ETV Bharat / business

ಹಣಕಾಸು ಯೋಜನೆ: ನಿಮ್ಮ ಗುರಿಗಳನ್ನು ತಲುಪಲು ನೀವು ಏನು ಮಾಡಬೇಕೆಂದು ನಿಮಗೆ ತಿಳಿದಿದೆಯಾ?

author img

By

Published : Jan 29, 2022, 9:50 AM IST

Updated : Jan 29, 2022, 12:00 PM IST

ದೇಶದಾದ್ಯಂತ ಅನೇಕ ಕುಟುಂಬಗಳು ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸುವಲ್ಲಿ ಹೈರಾಣಾಗಿವೆ. ಕೆಲವರಂತೂ ಬಾಧಿಸುತ್ತಿರುವ ಕೊರೊನಾದಿಂದ ಸಾಕಷ್ಟು ಆರ್ಥಿಕ ತೊಂದರೆಯನ್ನು ಎದುರಿಸಿದ್ದಾರೆ. ಇದ್ದಕ್ಕಿದ್ದಂತೆ ಬಂದ ಈ ಸಾಂಕ್ರಾಮಿಕ ರೋಗವು ಜನರ ಜೀವನವನ್ನು ತಲೆಕೆಳಗು ಮಾಡಿದೆ. ಅನಿರೀಕ್ಷಿತವಾಗಿ ಉಂಟಾಗುವ ರೋಗಗಳಿಂದ ಕಾಪಾಡಿಕೊಳ್ಳಲು ನಾವು ನಮ್ಮ ದೈಹಿಕ, ಮಾನಸಿಕ ಮತ್ತು ಆರ್ಥಿಕ ಆರೋಗ್ಯ ಕಾಪಾಡಿಕೊಳ್ಳಬೇಕಾಗಿರುವುದು ಅತೀ ಅವಶ್ಯಕವಾಗಿದೆ.

Financial planning: Do you know if you are on track to reach your goals?

ಹೈದರಾಬಾದ್​: ಜೀವನ ಎಂಬುದು ಒಂದು ಸವಾಲು. ಅದನ್ನು ಎದುರಿಸಿ ನಿಲ್ಲಲು ನಿಮಗೆ ಸರಿಯಾದ ಯೋಜನೆಯೊಂದು ಸಹಾಯ ಮಾಡುತ್ತದೆ. ನಿಮ್ಮ ಒತ್ತಡದ ಜೀವನವನ್ನು ಒತ್ತಡ ಮುಕ್ತ ಮಾಡಲು ನಿಮಗೊಂದು ಯೋಜನೆ ಇದ್ದರೆ ಎಲ್ಲವೂ ಸುಲಭ.

ಆದರೆ, ಒಂದು ವೇಳೆ ನಿಮ್ಮಲ್ಲಿ ಯಾವುದೇ ಯೋಜನೆ ಇಲ್ಲದಿದ್ದರೆ ನೀವು ಗೊಂದಲಕ್ಕೆ ಸಿಲುಕುತ್ತೀರಿ. ಅದು ಹೇಗೆ ಅಂತೀರಾ? ಉದಾಹರಣೆಗೆ, ಕಳೆದೆರಡು ವರ್ಷಗಳಲ್ಲಿ ಕೋವಿಡ್‌ನಿಂದಾಗಿ ಬಹುತೇಕರ ಜೀವನ ಮುರಾಬಟ್ಟೆಯಾಗಿದೆ. ಸಾಕಷ್ಟು ಅನಿರೀಕ್ಷಿತ ಘಟನೆಗಳು ಕೋವಿಡ್​​​ನಿಂದಾಗಿ ಸೃಷ್ಟಿಯಾಗಿವೆ.

ದೇಶದಾದ್ಯಂತ ಅನೇಕ ಕುಟುಂಬಗಳು ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸುವಲ್ಲಿ ಹೈರಾಣಾಗಿದ್ದಾರೆ. ಕೆಲವರಂತೂ ಬಾಧಿಸುತ್ತಿರುವ ಕೊರೊನಾದಿಂದ ಸಾಕಷ್ಟು ಆರ್ಥಿಕ ತೊಂದರೆಯನ್ನು ಎದುರಿಸಿದ್ದಾರೆ. ಇದ್ದಕ್ಕಿದ್ದಂತೆ ಬಂದ ಈ ಸಾಂಕ್ರಾಮಿಕ ರೋಗವು ಜನರ ಜೀವನವನ್ನು ತಲೆಕೆಳಗು ಮಾಡಿದೆ.

ಅನಿರೀಕ್ಷಿತವಾಗಿ ಉಂಟಾಗುವ ರೋಗಗಳಿಂದ ಕಾಪಾಡಿಕೊಳ್ಳಲು ನಾವು ನಮ್ಮ ದೈಹಿಕ, ಮಾನಸಿಕ ಮತ್ತು ಆರ್ಥಿಕ ಆರೋಗ್ಯ ಕಾಪಾಡಿಕೊಳ್ಳಬೇಕಾಗಿರುವುದು ಅತೀ ಅವಶ್ಯಕವಾಗಿದೆ.

ಹಣಕಾಸು ಯೋಜನೆ: ಜೀವನದಲ್ಲಿ ಅನಿಶ್ಚಿತತೆ ಎದುರಾದಾಗ ನಮ್ಮ ಹಣಕಾಸು ಯೋಜನಗಳಲ್ಲೂ ಏರುಪೇರಾಗುತ್ತದೆ. ಆದರೆ ಅನಿರೀಕ್ಷಿತವಾಗಿ ಬರುವ ಸಂಕಷ್ಟಗಳನ್ನು ಎದುರಿಸಲು ಸರಿಯಾಗಿ ಯೋಜನೆ ಇದ್ದರೆ, ಸ್ಪಲ್ಪವೇ ಮುನ್ನೆಚ್ಚರಿಕೆ ವಹಿಸಿದರೆ ಸಾಕು ಟ್ರ್ಯಾಕ್​​ಗೆ ಮರಳಬಹುದು. ಯೋಜನೆ ಸರಿಯಾಗಿದ್ದರೆ, ಮುಂದಾಲೋಚನೆಯಿಂದ ತುಸು ಹಣ ಉಳಿತಾಯ ಮಾಡಿದ್ದರೆ ಹೊಸದಾಗಿ ಏನನ್ನಾದರೂ ಪ್ರಾರಂಭಿಸಬಹುದು.

ಅನಿರೀಕ್ಷಿತ ಹೊಡೆತಗಳಿಂದ ನಾವು ಯಾವ ರೀತಿಯಲ್ಲಿ ಎದ್ದು ಬರಬೇಕು ಎಂಬುದನ್ನು ತಿಳಿದಿರಬೇಕು. ಇದಕ್ಕಾಗಿ ನಾವು ಮುಂದಾಲೋಚನೆ ಮಾಡಿ ಆರ್ಥಿಕ ಸದೃಢತೆ ಸಾಧಿಸಬೇಕು.

ನಾವು ಆರ್ಥಿಕವಾಗಿ ಸದೃಢವಾಗಿರಲು ಏನು ಮಾಡಬೇಕು ಎಂಬ ಬಗ್ಗೆ ನಮ್ಮನ್ನ ನಾವೇ ಕೇಳಿಕೊಳ್ಳಬೇಕಾದ ಅಗತ್ಯತೆ ಇದೆ. ಈ ಹಿಂದಿನ ಅನುಭವಗಳಿಂದ ಕಲಿತ ಪಾಠದ ಬಗ್ಗೆ ಅರಿವು ಇರಬೇಕು. ಆ ಬಳಿಕ ತಕ್ಷಣ ಎದುರಾದ ಸಮಸ್ಯೆ ಎದುರಿಸಲು ಏನು ಮಾಡಬೇಕು ಎಂಬ ಬಗ್ಗೆ ತಿಳಿದುಕೊಳ್ಳಬೇಕು.

ಇದನ್ನೂ ಓದಿ: ಕೇಂದ್ರ ಬಜೆಟ್‌: ಆಯವ್ಯಯದಲ್ಲಿನ ಖರ್ಚು, ಆದಾಯ ಎಂದರೇನು?

ನಿವೃತ್ತಿ ಯೋಜನೆ: ನಾವು ಗಳಿಕೆ ಮಾಡುವುದನ್ನು ಆರಂಭಿಸಿದ ತಕ್ಷಣವೇ ನಿವೃತ್ತಿ ಬಗ್ಗೆಯೂ ಮೊದಲೇ ಯೋಚಿಸಬೇಕು. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಂಡು ನಿವೃತ್ತಿ ಹೂಡಿಕೆ ಆರಂಭಿಸಬೇಕು. ನಾವು ಪಿಪಿಎಫ್, ರಾಷ್ಟ್ರೀಯ ಪಿಂಚಣಿ ಯೋಜನೆಗಳು ಮತ್ತು ವರ್ಷಾಶನ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು.

ಇದಲ್ಲದೇ, ನೀವು ಚಿನ್ನ, ರಿಯಲ್ ಎಸ್ಟೇಟ್ ಮತ್ತು ಇತರ ಹೂಡಿಕೆ ಯೋಜನೆಗಳಲ್ಲಿ ಹೂಡಿಕೆ ಮಾಡಲು ಮುಂದಾಗಬಹುದು. ಅದು ನಿವೃತ್ತಿಯ ಸಮಯದಲ್ಲಿ ನಿಮಗೆ ಒಳ್ಳೆಯ ಲಾಭವನ್ನು ತಂದು ಕೊಡಲಿದೆ.

ತುರ್ತು ನಿಧಿ: ಅನೇಕರಿಗೆ ಅನಿರೀಕ್ಷಿತ ವೆಚ್ಚಗಳನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ತಿಳಿದಿರುವುದಿಲ್ಲ. ಇನ್ನೂ ಕೆಲವರಿಗೆ ತುರ್ತು ವೆಚ್ಚಗಳನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಅಸಾಧ್ಯವಾಗಿದೆ. ಬಹುತೇಕರು ಕಳೆದ ಎರಡು ವರ್ಷಗಳಿಂದ ಇಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಆದ್ದರಿಂದ ಪ್ರತಿ ಕುಟುಂಬವೂ ತುರ್ತು ನಿಧಿಗೆ ಮೊದಲ ಆದ್ಯತೆ ನೀಡಬೇಕು.

ಆಗ ಮಾತ್ರ ನೀವು ಸಾಲದ ಸುಳಿಗೆ ಸಿಲುಕುವುದರಿಂದ ತಪ್ಪಿಸಿಕೊಳ್ಳಬಹುದು. ಸಾಲದಿಂದ ಹೊರ ಬರಲು ಈಗಾಗಲೇ ನಿಮ್ಮ ಬಳಿ ಇರುವ ಉಳಿತಾಯ ಮತ್ತು ಹೂಡಿಕೆಗಳಿಂದ ನಿಮ್ಮ ಹಣವನ್ನು ಹಿಂಪಡೆಯಬಹುದು. ಯಾವುದೇ ವ್ಯಕ್ತಿ ಸದೃಢ ಆರ್ಥಿಕತೆ ಹೊಂದಿರಬೇಕಾದರೆ, ತುರ್ತು ಪರಿಸ್ಥಿತಿ ನಿಭಾಯಿಸಲು ಕನಿಷ್ಠ ಆರು ತಿಂಗಳಿಗಾಗುವಷ್ಟು ತುರ್ತು ನಿಧಿಯನ್ನು ಹೊಂದಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ವಿಮೆ: ವಿಮಾ ಪಾಲಿಸಿಗಳು ನಿಮ್ಮ ಜೀವನವನ್ನ ಸುಗಮಗೊಳಿಸುತ್ತವೆ. ಅಷ್ಟೇ ಅಲ್ಲ ಅನಿರೀಕ್ಷಿತ ಸಂದರ್ಭಗಳಲ್ಲಿ ನಿಮ್ಮ ನೆರವಿಗೆ ಬರುತ್ತವೆ. 2020 ಮತ್ತು 2021 ರಲ್ಲಿ, ಅನೇಕ ಜನರು ಆರೋಗ್ಯ ವಿಮೆಯ ಸದುಪಯೋಗ ಮಾಡಿಕೊಂಡಿದ್ದಾರೆ.
ಈ ಮೂಲಕ ತಮಗೆ ಬಂದ ಅನಿರೀಕ್ಷಿತ ಆಘಾತ ಹಾಗೂ ಹಣದ ಅವಶ್ಯಕತೆಯನ್ನ ಆರೋಗ್ಯ ವಿಮೆ ಮೂಲಕ ಪರಿಹರಿಸಿಕೊಂಡಿದ್ದಾರೆ. ಕುಟುಂಬದ ಜವಾಬ್ದಾರಿ ಹೊತ್ತವರಿಗೆ, ತುರ್ತಾಗಿ ಒದಗಿ ಬಂದ ಸಂಕಷ್ಟಗಳನ್ನು ಪರಿಹರಿಸಲು ಜೀವ ವಿಮಾ ಪಾಲಿಸಿಗಳು ಸಹಾಯ ಮಾಡುತ್ತವೆ. ಹೀಗಾಗಿ ತುರ್ತು ನಿಧಿ ಬಳಿಕ ನಾವು ಹೊಂದಿರಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ ಅದು ವಿಮೆ ಆಗಿದೆ.

ಸಾಲ: ನೀವು ಅಗತ್ಯವಾದ ಯೋಜನೆಗಳನ್ನು ಮಾಡಿಕೊಂಡಿದ್ದರೆ, ನಿಮಗೆ ತುರ್ತಾಗಿ ಹಣದ ಅವಶ್ಯಕತೆ ಇದ್ದಾಗ ಸಾಲಗಳನ್ನು ಪಡೆಯುವುದು ದೊಡ್ಡ ವಿಷಯವೇನೂ ಅಲ್ಲ.

ಆರ್ಥಿಕ ಹೊರೆ ಕೆಲ ಸಂದರ್ಭಗಳಲ್ಲಿ ಬಂದೇ ಬರುತ್ತವೆ. ಅವುಗಳನ್ನು ನಿರ್ವಹಿಸುವಾಗ ಹೆಚ್ಚಿನ ಬಡ್ಡಿ ದರದ ವೈಯಕ್ತಿಕ ಸಾಲ, ಕ್ರೇಡಿಟ್​ ಕಾರ್ಡ್​ ಬಳಕೆ ಬಗ್ಗೆ ಸರಿಯಾಗಿ ತಿಳಿದುಕೊಂಡಿರಬೇಕಾಗುತ್ತದೆ. ಯೋಚನೆ ಮಾಡಿ ಇಂತಹ ಸಾಹಸಕ್ಕೆ ಕೈ ಹಾಕಬೇಕಾಗುತ್ತದೆ.

ಹೂಡಿಕೆಗಳು: ದೀರ್ಘಕಾಲೀನ ಗುರಿಗಳನ್ನು ಸಾಧಿಸಲು ಹೂಡಿಕೆ ಅತ್ಯುತ್ತಮ ಆಯ್ಕೆಯಾಗಿದೆ. ನೀವು ಕೇವಲ 500ಗಳಿಂದ ನಿಮ್ಮೆ ಹೂಡಿಕೆ ಪ್ರಾರಂಭಿಸಬಹುದು. ಕಳೆದ ಎರಡು ವರ್ಷಗಳಲ್ಲಿ ಕೋವಿಡ್​ ಸೃಷ್ಟಿಸಿದ ಅನಾಹುತದಿಂದಾಗಿ ಜನರು ತಮ್ಮ ಹೂಡಿಕೆಯನ್ನು ನಿಲ್ಲಿಸಿದ ಅನೇಕ ನಿದರ್ಶನಗಳಿವೆ.

ಸಾಂಕ್ರಾಮಿಕ ರೋಗದ ಮೂರನೇ ಅಲೆ ಸಂದರ್ಭದಲ್ಲಿ ಹೂಡಿಕೆಗಳನ್ನು ಹೇಗೆ ಪ್ರಾರಂಭಿಸುವುದು ಎಂಬುದರ ಕುರಿತು ನೀವು ಈಗ ಮತ್ತೊಮ್ಮೆ ಯೋಚಿಸುವ ಸಮಯ ಬಂದಿದೆ. ಸಣ್ಣ ಮೊತ್ತದಲ್ಲಿ ಹೂಡಿಕೆ ಮುಂದುವರಿಕೆ ಮಾಡಿದರೆ ಉತ್ತಮ. ಹನಿ ಹನಿಗೂಡಿದರೆ ಹಳ್ಳವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಇದನ್ನು ಓದಿ:ಮಾರ್ಚ್​ ಆರಂಭದಲ್ಲಿ ಮಾರುಕಟ್ಟೆ ಪ್ರವೇಶಿಸಲಿರುವ ಎಲ್​​​ಐಸಿ IPO

Last Updated : Jan 29, 2022, 12:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.