ನವದೆಹಲಿ: 2021-22ನೇ ಸಾಲಿನ ಉದ್ಯೋಗಿಗಳ ಭವಿಷ್ಯ ನಿಧಿ ಬಡ್ಡಿ ದರದಲ್ಲಿ ಇಳಿಕೆ ಮಾಡಲಾಗಿದ್ದು, ಶೇ. 8.5ರಿಂದ ಶೇ. 8.1ಕ್ಕೆ ಬಡ್ಡಿ ದರ ಇಳಿಸಲಾಗಿದೆ. ಕಳೆದ ನಾಲ್ಕು ದಶಕದಲ್ಲೇ ಇದು ಕನಿಷ್ಠ ಮಟ್ಟದ ಬಡ್ಡಿ ದರವಾಗಿದೆ. ಇದರಿಂದ ವೇತನದಾರರಿಗೆ ಕಹಿ ಸುದ್ದಿ ಸಿಕ್ಕಿದೆ.
ಗುವಾಹಟಿಯಲ್ಲಿ ನಡೆದ ನೌಕರರ ಭವಿಷ್ಯ ನಿಧಿ ಸಂಸ್ಥೆಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ವೇತನದಾರರಿಗೆ ವಾರ್ಷಿಕವಾಗಿ ಶೇ. 8.1ರಷ್ಟು ಬಡ್ಡಿ ದರ ನೀಡಲು ಶಿಫಾರಸು ಮಾಡಿದೆ. ಕಳೆದ ವರ್ಷದ ಮಾರ್ಚ್ನಲ್ಲಿ ನಡೆದ ಸಭೆಯಲ್ಲಿ 2022-21ನೇ ಸಾಲಿಗೆ ಶೇ. 8.5ರಷ್ಟು ಬಡ್ಡಿ ದರ ಶಿಫಾರಸು ಮಾಡಿತ್ತು. ಆದರೆ, ಈ ಬಾರಿ ಇದರಲ್ಲಿ ಶೇ. 0.4ರಷ್ಟು ಕಡಿತಗೊಳಿಸಿದೆ.
1977-78ರ ಬಳಿಕ ಇಷ್ಟೊಂದು ಕಡಿಮೆ ಬಡ್ಡಿ ದರ ನೀಡುತ್ತಿರುವುದು ಇದೇ ಮೊದಲಾಗಿದ್ದು, ಆಗ ಇಪಿಎಫ್ ಬಡ್ಡಿ ದರ ಶೇ. 8ರಷ್ಟಿತ್ತು. ಕಳೆದ ಎರಡು ವರ್ಷದಲ್ಲಿ ಕೋವಿಡ್ ಸಂಕಷ್ಟ ಉಂಟಾಗಿದ್ದರಿಂದ ಲಕ್ಷಾಂತರ ಜನರು ಇಪಿಎಫ್ನಿಂದ ಹಣ ಪಡೆದುಕೊಂಡಿದ್ದರು. ಇದರ ಹೊರತಾಗಿ ಕೂಡ 2019-20 ಹಾಗೂ 2020-21ರಲ್ಲಿ ಬಡ್ಡಿ ದರ ಶೇ. 8.5ರಷ್ಟು ಉಳಿಸಿಕೊಳ್ಳಲಾಗಿತ್ತು.
ಇದನ್ನೂ ಓದಿರಿ: ಹೊಸ ಗ್ರಾಹಕರನ್ನು ತೆಗೆದುಕೊಳ್ಳದಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಆರ್‌ಬಿಐ ಸೂಚನೆ
ವಿಶೇಷವೆಂದರೆ 2015-16ರಲ್ಲಿ ಇಪಿಎಫ್ ಬಡ್ಡಿ ದರ ಶೇ. 8.8ರಷ್ಟಿತ್ತು. ನಂತರ 2013-14ರಲ್ಲಿ ಶೇ. 8.75ಕ್ಕೆ ಇಳಿಕೆ ಮಾಡಲಾಗಿತ್ತು.