ETV Bharat / business

ಪಿಎಫ್‌ ಠೇವಣಿದಾರರಿಗೆ ಶೇ.8.5 ಬಡ್ಡಿ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಅನುಮೋದನೆ

author img

By

Published : Oct 29, 2021, 12:58 PM IST

ಭವಿಷ್ಯ ನಿಧಿ ಸಂಸ್ಥೆಯ ಚಂದಾದಾರರಿಗೆ ದೀಪಾವಳಿ ಗಿಫ್ಟ್‌ ನೀಡಿರುವ ಕೇಂದ್ರ ಸರ್ಕಾರ, ಭವಿಷ್ಯ ನಿಧಿ ಠೇವಣಿಗಳಿಗೆ ಶೇ.8.5 ಬಡ್ಡಿ ನೀಡುವ ಕಾರ್ಮಿಕ ಸಚಿವಾಲಯದ ಪ್ರಸ್ತಾವನೆಗೆ ಹಣಕಾಸು ಸಚಿವಾಲಯ ಅನುಮೋದನೆ ನೀಡಿದೆ. ಕೋವಿಡ್‌ನಿಂದಾಗಿ ಶೇ.8.65 ಬಡ್ಡಿ ದರವನ್ನು ಶೇ.8.5ಕ್ಕೆ ಇಳಿಸಲಾಗಿತ್ತು.

Finance Ministry approves 8.5% interest on PF deposits for 2020-21
2020-21ನೇ ಸಾಲಿನ ಪಿಎಫ್‌ ಠೇವಣಿದಾರರಿಗೆ ಶೇ.8.5 ಬಡ್ಡಿ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಅನುಮೋದನೆ

ನವದೆಹಲಿ: 2020-21ರ ಭವಿಷ್ಯ ನಿಧಿ ಠೇವಣಿಗಳ ಮೇಲೆ ಶೇ.8.5 ಬಡ್ಡಿ ನೀಡುವ ಕಾರ್ಮಿಕ ಸಚಿವಾಲಯದ ಪ್ರಸ್ತಾವನೆಗೆ ಹಣಕಾಸು ಸಚಿವಾಲಯ ಅನುಮೋದನೆ ನೀಡಿದೆ. ಇದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಒ) 6 ಕೋಟಿ ಚಂದಾದಾರರಿಗೆ ಪ್ರಯೋಜನ ಪಡೆಯಲಿದ್ದಾರೆ.

ಸರ್ಕಾರದ ಈ ನಿರ್ಧಾರವು ಉದ್ಯೋಗಿಗಳಿಗೆ ದೀಪಾವಳಿಯ ಸಂಭ್ರಮಾಚರಣೆಗೆ ಸ್ವಲ್ಪ ಮೆರುಗು ತರುವ ಸಾಧ್ಯತೆಯಿದೆ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಸುನಿಲ್ ಬರ್ತ್ವಾಲ್ ಹೇಳಿದ್ದಾರೆ.

ಇಪಿಎಫ್‌ಒ ಕಾರ್ಮಿಕ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದ ಅಡಿಯಲ್ಲಿ ಬರುತ್ತದೆ. ಹೀಗಾಗಿ ಫಲಾನುಭವಿ ಖಾತೆಗೆ ಜಮಾ ಮಾಡಲು ಪ್ರಾರಂಭಿಸುವ ಮೊದಲು ವರ್ಷದ ಬಡ್ಡಿ ದರವನ್ನು ಸಚಿವಾಲಯವು ತಿಳಿಸಬೇಕು. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ 1,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ಹೊಂದಿರುವ ಇಪಿಎಫ್‌ಒಗೆ 300 ಕೋಟಿ ರೂಪಾಯಿ ಹೊರೆಯಾಗಲಿದೆ.

ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಹೆಚ್ಚಿನ ಠೇವಣಿಗಳನ್ನು ಹಿಂಪಡೆಯಲಾಗಿದೆ. ಹೀಗಾಗಿ ನಿವೃತ್ತಿ ನಿಧಿ ನಿಯಂತ್ರಣ ಸಂಸ್ಥೆಯು 2020-21ನೇ ಹಣಕಾಸು ವರ್ಷದಲ್ಲಿ ಇಪಿಎಫ್ ಬಡ್ಡಿ ದರವನ್ನು ಬದಲಾಯಿಸಿದೆ.

ಕಳೆದ ವರ್ಷ ಕೋವಿಡ್‌ ಬಳಿಕ ಇಪಿಎಫ್‌ಒ 2020ರ ಮಾರ್ಚ್‌ನಲ್ಲಿ 2018-19ರ ಠೇವಣಿ ಮೇಲಿನ 8.65 ಬಡ್ಡಿ ದರವನ್ನು ಶೇ.8.5ಕ್ಕೆ ಇಳಿಸಿತ್ತು. ಇದು ಕಳೆದ 7 ವರ್ಷಗಳ ಅತಿ ಕಡಿಮೆ ಬಡ್ಡಿ ದರವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.