ನವದೆಹಲಿ: ಕೋವಿಡ್ -19 ಲಸಿಕೆ ಹಾಕಿಸಿಕೊಂಡ ಗ್ರಾಹಕರಿಗೆ ಈಸಿ ಟ್ರಿಪ್ ಪ್ಲಾನರ್ಸ್ ಲಿಮಿಟೆಡ್ (ಈಸಿಮೈಟ್ರಿಪ್) ವಿಶೇಷ ಪ್ರಯಾಣ ರಿಯಾಯಿತಿ ಪ್ರಕಟಿಸಿದೆ.
ಈಸಿಮೈಟ್ರಿಪ್‌ನ ವೆಬ್‌ಸೈಟ್, ಮೊಬೈಲ್ ಸೈಟ್, ಆಂಡ್ರಾಯ್ಡ್ ಮತ್ತು ಐಒಎಸ್ ಆ್ಯಪ್ ಮೂಲಕ ವಿಮಾನ, ಹೋಟೆಲ್ ಮತ್ತು ಬಸ್ ಬುಕಿಂಗ್‌ನಲ್ಲಿ ಹೊಸ ಮತ್ತು ಈಗಿನ ಗ್ರಾಹಕರಿಗೆ ಪ್ರಯಾಣ ರಿಯಾಯಿತಿ ನೀಡಲಾಗುವುದು.
ಪ್ರಯಾಣದ ಬುಕಿಂಗ್‌ನಲ್ಲಿ ಈ ಕೊಡುಗೆ ಪಡೆಯಬಹುದು. ಇದು 2021ರ ಜೂನ್ 30ರವರೆಗೆ ಮಾನ್ಯವಾಗಿರುತ್ತದೆ ಎಂದು ಈಸಿಮೈಟ್ರಿಪ್ ಪ್ರಕಟಣೆಯಲ್ಲಿ ತಿಳಿಸಿದೆ.
ಈಸ್‌ಮೈಟ್ರಿಪ್ ಸಿಇಒ ಮತ್ತು ಸಹ - ಸಂಸ್ಥಾಪಕ ನಿಶಾಂತ್ ಪಿಟ್ಟಿ ಮಾತನಾಡಿ, ಈ ಆಫರ್ ಮೂಲಕ ಜನರು ತಮ್ಮ ಲಸಿಕೆ ಪಡೆಯಲು ಪ್ರೋತ್ಸಾಹಿಸುವ ಗುರಿ ಹೊಂದಿದ್ದೇವೆ. ಇದರಿಂದ ಅವರು ಅಂತಿಮವಾಗಿ ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಮತ್ತೆ ಒಂದಾಗಬಹುದು. ಬಹುನಿರೀಕ್ಷಿತ ರಜೆಗೆ ತೆರಳಲು ಅಣಿಯಾಗಬಹುದು ಎಂದರು.