ನವದಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಸುಮಾರು 90 ನಿಮಿಷಗಳ ಕಾಲ ಆಯವ್ಯಯ ಪ್ರತಿಯನ್ನು ಲೋಕಸಭೆಯಲ್ಲಿ ಮಂಡಿಸಿದರು. ಕೇಂದ್ರದಿಂದ ಮಂಡನೆಯಾಗಿರುವ ಬಜೆಟ್ಗೆ ಪ್ರತಿಪಕ್ಷಗಳು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿವೆ.
ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಮಾಧ್ಯಮಗೋಷ್ಟಿ ನಡೆಸಿ, ಹಣಕಾಸು ಸಚಿವೆ ವಿರುದ್ಧ ನೇರ ವಾಗ್ದಾಳಿ ನಡೆಸಿದರು. ಈ ವೇಳೆ ಮಾತನಾಡಿರುವ ಅವರು, ಕೇಂದ್ರ ಸರ್ಕಾರ ಮಂಡನೆ ಮಾಡಿರುವ ಬಜೆಟ್ ಭಾರತದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಬಂಡವಾಳಶಾಹಿ ಪರವಾದ ಬಜೆಟ್ ಆಗಿದೆ ಎಂದರು. ನಿರ್ಮಲಾ ಸೀತಾರಾಮನ್ ಅವರು ಬಜೆಟ್ನಲ್ಲಿ ಕೇವಲ ಎರಡು ಸಲ 'ಬಡವರು'(poor) ಎಂಬ ಪದದ ಉಲ್ಲೇಖವಾಗಿದೆ. ಈ ಮೂಲಕ ದೇಶದಲ್ಲಿ ಬಡವರು ಇದ್ದಾರೆ ಎಂಬುದನ್ನ ನೆನಪಿಸಿಕೊಂಡಿರುವ ಅವರಿಗೆ ಧನ್ಯವಾದ ಹೇಳಬೇಕು ಎಂದು ವ್ಯಂಗ್ಯವಾಡಿದರು. ಬಡವರು ಈ ಬಜೆಟ್ ಅನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತಾರೆ ಎಂದರು.
-
Today's budget speech was the most capitalist speech to be ever read by an FM. The word 'poor' occurs only twice in para 6 & we thank FM for remembering that there are poor people in this country; people will reject this capitalist budget: Former FM &Congress leader P Chidambaram pic.twitter.com/NHBTlO46Pv
— ANI (@ANI) February 1, 2022 " class="align-text-top noRightClick twitterSection" data="
">Today's budget speech was the most capitalist speech to be ever read by an FM. The word 'poor' occurs only twice in para 6 & we thank FM for remembering that there are poor people in this country; people will reject this capitalist budget: Former FM &Congress leader P Chidambaram pic.twitter.com/NHBTlO46Pv
— ANI (@ANI) February 1, 2022Today's budget speech was the most capitalist speech to be ever read by an FM. The word 'poor' occurs only twice in para 6 & we thank FM for remembering that there are poor people in this country; people will reject this capitalist budget: Former FM &Congress leader P Chidambaram pic.twitter.com/NHBTlO46Pv
— ANI (@ANI) February 1, 2022
ಇದನ್ನೂ ಓದಿರಿ: 'ಇದೊಂದು ಶೂನ್ಯ ಬಜೆಟ್' ಎಂದ ರಾಹುಲ್ ಗಾಂಧಿಗೆ ಸೀತಾರಾಮನ್ ತಿರುಗೇಟು..
ಕೇಂದ್ರದ ಬಜೆಟ್ನಲ್ಲಿ ಮುಂದಿನ 25 ವರ್ಷಗಳ ಯೋಜನೆಯ ರೂಪುರೇಷ ಇದೆ ಎನ್ನಲಾಗ್ತಿದೆ. ಆದರೆ, ಪ್ರಸಕ್ತ ಸನ್ನಿವೇಶದ ಬಗ್ಗೆ ಯಾವುದೇ ರೀತಿಯ ಗಮನ ಹರಿಸಿಲ್ಲ. ಕೊರೊನಾ ಸಂಕಷ್ಟದ ಕಾಲದಲ್ಲಿ ಬಡವರು, ಜನಸಾಮಾನ್ಯರಿಗೆ ಯಾವುದೇ ರೀತಿಯ ಯೋಜನೆ ಘೋಷಣೆ ಮಾಡಿಲ್ಲ. ಕೇಂದ್ರ ಬಜೆಟ್ನಲ್ಲಿ ಜನಸಾಮಾನ್ಯರ ನಿರೀಕ್ಷೆ ಈಡೇರಿಸುವಲ್ಲಿ ಕೇಂದ್ರ ಸಂಪೂರ್ಣವಾಗಿ ವಿಫಲವಾಗಿದ್ದು, ಕೇವಲ ಉದ್ಯಮಿಗಳ ಪರವಾದ ಬಜೆಟ್ ಮಂಡನೆಯಾಗಿದೆ ಎಂದು ಟೀಕಿಸಿದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ