ETV Bharat / business

ಎಲೆಕ್ಟ್ರಾನಿಕ್ ಟ್ರಾನ್ಸಾಕ್ಷನ್​​​​ ಮೇಲೆ ಶುಲ್ಕ ವಿಧಿಸದಂತೆ ಬ್ಯಾಂಕ್​ಗಳಿಗೆ ತೆರಿಗೆ ಇಲಾಖೆ ಸೂಚನೆ - ರುಪೇ ಕಾರ್ಡ್

2020ರ ಜನವರಿ 1ರ ನಂತರ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ನಡೆಸಿದ ವಹಿವಾಟಿನ ಮೇಲೆ ಶುಲ್ಕ ವಿಧಿಸದಂತೆ ಆದಾಯ ತೆರಿಗೆ ಇಲಾಖೆ ಬ್ಯಾಂಕ್‌ಗಳಿಗೆ ಸೂಚಿಸಿದೆ.

BHIM-UPI
ಭಿಮ್-ಯುಪಿಐ
author img

By

Published : Aug 31, 2020, 10:57 AM IST

ನವದೆಹಲಿ: ರುಪೇ(RuPay) ಕಾರ್ಡ್‌ ಅಥವಾ ಭಿಮ್-ಯುಪಿಐ( BHIM-UPI)ನಂತಹ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ನಡೆಸಿದ ವಹಿವಾಟಿನ ಮೇಲೆ 2020ರ ಜನವರಿ 1ರ ನಂತರ ವಿಧಿಸಿರುವ ಶುಲ್ಕವನ್ನು ಮರುಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ಬ್ಯಾಂಕ್‌ಗಳಿಗೆ ಸೂಚಿಸಿದೆ.

ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT), 'ಐ-ಟಿ ಕಾಯ್ದೆಯ ಸೆಕ್ಷನ್ 269SU ಅಡಿಯಲ್ಲಿ ನಿಗದಿತ ಎಲೆಕ್ಟ್ರಾನಿಕ್ ವಿಧಾನಗಳಿಗೆ ವಿಧಿಸಲಾಗುವ ಶುಲ್ಕ' ಎಂಬ ಸುತ್ತೋಲೆಯಲ್ಲಿ ಈ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ನಡೆಸುವ ವಹಿವಾಟಿನ ಮೇಲೆ ಯಾವುದೇ ಶುಲ್ಕ ವಿಧಿಸಬಾರದು ಎಂದು ಬ್ಯಾಂಕುಗಳಿಗೆ ಸೂಚನೆ ನೀಡಿದೆ. ಹೀಗಾಗಿ ಈಗಾಗಲೇ ವಿಧಿಸಲಾಗಿರುವ ಶುಲ್ಕಗಳನ್ನೂ ಬ್ಯಾಂಕ್​ಗಳು ಮರುಪಾವತಿಸಬೇಕಾಗಿದೆ.

ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಿ ನಗದು ಆಧಾರಿತ ಆರ್ಥಿಕತೆಯನ್ನು ಕಡಿಮೆ ಮಾಡಲು ಸರ್ಕಾರವು 2019ರ ಹಣಕಾಸು ಕಾಯ್ದೆಯಲ್ಲಿ ಸೆಕ್ಷನ್ 269SU ಎಂಬ ಹೊಸ ನಿಬಂಧನೆಯನ್ನು ಸೇರಿಸಿದೆ. ಸರ್ಕಾರವು ಡಿಜಿಟಲ್​ ಪಾವತಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದು, ಇದರ ಭಾಗವಾಗಿ ಆದಾಯ ತೆರಿಗೆ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.