ಮುಂಬೈ (ಮಹಾರಾಷ್ಟ್ರ): ಮಿಶ್ರ ಜಾಗತಿಕ ಸೂಚನೆಗಳ ನಡುವೆಯೇ ಗುರುವಾರ ಮುಂಜಾನೆ ಇಕ್ವಿಟಿ ಬೆಂಚ್ಮಾರ್ಕ್ ಸೂಚ್ಯಂಕ ವಹಿವಾಟು ಗರಿಗೆದರಿದ್ದು, ಸತತ 8ನೇ ದಿನವೂ ದೇಶದ ಷೇರುಪೇಟೆಯಲ್ಲಿ ಸಕಾರಾತ್ಮಕ ಚಲನೆ ಮುಂದುವರೆದಿದೆ.
ಬೆಳಿಗ್ಗೆ 10:15ರ ಸುಮಾರಿಗೆ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 148 ಅಂಶಗಳ (ಶೇ 0.29) ಜಿಗಿತದೊಂದಿಗೆ ದಾಖಲೆಯ 51,458 ಅಂಶಗಳತ್ತ ತಲುಪಿದ್ದರೆ, ನಿಫ್ಟಿ 46 (ಶೇ 0.31) ಅಂಶಗಳು ಏರಿದ್ದು, 15,153ಕ್ಕೆ ಏರಿದೆ. ಆದರೆ, ದಿನದ ವಹಿವಾಟು ಅಂತ್ಯಗೊಳ್ಳದ ಪರಿಣಾಮ ಇನ್ನೂ ಅಂಶಗಳಲ್ಲಿ ಜಿಗಿತ ಕಾಣುವ ಸಾಧ್ಯತೆ ಇದೆ ಎನ್ನಲಾಗಿದೆ.
ನಿಫ್ಟಿ ಸ್ವಲ್ಪಮಟ್ಟಿಗೆ ಕುಸಿದರೂ ಫಾರ್ಮಾ ಮತ್ತು ಆಟೋ ಷೇರುಗಳನ್ನು ಹೊರತುಪಡಿಸಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಇತರ ವಲಯ ಸೂಚ್ಯಂಕಗಳು ಸಕಾರಾತ್ಮಕ ಬೆಳವಣಿಗೆ ಪಥದಲ್ಲಿ ಸಾಗುತ್ತಿವೆ. ನಿಫ್ಟಿ ಶೇ 08 ಮೆಟಲ್ ಮತ್ತು ಶೇ 0.5ರಷ್ಟು ಖಾಸಗಿ ಬ್ಯಾಂಕ್ಗಳ ಷೇರು ಏರಿಕೆ ಕಂಡಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಪ್ರತಿ ಷೇರಿಗೆ ಶೇ 2.1ರಷ್ಟು ಅಂದರೆ ₹2,016.75ಕ್ಕೆ ತಲುಪಿದೆ. ಮತ್ತು ಮೆಟಲ್ ಕೈಗಾರಿಕಾ ಸಂಸ್ಥೆ ಹಿಂಡಾಲ್ಕೊ ಶೇ 4ರಷ್ಟು ಅಂದರೆ ₹290.75ಕ್ಕೆ ಏರಿಕೆ ಕಂಡಿದೆ. ಬಜಾಜ್ ಫೈನಾನ್ಸ್ ಮತ್ತು ಬಜಾಜ್ ಫಿನ್‌ಸರ್ವ್ ಕ್ರಮವಾಗಿ ಶೇ 1.3 ಮತ್ತು ಶೇ 1.2ರಷ್ಟು ಹೆಚ್ಚಳ ಕಂಡಿದೆ. ಗೇಲ್, ಭಾರ್ತಿ ಏರ್‌ಟೆಲ್, ಅದಾನಿ ಪೋರ್ಟ್ಸ್, ಆಕ್ಸಿಸ್ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಲೈಫ್ ಸೇರಿದಂತೆ ಪ್ರಮುಖ ಸಂಸ್ಥೆಗಳು ಲಾಭ ಗಳಿಕೆಯತ್ತ ಸಾಗಿವೆ.
ಐಚರ್ ಮೋಟಾರ್ಸ್ ಶೇ 3.9 ಮತ್ತು ಹೀರೋ ಮೊಟೊಕಾರ್ಪ್ ಷೇರುಗಳಲ್ಲಿ ಶೇ1.2ರಷ್ಟು ಕುಸಿತ ಕಂಡಿದ್ದು, ಟೈಟನ್, ವಿಪ್ರೋ, ಇನ್ಫೋಸಿಸ್, ಒಎನ್‌ಜಿಸಿ ಮತ್ತು ಎಚ್‌ಡಿಎಫ್‌ಸಿ ಷೇರುಗಳು ಸಹ ಅದೇ ಹಾದಿಯಲ್ಲಿ ಸಾಗಿವೆ. ಏಷ್ಯಾದ ಷೇರುಗಳು ದಾಖಲೆಯ ಗರಿಷ್ಠ ಮಟ್ಟದಲ್ಲಿ ಏರಿಕೆಯತ್ತ ಸಾಗುತ್ತಿದ್ದರೆ, ಚೀನಾ, ಜಪಾನ್, ದಕ್ಷಿಣ ಕೊರಿಯಾ, ತೈವಾನ್ ಷೇರು ಮಾರುಕಟ್ಟೆಗಳು ಮತ್ತು ಏಷ್ಯಾ ಪೆಸಿಫಿಕ್ ಷೇರುಗಳ ಸೂಚ್ಯಂಕ ಶೇ 0.1ರಷ್ಟು ಕಡಿಮೆಯಾಗಿದೆ.