ನವದೆಹಲಿ: ಕೇಂದ್ರ ಸರ್ಕಾರದ ಬಜೆಟ್ ವೆಚ್ಚಕ್ಕಿಂತ ಹೆಚ್ಚಿನ ಹಣ ಒಗೂಡಿಸುವ ರಾಜ್ಯ ಸರ್ಕಾರಗಳಿಗೆ ಪರಿಹಾರವಾಗಿ, ಸಾವರಿನ್ ಕ್ರೆಡಿಟ್ ರೇಟಿಂಗ್ ಏಜೆನ್ಸಿ ಮುಂದಿನ ಹಣಕಾಸು ವರ್ಷಕ್ಕೆ ತನ್ನ ರೇಟಿಂಗ್ ಅನ್ನು ಪರಿಷ್ಕರಿಸಿದ್ದು, ಪ್ರಸಕ್ತ ಹಣಕಾಸು ವರ್ಷದ ಸ್ಥಿರ - ಋಣಾತ್ಮಕ ದೃಷ್ಟಿಕೋನದಿಂದ ಸ್ಥಿರವಾಗಿದೆ.
ಮುಂದಿನ ವರ್ಷ ರಾಜ್ಯಗಳ ಹಣಕಾಸಿನ ಕೊರತೆಯು ಜಿಡಿಪಿಯ ಶೇ 4.6ರಷ್ಟರಿಂದ ಶೇ 4.3ಕ್ಕೆ 30 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆಯಾಗಲಿದೆ ಎಂದು ಫಿಚ್ ಕಂಪನಿಯ ಇಂಡಿಯಾ ರೇಟಿಂಗ್ಸ್ ಹೇಳಿದೆ.
2020-21ನೇ ಸಾಲಿನ ರಾಜ್ಯಗಳ ಹಣಕಾಸಿನ ಕೊರತೆಯ ಬಗ್ಗೆ ಇಂಡಿಯಾ ರೇಟಿಂಗ್‌ನ ಮುನ್ಸೂಚನೆಯು ಶೇ 4.5ರಷ್ಟಿತ್ತು. ನಾಮ ಮಾತ್ರ ಜಿಡಿಪಿಯಲ್ಲಿ ವರ್ಷದಿಂದ ವರ್ಷಕ್ಕೆ ಶೇ 6.1ರಷ್ಟು ತೀಕ್ಷ್ಣವಾದ ಸಂಕೋಚನದಿಂದಾಗಿ ಈ ಪರಿಷ್ಕರಣೆ ಮಾಡಲಾಗಿದೆ. 2019-20ನೇ ಹಣಕಾಸು ವರ್ಷದಲ್ಲಿ ಶೇ 7.2ರಷ್ಟು ನಾಮಮಾತ್ರದ ಬೆಳವಣಿಗೆ ಹೊಂದಿದೆ ಎಂದು ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: ಜನವರಿಯಲ್ಲಿ ರಫ್ತು ಪ್ರಮಾಣ ಶೇ 6.16ರಷ್ಟು ಏರಿಕೆ: ಆಮದು ಎಷ್ಟು ಗೊತ್ತೇ?
2022ರ ಹಣಕಾಸು ವರ್ಷದಲ್ಲಿ ನಾಮಮಾತ್ರ ಜಿಡಿಪಿ ಶೇ 14.5ರಷ್ಟು ಏರಿಕೆಯಾಗಲಿದೆ. ಕ್ರಮೇಣ ಆದಾಯ ಸಂಗ್ರಹಣೆಗಳು ಬಂಡವಾಳ ವೆಚ್ಚದಲ್ಲಿ ಸುಧಾರಣೆ ಕಾರಣವಾಗಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕೇಂದ್ರಕ್ಕಿಂತ ಹೆಚ್ಚಿನ ಹಣ ಖರ್ಚು ಮಾಡುವುದರಿಂದ ದೇಶದ ಒಟ್ಟಾರೆ ಆರ್ಥಿಕ ಬೆಳವಣಿಗೆಗೆ ರಾಜ್ಯ ಸರ್ಕಾರಗಳ ಉತ್ತಮ ಆರ್ಥಿಕ ಆರೋಗ್ಯವು ನಿರ್ಣಾಯಕವಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಆರ್‌ಬಿಐ ಬಿಡುಗಡೆ ಮಾಡಿದ ವರದಿಯ ಪ್ರಕಾರ, 2020-21ನೇ ಸಾಲಿನ (ಬಿಇ) ರಾಜ್ಯಗಳ ಒಟ್ಟು ವೆಚ್ಚ 39.73 ಲಕ್ಷ ಕೋಟಿ ರೂ.ಗೆ ನಿಗದಿಪಡಿಸಲಾಗಿತ್ತು. ಬಜೆಟ್ ಅಂದಾಜು 30.42 ಲಕ್ಷ ಕೋಟಿ ರೂ.ಗೆ ಹೋಲಿಸಿದರೆ ಇದು 34.50 ಲಕ್ಷ ಕೋಟಿ ರೂ. ಪರಿಷ್ಕೃತ ಅಂದಾಜಿದೆ.
ಆರ್ಥಿಕ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸಲು ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದರಿಂದ, ಒಟ್ಟು ಖರ್ಚಿನಲ್ಲಿ ಬಂಡವಾಳ ವೆಚ್ಚದ ಪಾಲು ಮುಂದಿನ ಹಣಕಾಸು ವರ್ಷದಲ್ಲಿ ಶೇ 15.5ಕ್ಕೆ ಹೆಚ್ಚಾಗುವ ಸಾಧ್ಯತೆಯಿದೆ. ಇದು ಜಿಡಿಪಿಯ ಶೇ 2.9ರಷ್ಟು ಆಗಿರುತ್ತದೆ. ಇದು ಬಜೆಟ್‌ನ ಶೇ 10.5ರಷ್ಟು ಮತ್ತು ಜಿಡಿಪಿಯ ಶೇ 2.1ರಷ್ಟು ಆಗಿತ್ತು.