ಬೆಂಗಳೂರು: ಭಾರತದಲ್ಲಿ ಹಬ್ಬದ ಆನ್‌ಲೈನ್ ಮಾರಾಟವು ಅಕ್ಟೋಬರ್ 15 ರಿಂದ ನವೆಂಬರ್ 15 ರ ಅವಧಿಯಲ್ಲಿ ಅಂದಾಜು 8.3 ಬಿಲಿಯನ್ ಡಾಲರ್ (ಸುಮಾರು 61,253 ಕೋಟಿ ರೂ.) ಗಳಿಸಿದೆ. ಶೇಕಡಾ 65 ರಷ್ಟು (ವರ್ಷಕ್ಕೆ) ಬೆಳವಣಿಗೆಯಾಗಿದೆ ಎಂದು ಹೊಸ ವರದಿ ಶುಕ್ರವಾರ ತಿಳಿಸಿದೆ.
ಮಾರುಕಟ್ಟೆ ಸಂಶೋಧನಾ ಸಂಸ್ಥೆಯ ಪ್ರಕಾರ, ಇಡೀ ಹಬ್ಬದ ತಿಂಗಳಲ್ಲಿ ಫ್ಲಿಪ್‌ಕಾರ್ಟ್ ಗ್ರೂಪ್ ಒಟ್ಟು ಮಾರಾಟದಲ್ಲಿ ಶೇಕಡಾ 66 ರಷ್ಟು ಪಾಲನ್ನು ಹೊಂದಿದೆ. ಈ ಹಬ್ಬದ ಋತುವಿನಲ್ಲಿ ಒಟ್ಟಾರೆ ಬೆಳವಣಿಗೆ ಒಳ್ಳೆಯ ಹಂತ ತಲುಪಿದೆ. ನಾವು 7 ಬಿಲಿಯನ್ ಮಾರಾಟವನ್ನು ಮುನ್ಸೂಚನೆ ನೀಡಿದ್ದೆವು. ಕೊರೊನಾ ಆತಂಕದ ನಡುವೆಯೂ ಗ್ರಾಹಕರು ಆನ್‌ಲೈನ್‌ನಲ್ಲಿ ಶಾಪಿಂಗ್ಗೆ ಹೆಚ್ಚಾಗಿ ಒತ್ತು ನೀಡಿದ್ದಾರೆ ಎಂಬುದನ್ನು ವರದಿ ತೋರಿಸುತ್ತದೆ ಎಂದು ರೆಡ್‌ಸೀರ್ ನಿರ್ದೇಶಕ ಮೃಗಾಂಕ್ ಗುಟ್‌ಗುಟಿಯಾ ಹೇಳಿದರು.
ಈ ವರ್ಷದ ಹಬ್ಬದ ಸಮಯದಲ್ಲಿ ಕಳೆದ ವರ್ಷಕ್ಕಿಂತ 88 ಪ್ರತಿಶತದಷ್ಟು ಗ್ರಾಹಕರ ಬೆಳವಣಿಗೆ ಕಂಡು ಬಂದಿದೆ. ಇದು ಶ್ರೇಣಿ 2 ಮತ್ತು ಅದಕ್ಕಿಂತ ಹೆಚ್ಚಿನ ನಗರಗಳಿಂದ ಸುಮಾರು 40 ಮಿಲಿಯನ್ ವ್ಯಾಪಾರಿಗಳಿಂದ ಪ್ರೇರಿತವಾಗಿದೆ. ಇದಲ್ಲದೇ, ಎಲ್ಲ ಉತ್ಪನ್ನಗಳಲ್ಲಿ ಮೊಬೈಲ್‌ಗಳು ಪ್ರಾಬಲ್ಯ ಮುಂದುವರೆಸಿವೆ.
ಹಬ್ಬದ ಮಾರಾಟದ ಮೊದಲ ವಾರದಲ್ಲಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರತಿ ನಿಮಿಷಕ್ಕೆ 1.5 ಕೋಟಿ ರೂ. ಮೌಲ್ಯದ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗುತ್ತಿದ್ದವು. ಬಳಿಕ ಅವುಗಳ ಮಾರಾದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
ಹಬ್ಬದ ತಿಂಗಳಲ್ಲಿ (ಅಕ್ಟೋಬರ್ 15 ರಿಂದ ನವೆಂಬರ್ 15) ಆನ್‌ಲೈನ್ ಚಿಲ್ಲರೆ ವ್ಯಾಪಾರಿಗಳು ಮಾರಾಟದಲ್ಲಿ ಅಂದಾಜು 6.5 ಬಿಲಿಯನ್ (47,751 ಕೋಟಿ ರೂ.) ಗಳಿಸುವ ನಿರೀಕ್ಷೆಯಿದೆ ಎಂದು ಹಿಂದಿನ ವರದಿಗಳು ತಿಳಿಸಿದ್ದವು.