ ಸೂಚಿಸಿಲ್ಲ.

ಫಿಟ್​ಮೆಂಟ್ ಸಮಿತಿಯು ಹೋಟೆಲ್ ಉದ್ಯಮಕ್ಕೆ ಕೆಲವು ಶುಭ ಸುದ್ದಿಗಳನ್ನು ನೀಡಿದೆ. ಶೇ 18 ಪ್ರತಿಶತದ ಜಿಎಸ್​ಟಿ ಸ್ಲ್ಯಾಬ್ ಅಡಿಯಲ್ಲಿ ಪ್ರತಿ ರಾತ್ರಿಗೆ ₹ 12,000 ವರೆಗಿನ ದರದ ಮೇಲಿನ ಸುಂಕದ ಸೀಲಿಂಗ್ ಹೆಚ್ಚಿಸುವ ಶಿಫಾರಸಿಗೆ ಸಮಿತಿ ಅನುಮೋದನೆ ನೀಡಿದೆ. ಪ್ರಸ್ತುತ ₹ 7,500 ವರೆಗಿನ ದರಕ್ಕೆ ಶೇ 18ರಷ್ಟು ಜಿಎಸ್​ಟಿ ಹಾಕಲಾಗುತ್ತಿದೆ. ಟೆಲಿಕಾಂ ಸೇವೆಗಳ ಮೇಲಿನ ಸುಂಕವನ್ನು ಶೇ 18ರಿಂದ 12ಕ್ಕೆ ಇಳಿಸಬೇಕೆಂಬ ಟೆಲಿಕಾಂ ಸಚಿವಾಲಯದ ಪ್ರಸ್ತಾಪವನ್ನೂ ಸಮಿತಿ ತಿರಸ್ಕರಿಸಿದೆ ಎಂದು ಮೂಲಗಳು ತಿಳಿಸಿವೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.