ETV Bharat / business

2019ರ  ಸುಲಲಿತ ವ್ಯಾಪಾರ​ ಪಟ್ಟಿಯಲ್ಲಿ ಭಾರಿ ಜಿಗಿತ:  77 ರಿಂದ 63ಕ್ಕೆ ಏರಿಕೆ!

author img

By

Published : Oct 24, 2019, 11:05 AM IST

Updated : Oct 24, 2019, 4:07 PM IST

ವಿಶ್ವಬ್ಯಾಂಕ್​ ಪ್ರತಿ ವರ್ಷ ಬಿಡುಗಡೆ ಮಾಡುವ ಸುಲಲಿತ ವ್ಯಾಪಾರ ​ಪಟ್ಟಿ ಪ್ರಕಟವಾಗಿದೆ. ಈ ಪಟ್ಟಿಯಲ್ಲಿ ಭಾರತವು ಈ ಬಾರಿ 14 ಸ್ಥಾನದಲ್ಲಿ ಮುನ್ನಡೆದಿದೆ. ಕಳೆದ ವರ್ಷ 77 ಸ್ಥಾನದಲ್ಲಿದ್ದ ಭಾರತ ಈ ವರ್ಷ 63ನೇ ಸ್ಥಾನಕ್ಕೆ ಜಿಗಿದಿದೆ.

ಕೃಪೆ : ಎಎನ್​ಐ

ವಿಶ್ವ ಬ್ಯಾಂಕ್​ ಬಿಡುಗಡೆ ಮಾಡುವ ವಾರ್ಷಿಕ ಈಜಿ ಡೂಯಿಂಗ್​ ಬ್ಯುಸಿನೆಸ್( ಸುಲಲಿತ ವ್ಯಾಪಾರ​ ಪಟ್ಟಿ) ಪಟ್ಟಿ ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ಭಾರತವು 14 ಸ್ಥಾನ ಏರಿಕೆ ಕಂಡು 63ನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಕಳೆದ ವರ್ಷ 77 ಸ್ಥಾನದಲ್ಲಿದ್ದ ಭಾರತ ಈ ವರ್ಷ 63ನೇ ಸ್ಥಾನಕ್ಕೆ ಜಿಗಿದಿದೆ.

ಇನ್ನು ಈ ಬಾರಿಯೂ ಈಜಿ ಡೂಯಿಂಗ್​ ಬ್ಯುಸಿನೆಸ್​ ಪಟ್ಟಿಯ ಪ್ರಮುಖ 10 ದೇಶಗಳ​ ಪಟ್ಟಿಯಲ್ಲಿ ಭಾರತವೂ ಇದೆ. ಇದನ್ನು ಸೇರಿ ಒಟ್ಟು ಮೂರು ಬಾರಿ ಟಾಪ್​ ಟೆನ್​ ಪಟ್ಟಿಯಲ್ಲಿ ಭಾರತ ಸೇರ್ಪಡೆಯಾಗಿದೆ.

ಈಜಿ ಡೂಯಿಂಗ್​ ಬ್ಯುಸಿನೆಸ್​ ಪಟ್ಟಿಯನ್ನು ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ, ವರ್ಲ್ಡ್​​ ಬ್ಯಾಂಕ್​​, ಐಎಂಎಫ್​​ ಮತ್ತು ಹಲವಾರು ರೇಟಿಂಗ್​ ಏಜೆನ್ಸಿಗಳು ಸೇರಿಕೊಂಡು ಸಿದ್ಧ ಪಡಿಸುತ್ತವೆ. ಈ ಪಟ್ಟಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಗಳು ಆರ್ಥಿಕವಾಗಿ ಯಾವ ಸ್ಥಿತಿಯಲ್ಲಿವೆ ಎಂಬುದು ತಿಳಿಯುತ್ತದೆ.

2014ರಲ್ಲಿ ಭಾರತವು 190 ದೇಶಗಳಲ್ಲಿ 142ನೇ ಸ್ಥಾನದಲ್ಲಿತ್ತು. 2017ರಲ್ಲಿ 130ಕ್ಕೆ ಏರಿಕೆಯಾಯಿತು. ಇನ್ನು ಕಳೆದ ವರ್ಷ ಒಂದೇ ಬಾರಿ 23 ಸ್ಥಾನಗಳಲ್ಲಿ ಮೇಲೇರಿತು.

ಈ ಪಟ್ಟಿಯಲ್ಲಿ ಸ್ಥಾನಗಳನ್ನು ಗಿಟ್ಟಿಸಿಕೊಂಡರೆ ಅಂತಾರಾಷ್ಟ್ರೀಯ ಕಂಪನಿಗಳು ದೇಶದಲ್ಲಿ ಹೂಡಿಕೆ ಮಾಡಲು ಸಹಕಾರಿಯಾಗುತ್ತದೆ ಮತ್ತು ಬಹುರಾಷ್ಟ್ರೀಯ ಕಂಪನಿಗಳು ಹೂಡಿಕೆ ಮಾಡಲು ಆಸಕ್ತಿ ತೋರುತ್ತವೆ. ಡೂಯಿಂಗ್​ ಬ್ಯುಸಿನೆಸ್​ನಲ್ಲಿ ಭಾರತವು ಉನ್ನತ ಮಟ್ಟಕ್ಕೆ ಬರಲು, ಮುಂಬೈ, ಬೆಂಗಳೂರು, ಕೊಲ್ಕತ್ತಾ ಸೇರಿದಂತೆ ದೊಡ್ಡ ದೊಡ್ಡ ನಗರಗಳ ಪಾತ್ರ ಹಿರಿದಾಗಿದೆ. ಅಲ್ಲದೆ ಮೋದಿ ತಂದ 'ಮೇಕಿಂಗ್​ ಇಂಡಿಯಾ' ಕೂಡ ಇದಕ್ಕೆ ಹೆಗಲು ಕೊಟ್ಟಿದೆ.

Intro:Body:

gvssfsf

Conclusion:
Last Updated : Oct 24, 2019, 4:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.