ನವದೆಹಲಿ: ಏಳು ತಿಂಗಳ ಅಂತರದ ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮಮನ್ ಅವರ ಅಧ್ಯಕ್ಷತೆಯಲ್ಲಿ 43ನೇ ಸರಕು ಮತ್ತು ಸೇವಾ ತರಿಗೆಯ (ಜಿಎಸ್‌ಟಿ) ಮಂಡಳಿ ಸಭೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಿತು.
ಅನುಸರಣೆ ಹೊರೆ ಸರಾಗಗೊಳಿಸುವ ಅಮ್ನೆಸ್ಟಿ ಯೋಜನೆ ಶೇ 89ರಷ್ಟು ಜಿಎಸ್‌ಟಿ ತೆರಿಗೆದಾರರು ಸಣ್ಣ ತೆರಿಗೆದಾರರು ಈಗ ಅಮ್ನೆಸ್ಟಿ ಯೋಜನೆಯಡಿ ಬಾಕಿ ಇರುವ ತೆರಿಗೆಗಳನ್ನು ಸಲ್ಲಿಸಬಹುದು. ಇದರಿಂದ ಹೆಚ್ಚಿನ ಹೊರೆ ಆಗುವುದಿಲ್ಲ. ಸಣ್ಣ ತೆರಿಗೆದಾರರಿಗೆ ಈ ಆಯ್ಕೆ ಲಭ್ಯವಿರುತ್ತದೆ. 5 ಕೋಟಿ ರೂ.ಗಿಂತ ಹೆಚ್ಚಿನ ಆದಾಯ ಹೊಂದಿರುವ ಯಾರಿಗೂ ವಿನಾಯಿತಿ ನೀಡಲಾಗುವುದಿಲ್ಲ. ಪರಿಹಾರ ಸೆಸ್ 2022ರ ಕುರಿತು ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಖಚಿತಪಡಿಸಿಕೊಳ್ಳಲು ಜಿಎಸ್‌ಟಿ ಮಂಡಳಿ ನಂತರ ವಿಶೇಷ ಸಭೆ ಕರೆದು ಚರ್ಚಿಸಲಿದೆ ಎಂದು ಸೀತಾರಾಮನ್ ಹೇಳಿದ್ದಾರೆ.ಕಪ್ಪು ಶಿಲೀಂಧ್ರ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಆಂಫೊಟೆರಿಸಿನ್ ಬಿ ಔಷಧವನ್ನು ವಿನಾಯಿತಿ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಹೇಳಿದರು.
ಅಗತ್ಯ ವೈದ್ಯಕೀಯ ವಸ್ತುಗಳ ಮೇಲಿನ ತೆರಿಗೆ ತೆಗೆದು ಹಾಕಿ: ರಾಜ್ಯಗಳ ಕೋರಿಕೆ
ಕೋವಿಡ್-19 ಲಸಿಕೆ, ಆಮ್ಲಜನಕ ಸಿಲಿಂಡರ್, ಸಾಂದ್ರಕ, ಆಕ್ಸಿಮೀಟರ್, ಪಿಪಿಇ ಕಿಟ್, ಸ್ಯಾನಿಟೈಜರ್ ಮತ್ತು ಇತರ ಅಗತ್ಯ ವೈದ್ಯಕೀಯ ವಸ್ತುಗಳ ಮೇಲಿನ ತೆರಿಗೆಯನ್ನು ತೆಗೆದುಹಾಕಲು ನಾವು ಪ್ರಸ್ತಾಪಿಸಿದ್ದೇವೆ. ಪಂಜಾಬ್, ಬಂಗಾಳ, ಕೇರಳ ಸೇರಿದಂತೆ ಹಲವು ರಾಜ್ಯಗಳೂ ಇದೇ ವಿನಾಯಿತಿ ಕೋರಿವೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಸಂಪೂರ್ಣ ವಿನಾಯಿತಿ ಇಲ್ಲದೇ ಲಸಿಕೆಗಳು ಶೂನ್ಯ ಸ್ಲ್ಯಾಬ್ಗೆ ಇರಬಾರದು ಎಂದು ಅರ್ಥಶಾಸ್ತ್ರಜ್ಞರು ಸೂಚಿಸುತ್ತಾರೆ. ಕನಿಷ್ಠ ಶೇ 0.1ರಷ್ಟು ತೆರಿಗೆ ವಿಧಿಸಿದರೆ, ತಯಾರಕರು ಇನ್ಪುಟ್ ತೆರಿಗೆಯನ್ನು ಮರು ಪಾವತಿಸಲು ಸಾಧ್ಯವಾಗುತ್ತದೆ.
ಹಣಕಾಸು ಸಚಿವಾಲಯ ಈ ಎರಡು ಅಂಶಗಳನ್ನು ಗಣನೆಗೆ ತೆಗೆದುಕೊಂಡಿದೆ. ಶುಕ್ರವಾರದ ಸಭೆಯಲ್ಲಿ ಇವುಗಳನ್ನು ದೀರ್ಘವಾಗಿ ಚರ್ಚಿಸಲಾಗುವುದು. ಪ್ರಸ್ತುತ, ಲಸಿಕೆಗಳಿಗೆ ಶೇ 5, ಕೋವಿಡ್ ಔಷಧಗಳು ಮತ್ತು ಆಮ್ಲಜನಕ ಸಾಂದ್ರಕಗಳಿಗೆ ಜಿಎಸ್‌ಟಿ ವಿಧಿಸಲಾಗುತ್ತದೆ.
ಕೋವಿಡ್ 19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಹ್ಯಾಂಡ್ ಸ್ಯಾನಿಟೈಸರ್, ಫೇಸ್ ಮಾಸ್ಕ್, ಗ್ಲೌಸ್, ಪಿಪಿಇ ಕಿಟ್, ತಾಪಮಾನ ಸ್ಕ್ಯಾನರ್, ಆಕ್ಸಿಮೀಟರ್, ವೆಂಟಿಲೇಟರ್ ಸೇರಿದಂತೆ ಇತರೆ ಉಪಕರಣಗಳಿಗೆ ಜಿಎಸ್ಟಿಯಿಂದ ವಿನಾಯಿತಿ ನೀಡಬೇಕೆಂದು ಒತ್ತಾಯಿಸಲಾಗಿದೆ.
ಜಿಎಸ್‌ಟಿ ಪರಿಹಾರದ ಕೊರತೆ 2.69 ಲಕ್ಷ ಕೋಟಿ ರೂ.
ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ಪಾವತಿಸಬೇಕಾದ ಜಿಎಸ್‌ಟಿ ಪರಿಹಾರದ ಕೊರತೆ 2.69 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ವರ್ಷ 1.58 ಲಕ್ಷ ಕೋಟಿ ರೂ. 2021-22ರ ಬಜೆಟ್ ಜಿಎಸ್‌ಟಿ ಆದಾಯದಲ್ಲಿ 17 ಪ್ರತಿಶತದಷ್ಟು ಬೆಳವಣಿಗೆ ಪಡೆದುಕೊಂಡಿದೆ, ಇದು ಮಾಸಿಕ ಒಟ್ಟು ಜಿಎಸ್‌ಟಿ ಆದಾಯ 1.1 ಲಕ್ಷ ಕೋಟಿ ರೂ.ಯಷ್ಟಿದೆ. ಈ ಊಹೆಯ ಆಧಾರದ ಮೇಲೆ 2021ರ ಫೆಬ್ರವರಿಯಿಂದ ಜನವರಿ 2022ರ ಅವಧಿಯಲ್ಲಿ ಸಂರಕ್ಷಿತ ಆದಾಯ ಮತ್ತು ಪರಿಹಾರ ಬಿಡುಗಡೆಯ ನಂತರ ನೈಜ ಆದಾಯದ ನಡುವಿನ ಅಂತರವು ಸುಮಾರು 1.6 ಲಕ್ಷ ಕೋಟಿ ರೂ. ಆಗಲಿದೆ.