ನವದೆಹಲಿ: ಕೋವಿಡ್ -19 ಬಿಕ್ಕಟ್ಟಿನಿಂದ ಉಂಟಾದ ಉದ್ಯೋಗ ನಷ್ಟದ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಕೇಂದ್ರ ಹಣಕಾಸು ಸಚಿವಾಲಯ ಕಾರ್ಮಿಕ ಸಚಿವಾಲಯವನ್ನು ಕೇಳಿದೆ ಎಂದು ಮೂಲಗಳು ತಿಳಿಸಿವೆ.
ಉದ್ಯೋಗ ನಷ್ಟ ಮತ್ತು ವೇತನ ಕಡಿತದ ಬಗ್ಗೆ ದತ್ತಾಂಶ ಸಂಗ್ರಹಿಸಲು ಹಣಕಾಸು ಸಚಿವಾಲಯವು ಕಾರ್ಮಿಕ ಸಚಿವಾಲಯದ ಜೊತೆ ತೊಡಗಿಸಿಕೊಂಡಿದೆ. ಕೋವಿಡ್-19ರ ಅವಧಿಯಲ್ಲಿನ ಉದ್ಯೋಗ ನಷ್ಟದ ಡೇಟಾ ಒಗ್ಗೂಡಿಸುವಂತೆ ವಿತ್ತ ಸಚಿವಾಲಯ ಕಾರ್ಮಿಕ ಸಚಿವಾಲಯವನ್ನು ಕೇಳಿದೆ ಎಂದು ಮೂಲಗಳು ಎಎನ್‌ಐಗೆ ತಿಳಿಸಿವೆ.
ಇದಲ್ಲದೇ ಸಾರ್ವಜನಿಕ ವಲಯದ ಬ್ಯಾಂಕ್ಗಳ ಮಂಜೂರಾತಿ ಮತ್ತು ಸಾಲ ವಿತರಣೆಯ ನಡುವಿನ ಹೊಂದಾಣಿಕೆಯನ್ನ ಹಣಕಾಸು ಸಚಿವಾಲಯ ಪರಿಶೀಲಿಸುತ್ತಿದೆ. ಮಂಜೂರಾದ ಸಾಲಗಳ ವಿತರಣೆ ನಡೆಯುತ್ತಿಲ್ಲ. ಈ ಹೊಂದಾಣಿಕೆಯನ್ನು ಪರಿಹರಿಸಲು ಸಚಿವಾಲಯವು ಪರಿಶೀಲಿಸುತ್ತಿದೆ ಎಂದು ಹೇಳಿವೆ.
ಸರ್ಕಾರದ ಸಾಲಗಳ ಮೇಲಿನ ವೆಚ್ಚವನ್ನು ತಗ್ಗಿಸುವತ್ತ ಗಮನ ಹರಿಸಲಾಗಿದೆ. ವಿದೇಶಿ ಬಂಡವಾಳ ಹೂಡಿಕೆ (ಎಫ್‌ಪಿಐ) ಮಾರ್ಗದ ಮೂಲಕ ಚೀನಾವನ್ನು ನಿರ್ಬಂಧಿಸುವ ಬಗ್ಗೆ ಯಾವುದೇ ಕರೆ ತೆಗೆದುಕೊಳ್ಳಲಾಗಿಲ್ಲ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.