ಬೆಂಗಳೂರು: ರಾಜ್ಯ ಸರ್ಕಾರವು ಎಲೆಕ್ಟ್ರಿಕ್ ವಾಹನಗಳಿಗೆ (ಇವಿ) ನಗರದಲ್ಲಿ 112 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿದೆ. ಇದು ಸಿಲಿಕಾನ್ ಸಿಟಿಗರಿಗೆ ಇಂಧನ ಆಧಾರಿತ ಕಾರುಗಳಿಂದ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನೆ ನೀಡುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
112 ನಿಲ್ದಾಣಗಳ ಪೈಕಿ 12 ಡಿಸಿ (ಡೈರೆಕ್ಟ್ ಕರೆಂಟ್) ಫಾಸ್ಟ್ ಚಾರ್ಜಿಂಗ್ ಪಾಯಿಂಟ್‌ಗಳು ಮತ್ತು 100 ಸ್ಕೂಟರ್, ಆಟೋ ಮತ್ತು ಕಾರು ಸೇರಿದಂತೆ ಇವಿಗಳಿಗೆ ಎಸಿ (ಪರ್ಯಾಯ ಕರೆಂಟ್) ಪಾಯಿಂಟ್ಗಳನ್ನು ಸ್ಥಾಪಿಸಲಾಗಿದೆ ಎಂದು ಬೆಸ್ಕಾಂನ ಅಧಿಕಾರಿಯೊಬ್ಬರು ಐಎಎನ್‌ಎಸ್ ಸುದ್ದಿಸಂಸ್ಥೆಗೆ ತಿಳಿಸಿದರು.
ಚಾರ್ಜಿಂಗ್ ಕೇಂದ್ರಗಳನ್ನು ಬೆಸ್ಕಾಂ ಕಚೇರಿಗಳು, ಸಂಚಾರ ಸಾರಿಗೆ ನಿರ್ವಹಣಾ ಕೇಂದ್ರದ (ಟಿಟಿಎಂಸಿ) ಕಟ್ಟಡಗಳು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸಂಕೀರ್ಣ, ಮೈಸೂರು ರಸ್ತೆಯ ಕೆಎಸ್ಆರ್ಟಿಸಿ ಟರ್ಮಿನಲ್ ಮತ್ತು ಪೀಣ್ಯ ಟರ್ಮಿನಲ್, ನಾಗರಿಕ ವಾರ್ಡ್ ಕಚೇರಿ, ಆರ್ಟಿಒ ಮತ್ತು ಕೆಐಎಡಿಬಿ ಜಿಗಣಿ ಕಚೇರಿಗಳ ಬಳಿ ತಲೆಯೆತ್ತಿವೆ.
70 ಲಕ್ಷ ಇಂಧನ ವಾಹನಗಳಿಗೆ ಹೋಲಿಸಿದರೆ ನಗರದಲ್ಲಿ ಕೇವಲ 12,000 ಇವಿಗಳಿದ್ದರೂ ಚಾರ್ಜಿಂಗ್ ಪಾಯಿಂಟ್‌ಗಳು ಹೆಚ್ಚು ಸಹಾಯಕವಾಗಲಿವೆ. ಶೂನ್ಯ ಹೊಗೆ ಹೊರಸೂಸುವಿಕೆ ಹೊಂದಿದ್ದು, ಪೆಟ್ರೋಲ್ ಅಥವಾ ಡೀಸೆಲ್‌ಗಿಂತ ಅಗ್ಗವಾಗಿವೆ ಎಂದು ಅಧಿಕಾರಿ ಹೇಳಿದರು.
ಗಂಟೆಗೆ 60 ಕಿ.ಮೀ ವೇಗದಲ್ಲಿ ನಗರದಾದ್ಯಂತ ವಾಹನ ಸಂವರಿಸುತ್ತವೆ. ನಗರ ಮತ್ತು ರಾಜ್ಯಾದ್ಯಂತ ಇವಿಗಳ ಬಳಕೆಯನ್ನು ಉತ್ತೇಜಿಸಲು ರಾಜ್ಯ ಸಾರಿಗೆ ಮತ್ತು ಪೊಲೀಸ್ ಇಲಾಖೆಗಳು ಬೆಂಬಲ ನೀಡುತ್ತಿವೆ.
ಇವಿ ಬಳಕೆದಾರರಿಗೆ ನೆರವಾಗುವುದರ ಜೊತೆಗೆ ಬ್ಯಾಟರಿ ಚಾರ್ಜಿಂಗ್ ಪಾಯಿಂಟ್‌ಗಳ ವಾಹನಗಳ ಉಪಯೋಗದ ಬಗ್ಗೆ ಜಾಗೃತಿ ಮೂಡಿಸುತ್ತವೆ. ಜನರಿಗೆ ಅದರ ಅನುಕೂಲಗಳ ಬಗ್ಗೆ ತಿಳುವಳಿಕೆ ನೀಡುತ್ತದೆ. ನಗರದಾದ್ಯಂತ ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡುತ್ತದೆ ಎಂದು ಅಧಿಕಾರಿ ಹೇಳಿದರು.
ಎಸಿ ನಿಧಾನ ಚಾರ್ಜಿಂಗ್‌ನ ಪ್ರತಿ ಯೂನಿಟ್‌ಗೆ 7.30 ರೂ., ಡಿಸಿ ಚಾರ್ಜಿಂಗ್‌ಗೆ ಪ್ರತಿ ಯೂನಿಟ್ ಬೆಲೆ 7.42 ರೂ. ಮತ್ತು ಫಾಸ್ಟ್ ಚಾರ್ಜಿಂಗ್‌ನ ಪ್ರತಿ ಯೂನಿಟ್‌ಗೆ 7.99 ರೂ. ದರ ವಿಧಿಸಲಾಗಿದೆ.